ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಜ್ಞಾನದ ಊಟ
ಬೆಂಗಳೂರು, , ಜನವರಿ, 11: ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಜ್ಞಾನದ ಊಟ. ಹುಡುಕಿದಷ್ಟು ಮುಗಿದ ಸಾಹಿತ್ಯ ಭಂಡಾರ. ಭೇಟಿ ನೀಡಿದವರಿಗೊಂದು ಉಚಿತ ಪುಸ್ತಕದ ಕೊಡುಗೆ.
ನಿಮ್ಮ ಮನೆಯಲ್ಲಿ ಹಳೆಯ ಪುಸ್ತಕಗಳಿದ್ದರೆ ದಯವಿಟ್ಟು ಅದನ್ನು ತೂಕಕ್ಕೆ ಹಾಕಬೇಡಿ. ಮತ್ತೊಬ್ಬರ ಜ್ಞಾನ ವೃದ್ಧಿಸಲು ಅದು ನೆರವಾಗಬಲ್ಲದು ಎಂಬ ಮಾತನ್ನು ಪುಸ್ತಕ ಪರಿಷೆ ಹೇಳುತ್ತಿತ್ತು. ಮೇಳಕ್ಕೆ ಭೇಟಿ ನೀಡಿದವರಿಗೆ ಒಂದು ಪುಸ್ತಕ ಉಚಿತ ನೀಡಲಾಗುತ್ತಿದೆ.[ಡಿವಿಜಿ ಮಂಕುತಿಮ್ಮನ ಕಗ್ಗಕ್ಕೆ ಸರಳ ಕನ್ನಡದ ಸ್ಪರ್ಶ]
ಜನವರಿ 11ರ ವರೆಗೆ (ಸೋಮವಾರ) ಸಂಜೆವರೆಗೆ ಪುಸ್ತಕ ಹಬ್ಬ ನಡೆಯಲಿದೆ. 'ಸೃಷ್ಟಿ ವೆಂಚರ್ಸ್' ಆಯೋಜಿಸಿರುವ ಪುಸ್ಕ ಪರಿಷೆಗೆ ಸಾಹಿತ್ಯ ಪ್ರೇಮಿಗಳು, ವಿದ್ಯಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಮಹಾನಗರಿಯ ಜನರಲ್ಲಿ ಸಾಹಿತ್ಯ ಪ್ರೇಮ ಕಡಿಮೆಯಾಗುತ್ತಿದೆ ಎಂಬ ಮಾತನ್ನು ಪುಸ್ತಕ ಪರಿಷೆ ಸುಳ್ಳು ಎಂದು ಸಾರಿ ಹೇಳಿದೆ. ಬನ್ನಿ ಪುಸ್ತಕ ಪರಿಷೆಯಲ್ಲಿ ನಾವು ಒಂದು ಸುತ್ತು ಹಾಕಿಕೊಂಡು ಬರೋಣ...

ಯಾವ ಪುಸ್ತಕಗಳಿವೆ
ಪಂಪನಿಂದ ಹಿಡಿದು ಆಧುನಿಕ ಯುವ ಕವಿ, ಸಾಹಿತಿಗಳವರೆಗೆ, ಆಧ್ಯಾತ್ಮದಿಂದ ಆಧುನಿಕ ಆವಿಷ್ಕಾರಗಳ ವರೆಗೆ, ಅಡುಗೆ ಮನೆಯಿಂದ ಅಂತರಿಕ್ಷದವರೆಗೆ, ಅಂತರಂಗದ ಒಳತೋಟಿಗಳಿಂದ ಹಿಡಿದು ಬಹಿರಂಗದ ಪ್ರವಚನಗಳವರೆಗೆ ಹೀಗೆ ಅಲ್ಲಿ ಬಗೆ ಬಗೆಯ ಪುಸ್ತಕಗಳು ಲಭ್ಯ.

ಭರಪೂರ ಯಶಸ್ಸು
ಜನರ ಪ್ರತಿಕ್ರಿಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮುಂದೆ ಇದನ್ನು ವಾರಗಳ ಕಾಲ ನಡೆಸುವ ಉದ್ದೇಶವಿದೆ. ಇಲ್ಲಿಗೆ ಭೇಟಿ ನೀಡಲು ಸಾಧ್ಯವಾಗದವರು ನೇರವಾಗಿ ನಮ್ಮ ಕಚೇರಿಗೆ ಬರಬಹುದು ಎಂದು ಪರಿಷೆಯ ಸಂಘಟಕ ನಾಗರಾಜ್ ನಾವುಂದ ಹೇಳಿದರು.(ದೂ. 9945003479)

ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗು
ಒಂದೆಡೆ ಯಾವ ಪುಸ್ತಕ ತೆಗೆದುಕೊಳ್ಳಬೇಕು ಎಂದು ನಾವು ಹುಡುಕುತ್ತಿದ್ದರೆ, ಮತ್ತೊಂದೆಡೆ ಕಿವಿಗೆ ಇಂಪಾದ ಸಂಗೀತ. ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿರುತ್ತವೆ ಎಂದು ಸಂಘಟಕರು ತಿಳಿಸಿದರು.

ಟ್ರಾಫಿಕ್ ಪೊಲೀಸ್ ಮಾಹಿತಿ
ಪುಸ್ತಕ ಮೇಳದಲ್ಲಿ ಟ್ರಾಫಿಕ್ ಪೊಲೀಸರು ಅಪಘಾತ ತಡೆ, ಕಾನೂನು ಪಾಲನೆ ಬಗ್ಗೆ ಮಾಹಿತಿ ನೀಡಿದ್ದು ವಿಶೇಷವಾಗಿತ್ತು. ಜನರೊಂದಿಗೆ ನೇರವಾಗಿ ಬೆರೆತ ಟ್ರಾಫಿಕ್ ಪೊಲೀಸರು ಅನೇಕ ಅನುಮಾನಗಳಿಗೆ, ಪ್ರಶ್ನೆಗೆ ಉತ್ತರಿಸಿದರು.

ಕಿಂಚಿತ್ತು ಹಣ ಪುಸ್ತಕಕ್ಕೆ ಮೀಸಲಿಡಿ
ಪ್ರತಿಯೊಬ್ಬರೂ ಪುಸ್ತಕ ಕೊಂಡು ಓದಬೇಕು. ಅದು ಯಾವುದೇ ಭಾಷೆಯದ್ದಾಗಿರಲಿ. ಇತರೆ ಕಾರ್ಯಗಳಿಗೆ ಖರ್ಚು ಮಾಡುವ ಹಣದಲ್ಲಿ ಶೇ. 10 ರಷ್ಟನ್ನಾದರೂ ಪುಸ್ತಕ ಖರೀದಿಗೆ ವಿನಿಯೋಗಿಸಬೇಕು ಎಂದು ಲೇಕಖ ಗಿರಿಮನೆ ಶ್ಯಾಮರಾವ್ ಹೇಳಿದರು.
ಗಣಿತ ಕಬ್ಬಿಣದ ಕಡಲೆಯಲ್ಲ
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications