ಕಸ ಹೊತ್ತಿ ಉರಿದೊಡೆ ಅಡುಗೆ ಮಾಡಿದರೆ ಎಂತಯ್ಯ!

ಬೆಂಗಳೂರು, ಜು. 20: ಇನ್ನು ಅಡಿಗೆ ಮಾಡಲು ಗ್ಯಾಸ್, ಕಟ್ಟಿಗೆ, ಸ್ಟೌವ್ ಯಾವುದರ ಅಗತ್ಯವಿಲ್ಲ. ಕಸ ತಂದು ಒಲೆಗೆ ಹಾಕಿದರಾಯ್ತು. ಅಷ್ಟೇ ಏಕೆ ಬೆಂಕಿ ಹಚ್ಚುವ ಕೆಲಸವೂ ಇಲ್ಲ, ತನ್ನಿಂದ ತಾನೇ ಅದು ಹೊತ್ತಿಕೊಳ್ಳುತ್ತದೆ!

ಯಾಕೆ , ಆಶ್ಚರ್ಯವಾಗುತ್ತಿದೆಯಾ? ಇದು ಯಾವ ಹೊಸ ಸಂಶೋಧನೆಯಲ್ಲ. ಪರಿಸರ ಮಾಲಿನ್ಯದ ಪ್ರತೀಕ. ವರ್ತೂರು ಕೆರೆ, ಬೆಳ್ಳಂದೂರು ಕೆರೆಯಲ್ಲಿ ರಾಸಾಯನಿಕಗಳಿಂದ ಕಾಣಿಸಿಕೊಂಡಿದ್ದ ಬೆಂಕಿಯ ರೀತಿಯದ್ದೇ ಪ್ರಕರಣ ಆನೆಕಲ್ ನ ಲಕ್ಷ್ಮೀಪುರದ ಕಲ್ಲು ಕ್ವಾರಿಯೊಂದರ ಬಳಿ ಕಂಡುಬಂದಿದೆ.[ಒಡಲಲಿ ವಿಷ ತುಂಬಿಕೊಂಡ ಬೆಳ್ಳಂದೂರು ಕೆರೆಯ ಕಥೆ ವ್ಯಥೆ]

bengaluru

ನೀರಿನಲ್ಲಿಯೂ ಬೆಂಕಿ ಉತ್ಪನ್ನವಾಗುತ್ತಿದೆ. ರಾಸಾಯನಿಕ ಕ್ರಿಯೆಯಿಂದ ವಿಷಾನಿಲ ಉತ್ಪತ್ತಿಯಾಗಿ, ಅದರಿಂದ ನೀರಿಲ್ಲೇ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದರೆ ಚಿಂದಿ ಆಯುವ ಕುಟುಂಬಗಳು ಇದರಲ್ಲೇ ಅಡುಗೆ ಮಾಡುತ್ತಿದ್ದಾರೆ. [ನೊರೆ ಭಯಾನಕತೆ ತೋರಿಸುವ ವಿಡಿಯೋ ನೋಡಿ]

ಕಳೆದ ನಾಲ್ಕು ದಿನಗಳಿಂದ ಬೆಂಕಿ ಕಾಣಿಸಿಕೊಳ್ಳುತ್ತಿದ್ದರು ಯಾವ ಅಧಿಕಾರಿಗಳು ಇನ್ನು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಮಾಹಿತಿ ಕಲೆಹಾಕಿ ತಕ್ಷಣ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕ ಎಂ ಕೃಷ್ಣಪ್ಪ ತಿಳಿಸಿದ್ದಾರೆ.

ಹಿಂದೆ ಬಿಬಿಎಂಪಿಯವರು ಈ ಜಾಗದಲ್ಲಿ ಕಸ ತಂದು ಸುರಿಯುತ್ತಿದ್ದರು. ಅದರ ಪರಿಣಾಮ ಬಯೋಗ್ಯಾಸ್ ಉತ್ಪತ್ತಿಯಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಸಮಸ್ಯೆಯ ಮೂಲ ಕಂಡುಹಿಡಿದು ತಕ್ಷಣ ಪರಿಹಾರ ನೀಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+