ಬೆಂಗಳೂರಲ್ಲಿ ಯುವತಿಯರು ಮಾತ್ರವಲ್ಲ, ಯುವಕರೂ ಅಸುರಕ್ಷಿತ!

ಬೆಂಗಳೂರು, ಅಕ್ಟೋಬರ್. 07: ಬೆಂಗಳೂರಿನಲ್ಲಿ ಮಹಿಳೆಯರು ಮಾತ್ರವಲ್ಲ. ಪುರುಷರು ಸುರಕ್ಷಿತರಲ್ಲ. ಹೌದು...ಇಡೀ ನಗರವನ್ನು ಅಷ್ಟೇ ಏಕೆ ರಾಜ್ಯವನ್ನೇ ಬೆಚ್ಚಿ ಬಿಳಿಸುವಂಥ ಪ್ರಕರಣ ನಡೆದು ಹೋಗಿದೆ.

ವಿಕೃತ ಕಾಮಿಗಳ ದಾಹಕ್ಕೆ ಕಾಲ್ ಸೆಂಟರ್ ಯುವಕರು ಬಲಿಯಾಗಿದ್ದಾರೆ. ಮೈಕೋ ಲೇಔಟ್​ ಠಾಣಾ ವ್ಯಾಪ್ತಿಯಲ್ಲಿ ಕಾಲ್​ ಸೆಂಟರ್​ ಯುವಕರ ಮೇಲೆ ಮತ್ತೊಂದು ಯುವಕರ ಗುಂಪು ಗ್ಯಾಂಗ್ ರೇಪ್​ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.[ಬಿಪಿಒ ಉದ್ಯೋಗಿ ರೇಪ್ ಕೇಸ್ : ಪೊಲೀಸ್ ಆಯುಕ್ತರು ಹೇಳಿದ್ದಿಷ್ಟು]

bengaluru

ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಯುವಕರಿದ್ದ ವಾಹನವನ್ನು ತಡೆದ ಕಾಮಾಂಧರು ಒಳಗಿದ್ದ ಇಬ್ಬರು ಯುವಕರ ಮೇಲೆ ವಿಕೃತಕಾಮ ತೀರಿಸಿಕೊಂಡಿದ್ದಾರೆ. ಸೆಪ್ಟೆಂಬರ್ 29ರಂದು ಮೈಕೋ ಲೇಔಟ್‌ನ 16ನೇ ಮುಖ್ಯ ರಸ್ತೆಯಲ್ಲಿ ಪ್ರಕರಣ ನಡೆದಿದ್ದು ದೂರು ದಾಖಲಾಗಿದೆ. ಅತ್ಯಾಚಾರ ಎಸಗಿದ ಕಾಮಾಂಧರು ಬಳಿಕ ಕಾಲ್ ಸೆಂಟರ್​ ಉದ್ಯೋಗಿಗಳ ಬಳಿಯಿದ್ದ ಮೊಬೈಲ್, ಲ್ಯಾಪ್ ಟಾಪ್ ದೋಚಿ ಪರಾರಿಯಾಗಿದ್ದಾರೆ.[ಬೆಂಗಳೂರು : ಕಾಲ್ ಸೆಂಟರ್ ಉದ್ಯೋಗಿ ಮೇಲೆ ಗ್ಯಾಂಗ್ ರೇಪ್]

ಟಿಟಿ ವಾಹನದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣ ಮಾಸುವ ಮುಂಚೆಯೇ ಅಂಥಹುದೇ ಮತ್ತೊಂದು ವಿಕೃತಿ ಬಯಲಿಗೆ ಬಂದಿದ್ದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅತ್ಯಾಚಾರದ ನಂತರ ಯುವಕರು ಮೈಕೋ ಲೇಔಟ್ ಠಾಣೆಗೆ ದೂರು ನೀಡಿ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆ, ದರೋಡೆ ಮುಂತಾದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+