ಬೆಂಗಳೂರಿನ ಹೃದಯಭಾಗದಲ್ಲಿ ವೇಶ್ಯಾವಾಟಿಕೆ ದಂಧೆ: ಯೂಟ್ಯೂಬರ್ ವೈರಲ್ ವಿಡಿಯೋ ಇಲ್ಲಿದೆ!

ಬೆಂಗಳೂರಿನ ಹೃದಯ ಭಾಗ ಎಂದೇ ಖ್ಯಾತಿ ಗಳಿಸಿರುವ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)ನಲ್ಲಿ ಅವ್ಯಾತವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಆರೋಪ ಇಂದು - ನೆನ್ನೆಯದಲ್ಲ. ಹಲವು ವರ್ಷಗಳಿಂದ ಮೆಜೆಸ್ಟಿಕ್ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಲ್ಲೇ ಇವೆ. ಇದೀಗ ಈ ವಿಷಯವಾಗಿ ವಿಡಿಯೋವೊಂದು ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಯೂಟ್ಯೂಬರ್ ವಿಕಾಸ್ ಗೌಡ (Vikas Gowda) ಅವರ ವಿಡಿಯೋ ವೈರಲ್ ಆಗುತ್ತಿದೆ. ಹಲವು ಶಾಕಿಂಗ್ ವಿಚಾರಗಳು ಈ ವಿಡಿಯೋದಲ್ಲಿ ಬಹಿರಂಗವಾಗಿದೆ. ವೈರಲ್ ವಿಡಿಯೋ ಡಿಟೆಲ್ಸ್‌ ಇಲ್ಲಿದೆ.

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ಇದರ ಹಿಂದೆ ಕರಾಳವಾದ ದಂಧೆ ಇದೆ ಎನ್ನುವ ಮಾತುಗಳು ಪದೇ ಪದೇ ಕೇಳಿ ಬರುತ್ತಿವೆ. ಇದೀಗ ಮೆಜೆಸ್ಟಿಕ್‌ನ ಜನನಿಬಿಡ ಪ್ರದೇಶದಲ್ಲಿ ನಡೆಯುವ ಈ ದಂಧೆಯ ಕರಾಳ ಸತ್ಯಗಳು ಬಯಲಾಗಿವೆ. ಯೂಟ್ಯೂಬರ್‌ವೊಬ್ಬರ ಮಾಡಿರುವ ವಿಡಿಯೋಗೆ ಮೆಜೆಸ್ಟಿಕ್‌ನಲ್ಲಿ ನೂರಾರು ಜನ ಬೆಂಬಲ ನೀಡಿದ್ದಾರೆ. ಮೆಜೆಸ್ಟಿಕ್‌ನಲ್ಲಿ ನಡೆಯುವ ವೇಶ್ಯವಾಟಿಕೆ ದಂಧೆಯ ಬಗ್ಗೆ ನಾನು ಎರಡು ವರ್ಷಗಳ ಹಿಂದೆ ವಿಡಿಯೋ ಮಾಡಿದ್ದೆ. ಅದು ಭಾರೀ ವೈರಲ್ ಆಗಿತ್ತು. ಆದರೆ ಇನ್ನೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಯೂಟ್ಯೂಬರ್ ಹೇಳಿದ್ದಾರೆ.

Bengaluru Shock YouTuber Exposes Prostitution Racket in City s Heart Video Goes Viral

ಮೆಜೆಸ್ಟಿಕ್‌ನಲ್ಲಿ ಇನ್ನೂ ಈ ದಂಧೆ ನಿಂತಿಲ್ಲ. ಜನರ ಬಳಿ ಹಾಗೂ ವಿದ್ಯಾರ್ಥಿಗಳ ಬಳಿ ಒತ್ತಾಯಪೂರ್ವಕವಾಗಿ ದುಡ್ಡು ಕಿತ್ತುಕೊಳ್ಳಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ತುಂಬಾ ಜನ ಹೆಣ್ಣು ಮಕ್ಕಳಿಗೂ ಭಯವಾಗುತ್ತಿದೆ. ಫೋನು ಮತ್ತು ದುಡ್ಡು ಕಿತ್ತುಕೊಳ್ಳುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಮೆಜೆಸ್ಟಿಕ್‌ನ ಅಂಡರ್‌ಪಾಸ್‌ನಲ್ಲಿ ಈ ದಂಧೆ ಅವ್ಯಾತವಾಗಿ ನಡೆಯುತ್ತಿದೆ. ಅಲ್ಲದೇ ಇಲ್ಲಿ ನಿತ್ಯವೂ ಲಕ್ಷಾಂತರ ಜನ ಓಡಾಡುತ್ತಾರೆ. ಸಾವಿರಾರು ಜನರಿಗೆ ಕಿರುಕುಳ ಮುಂದುವರಿದಿದೆ ಎಂದು ಯೂಟ್ಯೂಬರ್ ವಿಡಿಯೋದಲ್ಲಿ ಹೇಳಿದ್ದಾರೆ.

ನಗರದಲ್ಲಿ ಈ ರೀತಿ ದಂಧೆ ನಡೆಯುತ್ತಿರುವುದರಿಂದ ಬೆಂಗಳೂರಿಗೆ ಕೆಟ್ಟ ಹೆಸರು ಹಾಗೂ ಕಳಂಕ ಬರುತ್ತಿದೆ. ಅಂಡರ್ ಪಾಸ್‌ನಲ್ಲಿ ಸಮಸ್ಯೆ ಪರಿಹಾರವಾಗಿದೆಯಾದರೂ ಫ್ಲೈಓವರ್‌ನಲ್ಲಿ ಸಮಸ್ಯೆ ಪರಿಹಾರವಾಗಿಲ್ಲ.

ಹಲ್ಲೆ ಮಾಡುವುದಕ್ಕೆ ಯತ್ನ: ಇನ್ನು ವಿಕಾಸ್ ಅವರು ಈ ವಿಡಿಯೋ ಮಾಡುವುದಕ್ಕೆ ಪ್ರಯತ್ನಿಸಿದಾಗ ಅವರ ಮೇಲೆ ಕೆಲವರು ಹಲ್ಲೆ ಮಾಡುವುದಕ್ಕೆ ಪ್ರಯತ್ನಿಸಿರುವುದು ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವುದು ಈ ವೈರಲ್ ವಿಡಿಯೋದಲ್ಲಿದೆ. ಮೆಜೆಸ್ಟಿಕ್‌ನ ಫ್ಲೈಓವರ್‌ನ ಮೇಲೆ ನಡೆಯುತ್ತಿದೆ ಎನ್ನಲಾದ ವೇಶ್ಯಾವಾಟಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹಲವರು ಹೌದು ನಮಗೂ ಇದೇ ರೀತಿ ಕೆಟ್ಟ ಅನುಭವಗಳು ಆಗಿವೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ನಮಗೂ ಕೆಟ್ಟ ಅನುಭವ ಆಗಿದೆ: ಇನ್ನು ಈ ವಿಡಿಯೋಗೆ ರಿಯಾಕ್ಟ್‌ ಮಾಡಿರುವ ಹಲವರು ಹೌದು ನಮಗೂ ಈ ರೀತಿಯ ಕೆಟ್ಟ ಅನುಭವಗಳು ಆಗಿವೆ ಎಂದು ರಿಯಾಕ್ಟ್‌ ಮಾಡಿದ್ದಾರೆ. ಈ ರೀತಿ ದುಡ್ಡು ಮಾತನಾಡಿ ಕರೆದುಕೊಂಡು ಹೋಗುವ ವೇಶ್ಯರು ದುಡ್ಡು - ಮೊಬೈಲ್ ಮತ್ತು ಚಿನ್ನವನ್ನು ಕಸಿದುಕೊಂಡು ಕಳುಹಿಸುತ್ತಾರೆ. ಇವರ ಹಿಂದೆ ದೊಡ್ಡ ಗ್ಯಾಂಗ್‌ ಇದೆ ಎಂದು ವ್ಯಕ್ತಿಯೊಬ್ಬರು ಹೇಳಿರುವುದು ವಿಡಿಯೋದಲ್ಲಿ ಇದೆ. ಹೌದು ದುಡ್ಡು ಎಲ್ಲಾ ಕಿತ್ತುಕೊಂಡು ಕಳುಹಿಸುತ್ತಾರೆ. ಬೆಂಗಳೂರಿಗೆ ಬಂದ ಹೊಸಬರಿಗೆ ಈ ವಿಷಯ ಗೊತ್ತಿಲ್ಲದೆ ಮೋಸ ಹೋಗುತ್ತಾರೆ. ಈ ಭಾಗದಲ್ಲಿ ವೇಶ್ಯವಾಟಿಕೆ ದಂಧೆ ಜೋರಾಗಿದೆ ಎಂದು ಹಲವರು ಕಮೆಂಟ್‌ ಸಹ ಮಾಡಿದ್ದಾರೆ.

ಹೊಟ್ಟೆ ಪಾಡಿಗೆ ಮಾಡುತ್ತಿದ್ದೇನೆ: ಇನ್ನು ಈ ವಿಡಿಯೋದಲ್ಲಿ ಮಾತನಾಡಿರುವ ಮಹಿಳೆಯೊಬ್ಬರು ಇದೆಲ್ಲವನ್ನೂ ನಾನು ನನ್ನ ಹೊಟ್ಟಪಾಡಿಗಾಗಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಯೂಟ್ಯೂಬರ್‌ ತರಾಟೆ ತೆಗೆದುಕೊಂಡಿದ್ದಾರೆ. ಹೊಟ್ಟೆಪಾಡಿಗೆ ಬೇರೆ ಕೆಲಸಗಳನ್ನು ಮಾಡಬಹುದು. ಈ ರೀತಿ ಸುಳ್ಳು ಹೇಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಪೊಲೀಸರ ಬಗ್ಗೆ ಅಸಮಾಧಾನ: ಇನ್ನು ಯೂಟ್ಯೂಬರ್ ವಿಡಿಯೋ ನೋಡಿರುವ ಹಲವರು ಈ ವಿಷಯಗಳು ಇಲ್ಲಿನ ಪೊಲೀಸರಿಗೆ ತಿಳಿದಿಲ್ಲವೇ ತಿಳಿದಿದ್ದರೂ ಯಾಕೆ ಸಂಪೂರ್ಣವಾಗಿ ತಡೆಯುವ ಕೆಲಸವನ್ನು ಮಾಡುತ್ತಿಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಇನ್ನೂ ನಿಂತಿಲ್ಲ: ಇನ್ನು ಮೆಜೆಸ್ಟಿಕ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಯೂಟ್ಯೂಬರ್ ವಿಡಿಯೋ ಮಾಡಿ ಒಂದು ವಾರಕ್ಕೂ ಹೆಚ್ಚು ಸಮಯವಾದರೂ ಮೆಜೆಸ್ಟಿಕ್‌ನಲ್ಲಿ ಇನ್ನೂ ವೇಶ್ಯಾವಾಟಿಕೆ ದಂಧೆ ನಿಂತಿಲ್ಲ ಎಂದು ಜನ ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+