Get Updates
Get notified of breaking news, exclusive insights, and must-see stories!

Bengaluru Second Airport: ಬೆಂಗಳೂರು ದಕ್ಷಿಣದಲ್ಲಿ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲ: ಎಂ.ಬಿ ಪಾಟೀಲ್

Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ನಿಗದಿ ಮಾಡುವ ವಿಚಾರವು ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಭಾಗದಲ್ಲೇ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಹೇಳಿದ್ದರು.

ಆದರೆ ಇದೀಗ ಈ ವಿಚಾರವಾಗಿ ರಿಯಾಕ್ಟ್‌ ಮಾಡಿರುವ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಬೆಂಗಳೂರು ದಕ್ಷಿಣದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ಎಂದಿದ್ದಾರೆ. ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗಲಿದೆ ಎನ್ನುವ ಬಗ್ಗೆಯೂ ಅವರು ಮಾತನಾಡಿದ್ದಾರೆ.

Bengaluru Second Airport South Bengaluru Not an Option Says M B Patil

ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಜಾಗದ ವಿಚಾರವು ಮತ್ತೆ ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿದೆ. ಡಿ.ಕೆ ಶಿವಕುಮಾರ್ ಅವರು ಬಹುತೇಕ ಬೆಂಗಳೂರು ದಕ್ಷಿಣ ಭಾಗದಲ್ಲೇ ಹೊಸ ಏರ್‌ಪೋರ್ಟ್‌ ಬರಲಿದೆ ಎಂದಿದ್ದರು. ಆದರೆ ಈ ವಿಚಾರವಾಗಿ ಸಚಿವ ಎಂ.ಬಿ ಪಾಟೀಲ್ ಅವರು ಬೇರೆಯದ್ದನ್ನೇ ಹೇಳಿದ್ದಾರೆ. ಬೆಂಗಳೂರು 2ನೇ ವಿಮಾನ ನಿಲ್ದಾಣ ನಿರ್ಮಾಣದ ವಿಚಾರವಾಗಿ DHನೊಂದಿಗೆ ಅವರು ಮಾತನಾಡಿದ್ದಾರೆ.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ಜಾಗಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಅದರಲ್ಲಿ ಕನಕಪುರ ರಸ್ತೆಯ ಬಳಿಯ ಸೋಮನಹಳ್ಳಿ ಮತ್ತು ಚೂಡಹಳ್ಳಿಯಲ್ಲಿರುವ ಎರಡು ಪ್ರದೇಶಗಳು ಮತ್ತು ನೆಲಮಂಗಲ ಬಳಿಯ ಕುಣಿಗಲ್ ರಸ್ತೆಯಲ್ಲಿರುವ ಒಂದು ಪ್ರದೇಶ ಶಾರ್ಟ್‌ ಲಿಸ್ಟ್‌ ಆಗಿದೆ. ಈಚೆಗೆ ಡಿ.ಕೆ ಶಿವಕುಮಾರ್ ಹೇಳಿರುವ ಜಾಗದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂ.ಬಿ ಪಾಟೀಲ್ ಅವರು, ಆದರೆ ಈಗ ಅಂತಹ ಯಾವುದೇ ಸ್ಥಳಕ್ಕೆ ಒಲವು ವ್ಯಕ್ತವಾಗಿಲ್ಲ (ಅಂತಿಮ ನಿರ್ಧಾರಕ್ಕೆ ನಾವು ಬಂದಿಲ್ಲ). ಸ್ಥಳವನ್ನು ಅಂತಿಮಗೊಳಿಸುವ ಮೊದಲು ದೀರ್ಘ ಪ್ರಕ್ರಿಯೆ ಇದೆ ಎಂದೂ ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಹಂಚಿಕೊಂಡಿರುವ ಕೆಲವೊಂದು ಮಿತಿಗಳ / ನಿಯಮಗಳ ಪಟ್ಟಿಯನ್ನು ಪರಿಶೀಲಿಸಲು ಸಲಹಾ ಸಂಸ್ಥೆಗಳಿಗೆ ಟೆಂಡರ್ ಕರೆಯಲಿದೆ. ಎಎಐ ವರದಿಯು ಮೂರು ಸ್ಥಳಗಳಲ್ಲಿ ಭೂಪ್ರದೇಶ ಮತ್ತು ವಾಯುಪ್ರದೇಶದ ಸಮಸ್ಯೆಗಳನ್ನು ಗುರುತಿಸಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಡಿ.ಕೆ ಶಿವಕುಮಾರ್ ಅವರ ಲೆಕ್ಕಾಚಾರಗಳು ತಲೆಕೆಳಗಾದಂತೆ ಆಗಿದೆ.

ರಿಯಲ್ ಎಸ್ಟೇಟ್ ಬೂಸ್ಟ್‌: ಇನ್ನು ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರವಾಗಿ ಕಳೆದ ಒಂದು ವರ್ಷದಿಂದಲೂ ಹೆಚ್ಚು ಚರ್ಚೆ ಆಗುತ್ತಿದೆ. ಇದೀಗ ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಸಂಬಂಧಿಸಿದಂತೆ ಶಾರ್ಟ್‌ಲಿಸ್ಟ್‌ ಆಗಿರುವ ಮೂರು ಪ್ರದೇಶಗಳಲ್ಲೂ ಬಹುತೇಕ ಭೂಮಿಗೆ ಬಂಗಾರದ ಬೆಲೆ ಬಂದಿದೆ.

ಇನ್ನು ಬೆಂಗಳೂರು ದಕ್ಷಿಣ ಪ್ರದೇಶವೇ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತಿಮವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಹಲವರು ಈ ಭಾಗದಲ್ಲಿ ಭೂಮಿ ಖರೀದಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಭೂಮಿ ಮಾರಾಟ ಮಾಡದೆ ಇದ್ದಾರೆ. ಆದರೆ ಈ ವಿಚಾರದಲ್ಲಿ ಗೊಂದಲ ಮಾತ್ರ ಕೊನೆಯಾಗುತ್ತಿಲ್ಲ.

ಡಿ.ಕೆ ಶಿವಕುಮಾರ್‌ಗೆ ಹಿನ್ನಡೆ: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಜಿಲ್ಲೆಯಲ್ಲೇ ನಿರ್ಮಾಣ ಆಗಬೇಕು ಎಂದು ಹಲವು ನಾಯಕರು ಒತ್ತಡ ಹೇರುತ್ತಿದ್ದಾರೆ. ಆದರೆ ಇದರಲ್ಲಿ ಡಿ.ಕೆ ಶಿವಕುಮಾರ್‌ ಅವರ ಲೆಕ್ಕಾಚಾರ ತೆಲೆಕೆಳಗಾದಂತಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+