Bengaluru School Timings: ಟ್ರಾಫಿಕ್ ಸಮಸ್ಯೆಗೆ ಇದೊಂದೇ ಪರಿಹಾರನಾ?
ಐಟಿಬಿಟಿ ಹಬ್ ಮೂಲಕ ಸಿಲಿಕಾನ್ ಸಿಟಿ ಎಂದು ಹೆಸರು ಪಡೆದಿರುವ ಬೆಂಗಳೂರು, ಟ್ರಾಫಿಕ್ ಜಾಮ್ ವಿಚಾರದಲ್ಲೂ ಇನ್ನೊಂದು ರೀತಿಯಲ್ಲಿ ಹೆಸರನ್ನು ಪಡೆದಿದೆ. ಈ ನಗರ ಎಷ್ಟು ಜನಸಂಖ್ಯೆ ಮತ್ತು ಟ್ರಾಫಿಕ್ ಅನ್ನು ತಡೆದುಕೊಳ್ಳಬಹುದೋ ಅದನ್ನೂ ಮೀರಿ ಬೆಳೆಯುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಅದರಲ್ಲೂ ಪ್ರಮುಖವಾಗಿ ಪೀಕ್ ಹವರ್ಸ್ ನಲ್ಲಂತೂ ಹೇಳತೀರದ ಟ್ರಾಫಿಕ್ ಸಮಸ್ಯೆಯಾಗುತ್ತಿರುವುದು ಗೊತ್ತಿರುವ ವಿಚಾರ.
ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಬೆಂಗಳೂರು ಉಸ್ತುವಾರಿಯೂ ಆಗಿರುವ ಡಿ.ಕೆ.ಶಿವಕುಮಾರ್ 'ಬ್ರ್ಯಾಂಡ್ ಬೆಂಗಳೂರು' ಹೆಸರಿನಡಿಯಲಿ ನಗರದ ಪ್ರಮುಖ ಉದ್ಯಮಿಗಳನ್ನು, ವ್ಯಾಪಾರಸ್ಥರು, ಸಾರ್ವಜನಿಕರನ್ನು ಕರೆದು ಕರೆದು ಮಾತನಾಡಿಸುತ್ತಿದ್ದಾರೆ. ಜೊತೆಗೆ, ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ವೆಬ್ ಪೋರ್ಟಲ್ ಮೂಲಕ ಸಲಹೆಯನ್ನೂ ಕೇಳಿದ್ದಾರೆ. ಅದಕ್ಕೆ ಊಹಿಸಲೂ ಅಸಾಧ್ಯವಾದ ರೆಸ್ಪಾನ್ಸ್ ಬರುತ್ತಿದೆ. ಅದರಲ್ಲಿ ಒಂದು ಶಾಲೆಗಳ ಟೈಮಿಂಗ್ಸ್.

ಬೆಳಗ್ಗಿನ ಹೊತ್ತು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ವಿಚಾರಕ್ಕೆ ಬಂದಾಗ ಹೆಚ್ಚಿನ ಜನರು ಅಭಿಪ್ರಾಯ ಪಟ್ಟಿದ್ದು ಸ್ಕೂಲ್ ಟೈಮಿಂಗ್ಸ್. ನಗರದಲ್ಲಿ ಬಹುತೇಕ ಶಾಲೆಗಳ ಆರಂಭ ಮತ್ತು ಮುಕ್ತಾಯದ ಅವಧಿ ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ. ಈ ಸಮಯದಲ್ಲಿ ಬದಲಾವಣೆಯಾದರೆ, ತಕ್ಕಮಟ್ಟಿಗೆ ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗಬಹುದು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.
ಬೆಳಗ್ಗೆ 9.30ಕ್ಕೆ ಶಾಲೆ ಆರಂಭವಾಗುತ್ತದೆ ಅಂದರೆ 7.30 - 8ಗಂಟೆಗೆ ಪಿಕ್ ಅಪ್ ವಾಹನಗಳು/ಪೋಷಕರ ವೆಹಿಕಲ್ ಗಳು ರೋಡಿಗೆ ಇಳಿಯುತ್ತದೆ. ಈ ಅವಧಿ ಉದ್ಯೋಗಿಗಳ ಟೈಮಿಂಗ್ಸ್ ಜೊತೆಗೆ ಕ್ಲ್ಯಾಷ್ ಆಗುತ್ತಿರುವುದರಿಂದ ಶಾಲೆಯ ಅವಧಿಯಲ್ಲಿ ಬದಲಾವಣೆ ಮಾಡುವ ಬಹುತೇಕ ಅಂತಿಮ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ಬಂದಿದೆ. ಈ ಸಂಬಂಧ ಬರುವ ಸೋಮವಾರ (ಅ. 9) ಇಲಾಖೆ ಸಭೆಯನ್ನು ಕರೆದಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ
ಗಮನಿಸಬೇಕಾದ ವಿಚಾರ ಏನಂದರೆ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಶಿಕ್ಷಣ ಇಲಾಖೆ, ಶಾಲಾ ವೇಳೆಯ ಪರಿಷ್ಕರಣೆಗೆ ಮುಂದಾಗಿದೆ. ಇದಕ್ಕೆ ಖಾಸಗಿ ಶಾಲಾ ಮಂಡಳಿಯ ವಿರೋಧವಿದ್ದರೂ, ಕೋರ್ಟ್ ಆದೇಶ ಪಾಲಿಸ ಬೇಕಾದ ಅನಿವಾರ್ಯತೆಯಿದೆ. ಬೆಂಗಳೂರು ನಗರ ವ್ಯಾಪ್ತಿಯ ಶಾಲೆಗಳಿಗೆ ಮಾತ್ರ ಇದು ಅನ್ವಯಿಸುವುದರಿಂದ, ಟ್ರಯಲ್ ಎಂಡ್ ರನ್ ಆಧಾರದ ಮೇಲೆ ಶಾಲೆಗಳ ಸಮಯ ಬದಲಾವಣೆ ಆಗುವುದು ಬಹುತೇಕ ನಿಶ್ಚಿತ.
ಮೂವತ್ತರಿಂದ 1ಗಂಟೆ ಮುಂಚಿತವಾಗಿ ಆರಂಭವಾಗುವ ಸಾಧ್ಯತೆ
ಮೂಲಗಳ ಪ್ರಕಾರ, ಶಾಲೆಗಳು ಮೂವತ್ತರಿಂದ ಒಂದು ಗಂಟೆ ಮುಂಚಿತವಾಗಿ ಆರಂಭವಾಗುವ ಸಾಧ್ಯತೆ ಹೆಚ್ಚಿದೆ. 30-60 ನಿಮಿಷವೋ ಎನ್ನುವುದು ಸಭೆಯ ನಂತರ ನಿರ್ಧಾರ ಆಗಬಹುದು. ಇದರಿಂದ ಶಾಲೆಗಳ ಅವಧಿ 9.30ರ ಬದಲು 8.30ಕ್ಕೆ ಮತ್ತು 4.30ರ ಬದಲು 3.30ಕ್ಕೆ ಪರಿಷ್ಕರಣೆಯಾಗುವ ಸಾಧ್ಯತೆಯಿದೆ. ಇದು ಬಹುತೇಕ ಒಂದು ಹಂತಕ್ಕೆ ಪೀಕ್ ಹವರ್ಸ್ ಟ್ರಾಫಿಕ್ ಸಮಸ್ಯೆಯಿಂದ ಹೊರಬರಬಹುದು ಎನ್ನುವ ಅಭಿಪ್ರಾಯ ಟ್ರಾಫಿಕ್ ಇಲಾಖೆಯಿಂದಲೂ ವ್ಯಕ್ತವಾಗುತ್ತಿದೆ.

ಪೋಷಕರ ಸಹಕಾರವನ್ನೂ ಶಿಕ್ಷಣ ಇಲಾಖೆ ಕೇಳಲಿದೆ
ಶಾಲೆಗಳ ಸಮಯ ಬದಲಾವಣೆಗೆ ಮಕ್ಕಳು, ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿಗಳ ಜೊತೆಗೆ ಪೋಷಕರ ಸಹಕಾರವನ್ನೂ ಶಿಕ್ಷಣ ಇಲಾಖೆ ಕೇಳಲಿದೆ. ಒಂದು ವೇಳೆ ಸಮಯ ಬದಲಾವಣೆ ಅಂತಿಮವಾದರೆ, ದಸರಾ ರಜೆಯ ನಂತರ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲು ಇಲಾಖೆ ಸೂಚಿಸಬಹುದು ಅಥವಾ ವಲಯವಾರು ಇದನ್ನು ಕಾರ್ಯಗತಗೊಳಿಸಬಹುದು.
ಬೆಂಗಳೂರು ನಗರದ ಎಂಟು ವಲಯಗಳು
ಬೆಂಗಳೂರು ನಗರದ ಎಂಟು ವಲಯಗಳ (ಯಲಹಂಕ, ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ದಕ್ಷಿಣ, ಪಶ್ಚಿಮ, ಪೂರ್ವ ಮತ್ತು ಮಹದೇವಪುರ) ಪೈಕಿ, ಬೊಮ್ಮನಹಳ್ಳಿ, ಪೂರ್ವ ಮತ್ತು ಮಹದೇವಪುರ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತವಾಗಿರುವುದರಿಂದ, ಮೊದಲ ಹಂತದಲ್ಲಿ ಈ ವಲಯದ ಶಾಲೆಗಳ ಸಮಯದಲ್ಲಿ ಬದಲಾವಣೆಯಾಗಬಹುದು.
ಕಚೇರಿಗಳ ಸಮಯದಲ್ಲಿ ಬದಲಾವಣೆ ಯಾಕಾಗಬಾರದು
ಶಾಲೆಗಳ ಸಮಯವನ್ನು ಬದಲಾವಣೆ ಮಾಡುವ ಬದಲು, ಕಚೇರಿಗಳ ಸಮಯದಲ್ಲಿ ಬದಲಾವಣೆ ಯಾಕಾಗಬಾರದು ಎನ್ನುವ ಪ್ರಶ್ನೆಗೆ ಐಟಿಬಿಟಿ, ಇತರ ಉದ್ಯಮ, ಸಾರ್ವಜನಿಕ ವಲಯದಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಐಟಿ ಸಂಸ್ಥೆಗಳು ಕ್ಲೈಂಟ್ ಟೈಮಿಂಗ್ಸ್ ಆಧಾರದಲ್ಲಿ ಕೆಲಸ ಮಾಡಬೇಕಾಗಿರುವುದರಿಂದ, ಸಮಯ ಬದಲಾವಣೆ ಟ್ರಾಫಿಕ್ ಸಮಸ್ಯೆಗೆ ಪರಿಹಾರವಲ್ಲ ಎನ್ನುವ ನಿಲುವನ್ನು ಹೊಂದಬಹುದು.
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಅನುಷ್ಠಾನದ ಅನಿವಾರ್ಯತೆ
ಒಂದು ಕಡೆ ಹೈಕೋರ್ಟ್ ಆದೇಶ, ಇನ್ನೊಂದು ಕಡೆ ಉದ್ಯಮಗಳನ್ನು ಸೆಳೆಯಲು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಅನುಷ್ಠಾನದ ಅನಿವಾರ್ಯತೆಯಲ್ಲಿ ಸರ್ಕಾರ ಇರುವುದರಿಂದ, ಶಾಲಾ ಸಮಯ ಬದಲಾಗುವುದು ಬಹುತೇಕ ಪಕ್ಕಾ. ಅದು ಮೂವತ್ತು ನಿಮಿಷ ಬೇಗ ಶಾಲೆ ಆರಂಭವಾಗುತ್ತೋ ಅಥವಾ ಒಂದು ಗಂಟೆಯ ಮುಂಚೆಯೋ ಎನ್ನುವುದು ಅಕ್ಟೋಬರ್ 9ರ ಸಭೆಯ ನಂತರ ನಿರ್ಧಾರ ಆಗಬಹುದು.
-
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Traffic Alert: ಬೆಂಗಳೂರು ಹೊರ ವರ್ತುಲ ಸವಾರರೇ ಗಮನಿಸಿ, ರಸ್ತೆ ಸಂಚಾರ ನಿರ್ಬಂಧ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ











Click it and Unblock the Notifications