Bengaluru Satellite Town Ring Road: ಹೊಸಕೋಟೆ-ತಮಿಳುನಾಡು ಗಡಿಯವರೆಗಿನ ವಿಸ್ತರಣೆ ಕಾಮಗಾರಿ ಪೂರ್ಣ ಯಾವಾಗ?

Bengaluru Satellite Town Ring Road: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಿಸಲಾಗುತ್ತಿರುವ ಬಹುನಿರೀಕ್ಷತ ಯೋಜನೆಗಳಲ್ಲಿ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಕೂಡ ಒಂದಾಗಿದೆ. ಹಾಗಾದರೆ ಹೊಸಕೋಟೆಯಿಂದ-ತಮಿಳುನಾಡು ಗಡಿಯವರೆಗಿನ ಇದರ ವಿಸ್ತರಣೆ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಹಾಗೂ ಪ್ರಯೋಜನೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇನ್ನು ಇದರ ನಿರ್ಮಾಣ ಕಾರ್ಯ 2025ರ ವೇಳೆಗೆ ಮುಕ್ತಾಯವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Bengaluru Satellite Town Ring Road Extension work Complete till Hoskote-Tamil Nadu border by 2025

ಹೊಸಕೋಟೆಯಿಂದ-ತಮಿಳುನಾಡು ಗಡಿಯವರೆಗಿನ ವಿಸ್ತರಣೆ ಕಾಮಗಾರಿ ಮಾರ್ಚ್ 2025ರೊಳಗೆ ಮುಗಿಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿದೆ. ಈ ವಿಭಾಗವು STRRನ ಕಾರ್ಯಾಚರಣೆಯ ಉದ್ದವನ್ನು 102.6 ಕಿಲೋ ಮೀಟರ್‌ಗೆ ವ್ಯಾಪಿಸಲಿದ್ದು, 2027ರಲ್ಲಿ ಪೂರ್ಣಗೊಳ್ಳುವುದರೊಳಗೆ ಇದು 288 ಕಿಲೋ ಮೀಟರ್‌ವರೆಗೂ ವ್ಯಾಪಿಸಲಿದೆ. ಇದರಲ್ಲಿ 45 ಕಿಲೋ ಮೀಟರ್‌ ತಮಿಳುನಾಡು ವ್ಯಾಪ್ತಿಗೆ ಬರಲಿದೆ ಎಂದು ತಿಳಿದುಬಂದಿದೆ.

ಮುಂದಿನ ವರ್ಷದ ಆರಂಭದಲ್ಲಿ ಹೊಸಕೋಟೆಯಿಂದ ತಮಿಳುನಾಡು ಗಡಿಗೆ ಸಂಪರ್ಕ ಕಲ್ಪಿಸುವ ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ನಲ್ಲಿ 21 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ಇದು ಆರಂಭವಾದ ಕೆಲವು ತಿಂಗಳುಗಳವರೆಗೆ ವಾಹನ ಸವಾರರು ಯಾವುದೇ ಟೋಲ್ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದೆ.

ಹೊಸಕೋಟೆ-ತಮಿಳುನಾಡು ಗಡಿವರೆಗಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ವಿಸ್ತರಣೆಯಲ್ಲಿ ಶೇಕಡ 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 2025ರ ಫೆಬ್ರವರಿ-ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಬೆಂಗಳೂರಿನ ಎನ್‌ಎಚ್‌ಎಐನ ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್ ಹೇಳಿದರು.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ: ಈ ಕಾಮಗಾರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯು ನೈಋತ್ಯ ರೈಲ್ವೆ (SWR)ಯಿಂದ ಅನುಮತಿ ಪಡೆದ ನಂತರ, ರೈಲು ಮೇಲ್ಸೇತುವೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಬೆಂಗಳೂರು-ಚೆನ್ನೈ ರೈಲು ಮಾರ್ಗದ ಲಿಂಗದೀರಮಲ್ಲಸಂದ್ರ ಗ್ರಾಮದಲ್ಲಿ ಈ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ದಾಬಾಸ್‌ಪೇಟೆಯಿಂದ ತಮಿಳುನಾಡು ಗಡಿಯವರೆಗಿನ (102.6 ಕಿಲೋ ಮೀಟರ್‌) ಎಸ್‌ಟಿಆರ್‌ಆರ್ ವಿಭಾಗವನ್ನು ರಾಷ್ಟ್ರೀಯ ಹೆದ್ದಾರಿ 648 ಎಂದು ಗುರುತಿಸಲಾಗಿದೆ. ಎಸ್‌ಟಿಆರ್‌ಆರ್‌ನ ಉಳಿದ ಐದು ವಿಭಾಗಗಳಿಗೆ ಟೆಂಡರ್‌ಗಳನ್ನು ಆಹ್ವಾನಿಸಲಾಗಿದ್ದು, 144.25 ಕಿಲೋ ಮೀಟರ್‌ಗಳನ್ನು 4,749.74 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಪೂರ್ಣಗೊಳಿಸಲು ಎರಡು ವರ್ಷಗಳ ಕಾಲಾವಕಾಶವನ್ನು ನೀಡಲಾಗಿದೆ.

ಈ ನಿಲ್ದಾಣಗಳನ್ನು ಕೈಬಿಡಲು ನಿರ್ಧರಿಸಿದ್ದೇಕೆ?: ಬಹುನಿರೀಕ್ಷಿತ ಚಿಕ್ಕಜಾಲ ಹಾಗೂ ಬೆಟ್ಟದ ಹಲಸೂರು ಎರಡು ಮೆಟ್ರೋ ನಿಲ್ದಾಣಗಳ ಕಾಮಗಾರಿಯನ್ನು ಕೈಬಿಡಲು ಬಿಎಂಆರ್‌ಸಿಎಲ್‌ ಮುಂದಾಗಿದೆ‌. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬೆಂಗಳೂರಿನಲಗಲಿ ಬಹುತೇಕ ಮಂದಿ ಟ್ರಾಫಿಕ್‌ ಕಿರಿಕಿರಿಯಿಂದ ತಪ್ಪಿಸಿಕೊಂಡು ತಮ್ಮ ಗಮ್ಯಸ್ಥಾನಕ್ಕೆ ಬೇಗ ತಲುಪಲು ಮೆಟ್ರೋವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನೂ ಇದೀಗ ಸಿಲ್ಕ್‌ ಬೋರ್ಟ್‌ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಬೇಸರದ ಮಾಹಿತಿಯೊಂದನ್ನು ನೀಡಿದೆ. ಇಲ್ಲಿದೆ ನೋಡಿ ಮಾಹಿತಿ.

ಸಿಲ್ಕ್ ಬೋರ್ಡ್‌​ನಿಂದ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ನಮ್ಮ ಮೆಟ್ರೋ ಬಗ್ಗೆ ಜನರು ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡಿದ್ದರು. ಈ ನಡುವೆಯೇ ಇದೀಗ ಚಿಕ್ಕಜಾಲ ಮತ್ತು ಬೆಟ್ಟದ ಹಲಸೂರು ಎರಡು ಮೆಟ್ರೋ ನಿಲ್ದಾಣಗಳ ಕಾಮಗಾರಿಯನ್ನು ಕೈಬಿಡಲು ಬಿಎಂಆರ್‌ಸಿಎಲ್‌ ತೀರ್ಮಾನಿಸಿದೆ.

ಚಿಕ್ಕಜಾಲ & ಬೆಟ್ಟದ ಹಲಸೂರು ನಿಲ್ದಾಣಗಳಿಗಾಗಿ ಈ ಭಾಗದ ಹಲವು ಕಂಪನಿಗಳು ಹಣ ಕೊಡುತ್ತೇವೆ ಎಂದು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಇದೀಗ ಕಂಪನಿಗಳು ಹಣ ಕೊಡಲು ಹಿಂದೇಟು ಹಾಕುತ್ತಿವೆ. ಈ ಎರಡು ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕಾದರೆ, ಸುಮಾರು 300 ಕೋಟಿ ರೂಪಾಯಿಯಷ್ಟು ವೆಚ್ಚ ತಗುಲಲಿದೆ. ಆದ್ದರಿಂದ ಮತ್ತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಈ ಹಿನ್ನೆಲೆ ಸದ್ಯ ಎರಡು ನಿಲ್ದಾಣಗಳ ಕಾಮಗಾರಿಯನ್ನು ಕೈಬಿಡಲಿದ್ದೇವೆ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌವ್ಹಾಣ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+