ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್-19 ಪರಿಣಾಮ: ಬೆಂಗಳೂರಿನ ವಸತಿ ಬೆಲೆ 3% ಇಳಿಕೆ

|
Google Oneindia Kannada News

ಬೆಂಗಳೂರು, ಜುಲೈ 17: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬೆಂಗಳೂರಿನ ವಸತಿ ಆಸ್ತಿಗಳ ಬೆಲೆ 2020ರ 2ನೇ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 3% ಇಳಿಕೆ ಕಂಡಿದೆ ಎನ್ನುವುದು ಮ್ಯಾಜಿಕ್‍ಬ್ರಿಕ್ಸ್ ಪ್ರಾಪ್‍ಇಂಡೆಕ್ಸ್ ವರದಿ ಮಾಡಿದೆ.

ಬೆಂಗಳೂರಿನ ವಸತಿ ಆಸ್ತಿ ಮಾರುಕಟ್ಟೆ ಕಳೆದ ಐದು ವರ್ಷಗಳಿಂದ ಸ್ಥಿರ ಏರಿಕೆಯನ್ನು ಕಾಣುತ್ತಾ ಬಂದಿದ್ದು, ವಾಸಕ್ಕೆ ಸಜ್ಜಾದ ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ಆಸ್ತಿಗಳಿಗೆ ಐದು ವರ್ಷಗಳಲ್ಲಿ ಕ್ರಮವಾಗಿ 17.7% ಮತ್ತು 33.3% ವರೆಗೆ ಪ್ರಗತಿ ಕಂಡುಬಂದಿದೆ. ಆದಾಗ್ಯೂ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ವಾಸಕ್ಕೆ ಸಜ್ಜಾದ ಮನೆಗಳ ಬೆಲೆ ಶೇಕಡ 2.8ರಷ್ಟು ಕುಸಿತ ಕಂಡಿದ್ದು, ಕಳೆದ ಆರು ತ್ರೈಮಾಸಿಕಗಳಲ್ಲಿ ಇದ್ದ ಏರಿಕೆ ಲಾಭವನ್ನು ತೊಡೆದುಹಾಕಿದೆ.

ಕೋವಿಡ್-19 ಬಳಿಕ: ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಬೂಮ್!ಕೋವಿಡ್-19 ಬಳಿಕ: ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಬೂಮ್!

ನಿರ್ಮಾಣ ಹಂತದಲ್ಲಿರುವ ವಲಯ ಕಳೆದ ಐದು ವರ್ಷಗಳಲ್ಲಿ ಶೇಕಡ 33ರಷ್ಟು ಪ್ರಗತಿ ದಾಖಲಿಸಿತ್ತು. ಆದರೆ ಇತ್ತೀಚಿನ ಸಾಂಕ್ರಾಮಿಕದ ಕಾರಣದಿಂದಾಗಿ 2020ರ 2ನೇ ತ್ರೈಮಾಸಿಕದಲ್ಲಿ ಬೆಲೆ 0.8%ದಷ್ಟು ಇಳಿಕೆ ಕಂಡಿದೆ. ಕಾರ್ಮಿಕರ ಕೊರತೆ, ಪೂರೈಕೆ ಸರಣಿಯಲ್ಲಿ ವ್ಯತ್ಯಯ ಮತ್ತು ಆರ್‍ಇಆರ್‍ಎ ಗಡುವನ್ನು ಬೆಂಗಳೂರಿಗೆ ಮೂರು ತಿಂಗಳ ಕಾಲ ವಿಸ್ತರಿಸುವ ಕಾರಣದಿಂದ ನಿರ್ಮಾಣ ಹಂತದಲ್ಲಿರುವ ಯೋಜನೆಗಳ ಪೂರೈಕೆಯಲ್ಲಿ ಬದಲಾವಣೆಯಾಗಲಿದೆ.

 2 ಹಾಗೂ 3 ಬೆಡ್‍ರೂಂ ಮನೆಗಳಿಗೆ ಬೇಡಿಕೆ

2 ಹಾಗೂ 3 ಬೆಡ್‍ರೂಂ ಮನೆಗಳಿಗೆ ಬೇಡಿಕೆ

ಪ್ರಾಪ್‍ಇಂಡೆಕ್ಸ್ ಪ್ರಕಾರ, ಬೆಂಗಳೂರಿನಲ್ಲಿ ಮಧ್ಯಮ ಗಾತ್ರದ 2 ಹಾಗೂ 3 ಬೆಡ್‍ರೂಂ ಮನೆಗಳಿಗೆ ಬೇಡಿಕೆ ಆರೋಗ್ಯಕರ ಪ್ರಮಾಣದಲ್ಲಿ ಮುಂದುವರಿದಿದ್ದು, ಪೂರೈಕೆಗೆ ಹೋಲಿಸಿದರೆ 40% ಅಧಿಕ ಬೇಡಿಕೆ ಇದೆ. ಒಟ್ಟು ಆಸ್ತಿಯ ಹುಡುಕಾಟದಲ್ಲಿ ಈ ಆಸ್ತಿಗಳಿಗೆ ಬೇಡಿಕೆ ಕ್ರಮವಾಗಿ ಶೇಕಡ 88 ಮತ್ತು ಶೇಕಡ 92ರಷ್ಟಿದೆ. ಆದಾಗ್ಯೂ ಮಾರುಕಟ್ಟೆ ನಿಧಾನವಾಗಿ ಕೈಗೆಟುಕುವ ಬೆಲೆಯ ವಲಯದತ್ತ ವಾಲುತ್ತಿದ್ದು, ಪ್ರತಿ ಚದರ ಅಡಿಗೆ 5000 ರೂಪಾಯಿಗಿಂತ ಕಡಿಮೆ ಬೆಲೆ ಇರುವ ವರ್ಗದಲ್ಲಿ ಬೇಡಿಕೆ ಹಾಗೂ ಪೂರೈಕೆ ನಡುವಿನ ಹೊಂದಾಣಿಕೆ ವ್ಯತ್ಯಯ ಕಂಡುಬರುತ್ತಿದೆ. 35 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯ ಆಸ್ತಿಯ ಮೇಲಿನ ಮುದ್ರಾಂಕ ಶುಲ್ಕ 3%ದಿಂದ 5%ವರೆಗೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ 1 ಬಿಎಚ್‍ಕೆ ಮತ್ತು 2ಬಿಎಚ್‍ಕೆ ವಲಯದ ಆಸ್ತಿಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.

 ಮ್ಯಾಜಿಕ್‍ಬ್ರಿಕ್ಸ್ ಸಿಇಒ ಸುಧೀರ್ ಪೈ

ಮ್ಯಾಜಿಕ್‍ಬ್ರಿಕ್ಸ್ ಸಿಇಒ ಸುಧೀರ್ ಪೈ

ಪ್ರಾಪ್‍ಇಂಡೆಕ್ಸ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಮ್ಯಾಜಿಕ್‍ಬ್ರಿಕ್ಸ್ ಸಿಇಒ ಸುಧೀರ್ ಪೈ, "ಭಾರತದ ರಿಯಲ್ ಎಸ್ಟೇಟ್ ಉದ್ಯಮ ಕ್ರಮೇಣ ಹೊಸ ಸಹಜ ಸ್ಥಿತಿಯನ್ನು ಅಳವಡಿಸಿಕೊಳ್ಳುತ್ತಿದೆ. ಮಾರ್ಚ್‍ನಲ್ಲಿ ಇಡೀ ಆರ್ಥಿಕತೆ ಬಹುತೇಕ ಸ್ತಬ್ಧಗೊಂಡಿದ್ದು, ಆದರೆ ಈಗ ನಾವು ಪುನಶ್ಚೇತನದ ಹಾದಿಯಲ್ಲಿದ್ದೇವೆ. ಅಖಿಲ ಭಾರತ ಮಟ್ಟದಲ್ಲಿ, ಬೆಲೆ ಇಳಿಕೆ ಕೇವಲ 1.5% ಇದ್ದು, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ರೆಪೋ ದರವನ್ನು 100 ಮೂಲ ಅಂಕಗಳಷ್ಟು ಕಡಿಮೆ ಮಾಡಲಾಗಿದೆ. ಇದು ಉದ್ಯಮಕ್ಕೆ ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ. ಗ್ರಾಹಕರ ಆಸಕ್ತಿ ಇನ್ನೂ ಸಂಪೂರ್ಣವಾಗಿ ಕುಸಿದಿಲ್ಲ ಎನ್ನುವುದನ್ನು ನಮ್ಮ ಅಂಕಿ ಅಂಶಗಳು ಹೇಳುತ್ತವೆ. ಡೆವಲಪರ್‍ಗಳು ಅತ್ಯಾಕರ್ಷಕ ಕೊಡಗೆಗಳು ಮತ್ತು ಆಫರ್‍ಗಳ ಮೂಲಲ ಗೃಹ ಖರೀದಿದಾರರ ಗಮನವನ್ನು ಸೆಳೆಯಬೇಕು. ವಾಸಕ್ಕೆ ಸಜ್ಜಾಗಿರುವ ಮನೆಗೆ ಬೇಡಿಕೆ ಕಂಡುಬಂದಿದ್ದು, ನಮ್ಮ ಅಂಕಿ ಅಂಶಗಳಿಂದ ತಿಳಿದುಬರುವಂತೆ ಒಟ್ಟು ಶೋಧದಲ್ಲಿ ಶೇಕಡ 80ರಷ್ಟು ಮಂದಿ ಈ ವಲಯದಲ್ಲಿ ಆಸಕ್ತಿ ಹೊಂದಿದ್ದು, ಉಳಿದವರು ನಿರ್ಮಾಣ ಹಂತದಲ್ಲಿರುವ ಆಸ್ತಿಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ" ಎಂದು ವಿವರಿಸಿದರು.

 ಬಿಡಿಎ ಅಭಿವೃದ್ಧಿ ಯೋಜನೆ ವರವಾಗಬಹುದು

ಬಿಡಿಎ ಅಭಿವೃದ್ಧಿ ಯೋಜನೆ ವರವಾಗಬಹುದು

ಕೋವಿಡ್-19 ಸಾಂಕ್ರಾಮಿಕದ ಬಳಿಕ, ಲೇಔಟ್‍ಗಳಲ್ಲಿ ನಿವೇಶನಗಳನ್ನು ಭಾಗಶಃ ಮಾರಾಟಮಾಡಲು ಸರ್ಕಾರ ಅನುಮತಿ ನೀಡಿದ್ದು, ಇದು ಪ್ರವರ್ತಕರ ದ್ರವ್ಯತೆಯ ಸ್ಥಿತಿಯನ್ನು ಸುಧಾರಿಸಲಿದೆ ಹಾಗೂ ಲೇಔಟ್ ಅಭಿವೃದ್ಧಿ ಪ್ರಕ್ರಿಯೆಯ ವೇಗವರ್ಧನೆಗೆ ಕಾರಣವಾಗಲಿದೆ. ರಾಜ್ಯ ಸರ್ಕಾರವು 75 ಸಾವಿರ ತುಂಡುಭೂಮಿಗಳನ್ನು ಅಧಿಕೃತಗೊಳಿಸಿದ್ದು, ಇದು ಆರಂಭದಲ್ಲಿ ಬಿಡಿಎ ಅಭಿವೃದ್ಧಿ ಯೋಜನೆಯ ಭಾಗವಾಗಿದ್ದರೂ, ಅನಧಿಕೃತವಾಗಿ 12 ವರ್ಷಕ್ಕಿಂತಲೂ ಅಧಿಕ ಅವಧಿಯಿಂದ ಬೇರೆಯವರ ಸ್ವಾಧೀನದಲ್ಲಿತ್ತು. ಇದಕ್ಕೆ ದಂಡವಿಧಿಸಿ ಇದನ್ನು ಸಕ್ರಮಗೊಳಿಸಲಾಗಿದೆ.

 ನಗರದ ನಾಲ್ಕು ಅಗ್ರಗಣ್ಯ ಮಾರುಕಟ್ಟೆ

ನಗರದ ನಾಲ್ಕು ಅಗ್ರಗಣ್ಯ ಮಾರುಕಟ್ಟೆ

ವೈಟ್‍ಫೀಲ್ಡ್, ಸರ್ಜಾಪುರ ರಸ್ತೆ, ಬಳ್ಳಾರಿ ರಸ್ತೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳು ನಗರದ ನಾಲ್ಕು ಅಗ್ರಗಣ್ಯ ಸೂಕ್ಷ್ಮ ಮಾರುಕಟ್ಟೆಗಳಾಗಿದ್ದು, ಕೈಗೆಟುಕುವ ಬೆಲೆ, ಐಟಿ ಹಬ್‍ಗಳಿಗೆ ಉತ್ತಮ ಹಾಗೂ ಸುಲಲಿತ ಸಂಪರ್ಕ ಹಾಗೂ ವಿಮಾನ ನಿಲ್ದಾಣಕ್ಕೆ ಉತ್ತಮ ಸಂಪರ್ಕ ವ್ಯವಸ್ಥೆ ಇರುವ ಕಾರಣಗಳು ಇದಕ್ಕೆ ಪೂರಕವಾಗಿವೆ. ಮೆಟ್ರೋ ರೈಲ್ವೆ ಹಳಿಯನ್ನು ಬೈಯ್ಯಪ್ಪನಹಳ್ಳಿಯಿಂದ ವೈಟ್‍ಫೀಲ್ಡ್‍ಗೆ ಮತ್ತು ಆರ್‍ವಿ ರಸ್ತೆಯಿಂದ ಬೊಮ್ಮಸಂದ್ರ ವರೆಗೆ ವಿಸ್ತರಿಸಲಾಗುತ್ತಿದ್ದು, ಇದು ಆರ್ಥಿಕ ಹಬ್ ಎನಿಸಿದ ವೈಟ್‍ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಬೇಡಿಕೆಯನ್ನು ಭವಿಷ್ಯದಲ್ಲಿ ಹೆಚ್ಚಿಸುವ ನಿರೀಕ್ಷೆ ಇದೆ.

 ಗೃಹ ಖರೀದಿಗೆ ಉತ್ತೇಜನ

ಗೃಹ ಖರೀದಿಗೆ ಉತ್ತೇಜನ

ಕೋವಿಡ್-19 ಸಾಂಕ್ರಾಮಿಕದ ಹೊಡೆತದಿಂದ ಮಾರುಕಟ್ಟೆ ಪುನಶ್ಚೇತನಗೊಳ್ಳುತ್ತಿದ್ದಂತೆ, ಈ ಅಂಶಗಳು ಹೇಗೆ ಪರಿಣಾಮ ಬೀರುತ್ತವೆ ಎನ್ನುವುದು ಕುತೂಹಲದ ಅಂಶವಾಗಿದೆ. ಮ್ಯಾಜಿಕ್‍ಬ್ರಿಕ್ಸ್ ನ ಅಂಕಿ ಅಂಶಗಳಿಂದ ತಿಳಿದುಬರುವಂತೆ, ಒಟ್ಟಾರೆಯಾಗಿ, ಕಡಿಮೆ ಸಂಖ್ಯೆಯಲ್ಲಾದರೂ ಗ್ರಾಹಕರು ಮಾರುಕಟ್ಟೆಗೆ ಮತ್ತೆ ಮರಳಿದ್ದಾರೆ. ಪ್ರವರ್ತಕರು ಹಲವು ಯೋಜನೆಗಳನ್ನು ನಿರ್ವಹಿಸುತ್ತಿದ್ದು, ಗೃಹ ಖರೀದಿಗೆ ಉತ್ತೇಜನ ನೀಡಲಾಗಿದ್ದು, ವಹಿವಾಟಿಗೆ ಚಾಲನೆ ದೊರಕಿದೆ. ಬೆಲೆ ಪ್ರವೃತ್ತಿ ಬೆಳೆಯಲು ಮತ್ತು ವಹಿವಾಟಿನ ಗಾತ್ರಕ್ಕೆ ಸಂಬಂಧಿಸಿದಂತೆ ಮುಂದಿನ ಮೂರರಿಂದ ಆರು ತಿಂಗಳು ನಿರ್ಣಾಯಕ ಎನಿಸಲಿದೆ. ಮಾರಾಟಗಾರರು ಸೂಕ್ತವಾದ ಹಸ್ತಕ್ಷೇಪಗಳನ್ನು ಮಾಡುವ ಮೂಲಕ ಹೆಚ್ಚು ಹೆಚ್ಚು ಗ್ರಾಹಕರನ್ನು ಮಾರುಕಟ್ಟೆಗೆ ಆಕರ್ಷಿಸಿದಲ್ಲಿ, ಅದು ರಿಯಲ್ ಎಸ್ಟೇಟ್ ಉದ್ಯಮ ಪುಟಿದೇಳಲು ಕಾರಣವಾಗಲಿದೆ.

English summary
Amidst COVID-19, Bengaluru’s residential prices have witnessed a QoQ decrease of approx. 3% in the second quarter of 2020, revealed the latest edition of Magicbricks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X