ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರ ಕುಡಿಯುವ ನೀರಿಗೆ ಕಾದಿದೆ ಗಂಡಾಂತರ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಮಾರ್ಚ್ 6: ಬೇಸಿಗೆಗೂ ಮೊದಲೇ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ದಿನವೊಂದಕ್ಕೆ ಬೆಂಗಳೂರಿಗೆ ಬೇಕಾದ 1440 ಮಿಲಯನ್ ಲೀಟರ್ಸ್ (ಎಂಎಲ್ಡಿ - ಮಿಲಿಯನ್ ಲೀಸರ್ಸ್ ಪರ್ ಡೇ) ನೀರಿನ ಪೈಕಿ ಈಗ 1350 ಮಿಲಿಯನ್ ಲೀಟರುಗಳಷ್ಟೇ ಲಭ್ಯವಾಗುತ್ತಿದೆ. ಹೀಗಾಗಿ ಬೇಸಿಗೆಯ ಆರಂಭದಲ್ಲೇ 100 ಮಿಲಿಯನ್ ಲೀಟರುಗಳಷ್ಟು ನೀರಿನ ಕೊರತೆ ಕಂಡು ಬಂದಿದೆ.

ಕರ್ನಾಟಕದ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ ಈವರೆಗಿನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಹೀಗಾಗಿ ಹೆಚ್ಚಿನ ನೀರು ಪಡೆಯಲು ಬೆಂಗಳೂರು ಜಲಮಂಡಳಿ ಬೋರ್ ವೆಲ್ ಗಳನ್ನು ಕೊರೆಯಲು ಹೊರಟಿದೆ. ಮಾತ್ರವಲ್ಲದೆ ಈಗಿರುವ ಬೋರ್ ವೆಲ್ ಗಳ ರಿಪೇರಿಗೂ ಮುಂದಾಗಿದೆ. ಈ ಮೂಲಕ ಹೆಚ್ಚಿನ ನೀರನ್ನು ಅಂತರ್ಜಲದ ಮೂಲಕ ಪಡೆದುಕೊಳ್ಳಲು ಮುಂದಾಗಿದೆ ಬೆಂಗಳೂರು ಜಲ ಮಂಡಳಿ.[ಮಳೆಯಲ್ಲಿ ತೋಯಲಿದೆ ಉದ್ಯಾನನಗರಿ ಬೆಂಗಳೂರು]

ಎಷ್ಟು ನೀರು ಪೂರೈಕೆಯಾಗುತ್ತಿದೆ?

ಎಷ್ಟು ನೀರು ಪೂರೈಕೆಯಾಗುತ್ತಿದೆ?

ಕಾವೇರಿ ನ್ಯಾಯಾಧಿಕರಣದ ಆದೇಶದ ಪ್ರಕಾರ, ಬೆಂಗಳೂರಿನ ಕುಡಿಯುವ ನೀರಿಗಾಗಿ 19 ಟಿಎಂಸಿ ನೀರನ್ನು ಎತ್ತಿಡಲಾಗಿದೆ. ಸದ್ಯ ಕರ್ನಾಟಕ ಸರಕಾರದ ಸೂಚನೆಯಂತೆ ಕೆ.ಆರ್.ಎಸ್ ನಿಂದ ಪ್ರತಿ ದಿನ ಬೆಂಗಳೂರಿಗೆ 600 ಕ್ಯೂಸೆಕ್ಸ್ ನೀರನ್ನು ಪಂಪ್ ಮಾಡಲಾಗುತ್ತಿದೆ. ಕಾವೇರಿಯ 1, 2, 3 ಮತ್ತು 4ನೇ ಹಂತದ ಸ್ಟೇಜ್ ಒಂದು ಮತ್ತು ಎರಡರಿಂದ ನೀರನ್ನು ಪಡೆಯುತ್ತಿದೆ. ಮಾರ್ಚ್ ವರೆಗಿನ ಲೆಕ್ಕ ತೆಗೆದರೆ 1ನೇ ಹಂತದಿಂದ 143ಎಂಎಲ್ಡಿ, 2ನೇ ಹಂತದಿಂದ 140 ಎಂಎಲ್ಡಿ, 3ನೇ ಹಂತದಿಂದ 327 ಎಂಎಲ್ಡಿ ಹಾಗೂ 4ನೇ ಹಂತದ ಮೊದಲ ಸ್ಟೇಜ್ ನಿಂದ 299 ಎಂಎಲ್ಡಿ ಹಾಗೂ ಎರಡನೇ ಸ್ಟೇಜ್ ನಿಂದ 441 ಎಂಎಲ್ಡಿ ನೀರು ಪಡೆಯಲಾಗಿದೆ.[ಮೇ ಅಂತ್ಯದವರೆಗೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ]

ಬಾರಿಸುತ್ತಿದೆ ಎಚ್ಚರಿಕೆಯ ಗಂಟೆ

ಬಾರಿಸುತ್ತಿದೆ ಎಚ್ಚರಿಕೆಯ ಗಂಟೆ

ಇಡೀ ಬೇಸಿಗೆ ಕಳೆಯಲು ಬೆಂಗಳೂರಿಗೆ 6.32 ಟಿಎಂಸಿ ನೀರು ಬೇಕಾಗಿದೆ. ಆದರೆ ಕೆ.ಆರ್.ಎಸ್ ನಲ್ಲಿರುವ ಒಟ್ಟು ನೀರಿನ ಪ್ರಮಾಣವೇ ಜಸ್ಟ್ 7.15 ಟಿಎಂಸಿಯಾಗಿದೆ. ಇದರಲ್ಲೇ ಮಂಡ್ಯ, ಮೈಸೂರು ಮತ್ತು ಮದ್ದೂರು ಪಟ್ಟಣಗಳಿಗೂ ನೀರು ನೀಡಬೇಕಾಗಿದೆ.[ಎಚ್ಚರಾ! ಎಚ್ಚರಾ! ಬೆಂಗಳೂರಿನಲ್ಲಿ ಬಿಸಿಗಾಳಿ ಚುರುಗುಟ್ಟಲಿದೆ]

ಉಳಿದ ಡ್ಯಾಂಗಳನ್ನೂ ನೀರಿಲ್ಲ

ಉಳಿದ ಡ್ಯಾಂಗಳನ್ನೂ ನೀರಿಲ್ಲ

ಇದೇ ರೀತಿಯಲ್ಲಿ ಕರ್ನಾಟಕದ ಉಳಿದ ಅಣೆಕಟ್ಟುಗಳಲ್ಲೂ ನೀರಿನ ಮಟ್ಟ ಭಾರೀ ಕುಸಿತವಾಗಿದೆ. ಈಗಾಗಲೇ ಕೃಷಿಗೆ ನೀರು ಬಿಡುವುದನ್ನು ಪೂರ್ತಿಯಾಗಿ ನಿಲ್ಲಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್ 2, 2016ರಂದು ಕೆ.ಆರ್.ಎಸ್ ನಲ್ಲಿ 13.52 ಟಿಎಂಸಿ ನೀರಿತ್ತು. ಆದರೆ ಈ ಬಾರಿ ಇರುವುದು ಜಸ್ಟ್ 7.15 ಟಿಎಂಸಿ ಮಾತ್ರ.

ಕಬಿನಿಯಲ್ಲೂ ಇದೇ ಪರಿಸ್ಥಿತಿ

ಕಬಿನಿಯಲ್ಲೂ ಇದೇ ಪರಿಸ್ಥಿತಿ

ಕಬಿನಿಯಲ್ಲೂ ಪರಿಸ್ಥಿತಿಯೇನೂ ಉತ್ತಮವಾಗಿಲ್ಲ. 2016ರಲ್ಲಿ ಇಲ್ಲಿ 4.33 ಟಿಎಂಸಿ ನೀರಿದ್ದರೆ ಈ ಬಾರಿ ಕೇವಲ 0.95 ಟಿಎಂಸಿ ನೀರಿದೆ. 2016ರಲ್ಲೂ ಹೇಮಾವತಿಯಲ್ಲಿ 4.40 ಟಿಎಂಸಿ ನೀರಿತ್ತು, ಆದರೆ ಈ ಬಾರಿ ಇರುವುದು 2.28 ಟಿಎಂಸಿ ನೀರು ಮಾತ್ರ. ಹಾರಂಗಿ ಜಲಾಶಯದಲ್ಲೂ 2015ರಲ್ಲಿ 0.57 ಟಿಎಂಸಿ ನೀರಿತ್ತು ಆದರೆ ಈಗ ಇರುವುದು 1.32 ಟಿಎಂಸಿ ಮಾತ್ರ.

ಬೋರ್ ವೆಲ್ ಗಳ ಮೇಲೆ ಸರಕಾರದ ಕಣ್ಣು

ಬೋರ್ ವೆಲ್ ಗಳ ಮೇಲೆ ಸರಕಾರದ ಕಣ್ಣು

ಒಂದೊಮ್ಮೆ ಬೆಂಗಳೂರಿಗೆ ಬೇಡಿಕೆಯಷ್ಟು ನೀರು ಪೂರೈಸಲು ಸಾಧ್ಯವಾಗದೇ ಇದ್ದಲ್ಲಿ ನಗರದ ಎಲ್ಲಾ ಖಾಸಗಿ ಬೋರ್ ವೆಲ್ ಗಳನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸರಕಾರ ಆಲೋಚನೆ ಮಾಡಿದೆ. ಸದ್ಯ ಈ ಬೋರ್ ವೆಲ್ ಗಳಿಂದ ಟ್ಯಾಂಕರ್ ಗಳು ನೀರು ತೆಗೆದು ಜನರಿಗೆ ಪೂರೈಕೆ ಮಾಡುತ್ತಿವೆ. (ಒನ್ ಇಂಡಿಯಾ ಸುದ್ದಿ)

English summary
If numbers are anything to go by, Karnataka's capital city is bracing itself for a thirsty summer. Bengaluru that ideally requires 1440 (MLD) million litres per day is currently getting only 1350 MLD. The shortage is only going to get worse with water reserves on an all-time low in the state's dams and reservoirs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X