ಹಾಲು ಮಾರಾಟ ಕೇಂದ್ರಗಳನ್ನೇ ಟಾರ್ಗೆಟ್ ಮಾಡುತ್ತಿರುವ ದರೋಡೆಕೋರರು!
ಬೆಂಗಳೂರು, ಜೂ. 30: ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ ಬೆಂಗಳೂರಿನಲ್ಲಿ ಕ್ರಿಮಿನಲ್ ಗಳು ಎಡೆ ಬಿಚ್ಚಿದ್ದಾರೆ. ಹಾಡ ಹಗಲೇ ಸಾರ್ವಜನಿಕ ಪ್ರದೇಶದಲ್ಲಿ ಒಂಟಿಯಾಗಿ ಓಡಾಡುವರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದಾರೆ. ಬುಧವಾರ ಬೆಳಗಿನ ಜಾವ ಹಾಲು ಮಾರಾಟ ಕೇಂದ್ರಗಳಿಗೆ ಎಂಟ್ರಿ ಕೊಟ್ಟಿರುವ ಕಿರಾತಕರು ಡ್ರಾಗರ್ ತೋರಿಸಿ ಸುಲಿಗೆ ಮಾಡಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನ ವಸಂತನಗರದಲ್ಲಿರುವ ಹಾಲು ಮಾರಾಟ ಕೇಂದ್ರಕ್ಕೆ ಎಂಟ್ರಿ ಕೊಟ್ಟಿರುವ ಕಿರಾತಕರು ಡ್ರಾಗರ್ ತೋರಿಸಿ ಹಾಲು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಳಿ ಸುಲಿಗೆ ಮಾಡಿದ್ದಾರೆ. ವಸಂತನಗರದ ನಾಲ್ಕನೇ ಮುಖ್ಯ ರಸ್ತೆಯಲ್ಲಿರುವ ಹಾಲು ಮಾರಾಟ ಕೇಂದ್ರಕ್ಕೆ ಬೆಳಗ್ಗೆ ಐದು ಗಂಟೆ ಸುಮಾರಿಗೆ ನುಗ್ಗಿರುವ ಇಬ್ಬರು ಕಿರಾತಕರು ಹಾಲು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಜೇಬಿನಲ್ಲಿದ್ದ ಹಣ ಕಸಿದು ಪರಾರಿಯಾಗಿದ್ದಾರೆ. ಲಾಂಗ್ ಹಾಗೂ ಕತ್ತಿ ತೋರಿಸಿ ಹೆದರಿಸಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಹಣ ಕೊಡಲು ನಿರಾಕರಿಸಿದ ಮಂಜುನಾಥ್ ಅವರ ಕುತ್ತಿಗೆ ಮೇಲೆ ಕತ್ತಿ ಇಟ್ಟು ಹೆದರಿಸಿ ಹಣ ಕಸಿದು ಪರಾರಿಯಾಗಿದ್ದಾರೆ.

ವಸಂತನಗರದ ಅಣತಿ ದೂರಲದಲ್ಲಿ ಹಾಲು ಮಾರಾಟ ಕೇಂದ್ರವನ್ನು ಟಾರ್ಗೆಟ್ ಮಾಡಿರುವ ಕಿರಾತಕರು ಇಮ್ರಾನ್ ಮತ್ತು ಅರವಿಂದ ಎಂಬುವರಿಗೂ ಚಾಕು ತೋರಿಸಿ ದರೋಡೆ ಮಾಡಿದ್ದಾರೆ. ಕಳೆದ ಒಂದು ವಾರದಿಂದಲೂ ಹಾಲು ಮಾರಾಟ ಮಾಡುವರನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡಿದ್ದಾರೆ.
Recommended Video
ಆರೋಪಿಗಳ ದುಷ್ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಹಾಲು ಮಾರಾಟ ಕೇಂದ್ರಗಳನ್ನೇ ಟಾರ್ಗೆಟ್ ಮಾಡಿರುವ ಡಿಯೋ ಬೈಕ್ ನಂಬರ್ ಜಾಡು ಹಿಡಿದು ಅರೋಪಿಗಳ ಪತ್ತೆಗೆ ಹೈಗ್ರೌಂಡ್ಸ್ ಪೊಲೀಸರು ಮುಂದಾಗಿದ್ದಾರೆ.












Click it and Unblock the Notifications