Bengaluru: ಮೋದಿ ರೋಡ್ ಶೋಗಾಗಿ ರೋಡ್ ಬ್ಲಾಕ್, ಬೆಳ್ಳಂಬೆಳಿಗ್ಗೆ ಗಲ್ಲಿ ಗಲ್ಲಿ ಸುತ್ತಿದ್ರು ಕೆಲಸಕ್ಕೆ ಹೋಗಲಾಗಲಿಲ್ಲ ಜನ

ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರೇ ದಿನ ಬಾಕಿ ಇದೆ. ಹೀಗಾಗಿ ಬಿಜೆಪಿ ಇಂದು ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ಹಮ್ಮಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿಪ್ರದರ್ಶನ ನಡೆದಿದೆ. ಇದಕ್ಕಾಗಿ ಬೆಂಗಳೂರಿನ ಹಲವೆಡೆ ರೋಡ್ ಬಂದ್ ಮಾಡಲಾಗಿದ್ದು ವಾಹನ ಸವಾರರು ಕಿರಿಕಿರಿಯನ್ನು ಅನುಭವಿಸಿದ್ದಾರೆ.

ಬೆಳ್ಳಂಬೆಳಿಗ್ಗೆ ಜನ ಗಲ್ಲಿ ಗಲ್ಲಿ ಸುತ್ತಿಸಿದ್ರು ಕೆಲಸಕ್ಕೆ ಹೋಗಲಾಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹಲವೆಡೆ ರೋಡ್ ಬಂದ್ ಮಾಡಿ ಬ್ಯಾರೆಕೇಡ್ ಹಾಕಿರುವುದರ ವಿರುದ್ಧ ಜನ ಆಕ್ರೊಶಗೊಂಡಿದ್ದಾರೆ. ಬ್ಯಾರಿಕೇಡ್ ತೆಗೆಯುವಂತೆ ಒತ್ತಾಯಿಸಿದ್ದಾರೆ. ಮೋದಿ ಆಗಮನಕ್ಕೂ ಮುನ್ನವೇ ಹಲವೆಡೆ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು ವಾಹನ ಸವಾರರು ಕಿರಿಕಿರಿಯನ್ನು ಅನುಭವಿಸಿದ್ದಾರೆ.

Bengaluru Road block since Modis arrival - tired riders round the alleys

'ಬೆಂಗಳೂರಿನಲ್ಲಿರುವ ಕನ್ನಡದ ಜನ ಕ್ಯಾಕರಿಸಿ ಉಗಿತಾ ಇದ್ದಾರೆ, ಆದರೆ ಉತ್ತರದ ವಲಸಿಗರು ಮೋದಿ ಭಜನೆ ಮಾಡ್ತಾ ಇದ್ದಾರೆ. ಕನ್ನಡದ ಧ್ವನಿಯಾಗುವವರಿಗೆ ನಿಮ್ಮ ಮತ ನೀಡಬೇಕೇ ಹೊರತು ನಿಮ್ಮ ಕೆಲಸವನ್ನು ಕಿತ್ತುಕೊಳ್ಳುವವರಿಗಲ್ಲ, ವಲಸಿಗರನ್ನು ಓಲೈಸುವವರಿಗಲ್ಲ' ಎಂದು ಅರುಣ್ ಕುಮಾರ್ ಎಂಬುವವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಒಂದೆಡೆ ಮೋದಿ ಆಗಮನದಿಂದ ಜನ ಸಂತೋಷಗೊಂಡು ಜೈಕಾರ ಹಾಕುತ್ತಿದ್ದರೆ ಮತ್ತೊಂದೆಡೆ ಜನ ಹಿಡಿ ಶಾಪ ಹಾಕಿತ್ತಿದ್ದಾರೆ. ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇನ್ನೂ ಪ್ರಧಾನಿ ಮೋದಿ ಆಗಮನದಿಂದ ಬೆಂಗಳೂರಿನಲ್ಲಿ ಮರಗಳ ಮಾರಣಹೋಮವೇ ನಡೆದಿದೆ. ಮೋದಿ ರ್‍ಯಾಲಿಗೆ ಸ್ಥಳಾವಕಾಶ ಮಾಡಿಕೊಡಲು ಅಧಿಕಾರಿಗಳು ರಸ್ತೆ ಬದಿ ಇದ್ದ ಮರಗಳನ್ನು ಕತ್ತರಿಸಿರುವ ಆರೋಪಗಳು ಕೇಳಿ ಬಂದಿವೆ. ಇಂದಿರಾನಗರದಿಂದ ಬಸವೇಶ್ವರನಗರದವರೆಗೆ ಮೋದಿ ರೋಡ್ ಶೋ ನಡೆಯಲಿದೆ. ಈ ಭಾಗದಲ್ಲಿ ನಿಮಿಷದ ರೋಡ್ ಶೋಗಾಗಿ ವರ್ಷಗಟ್ಟಲೆ ಬೆಳೆದು ನಿಂತ ಬೃಹತ್ ಮರಗಳನ್ನು ಧರೆಗುರುಳಿಸಲಾಗಿದೆ. ಜೊತೆಗೆ ಮರಗಳನ್ನು ಸ್ಥಳದಿಂದ ಸಾಗಿಸಲಾಗಿದೆ. ಈ ಬಗ್ಗೆ ಫೋಟೋಗಳನ್ನು ಹಂಚಿಕೊಂಡು ಜನ ಆಕ್ರೋಶ ಹೊರಹಾಕಿದ್ದಾರೆ.

ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ, ಪಿಎಂ ನರೇಂದ್ರ ಮೋದಿ ವಿರುದ್ಧ ಪರಿಸರ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮೋದಿ ಆಗಮನಕ್ಕಾಗಿ ಬೃಹತ್ ಮರಗಳನ್ನು ಕೆಡವಿರುವುದು ಎಷ್ಟು ಸರಿ ಎಂದು ಜನ ಪ್ರರ್ಶನೆ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೆಗಾ ರೋಡ್‌ ಶೋ ಆರಂಭವಾಗಿದೆ. ಜೆಪಿ ನಗರದ ಬ್ರಿಗೇಡ್‌ ಮಿಲೇನಿಯಂನ ಸೋಮೇಶ್ವರ ಸಭಾಭವನದಿಂದ ರೋಡ್‌ ಶೋ ಆರಂಭವಾಗಿದೆ. ತೆರೆದ ವಾಹನದಲ್ಲಿ ಮೋದಿ ರೋಡ್‌ ಶೋ ಆರಂಭಿಸಿದ್ದಾರೆ. ಪ್ರಧಾನಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್‌ ಸಾಥ್‌ ನೀಡಿದ್ದಾರೆ.

ಸರಿಯಾಗಿ ಶನಿವಾರ ಬೆಳಗ್ಗೆ 10.20ಕ್ಕೆ ಮೋದಿ ರೋಡ್‌ ಶೋ ಆರಂಭವಾಗಿದ್ದು, ಜೆಪಿ ನಗರದಿಂದ ಮಲ್ಲೇಶ್ವರದವರೆಗೂ ಸುಮಾರು 26.5 ಕಿಮೀ ರೋಡ್‌ ಶೋ ಸಾಗಲಿದೆ. ಮೋದಿ ಸಾಗುವ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ರಸ್ತೆಯದ್ದಕ್ಕೂ ಜನ ಸಾಗರವೇ ನೆರೆದಿದೆ. ರೋಡ್‌ ಶೋ ನೋಡಲು ಆಗಮಿಸುವ ಜನರನ್ನು ಪರಿಶೀಲಿಸಿ ಬ್ಯಾರಿಕೇಡ್‌ ಬಳಿ ಬಿಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+