ಬೆಂಗಳೂರು ಹೋಟೆಲ್‌ಗಳಲ್ಲಿ ಆಹಾರದ ಬೆಲೆ ಶೇ 10ರಷ್ಟು ಏರಿಕೆ- ಯಾವಾಗಿಂದ, ಕಾರಣವೇನು? ತಿಳಿಯಿರಿ

ಬೆಂಗಳೂರು, ಜುಲೈ 27: ತರಕಾರಿಗಳು, ಆಹಾರ ಧಾನ್ಯಗಳು, ಹಾಲು ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್ ಮಾಲೀಕರು ಆಹಾರ ಪದಾರ್ಥಗಳ ಬೆಲೆಗಳನ್ನು ಏರಿಸಲು ಮುಂದಾಗಿದ್ದಾರೆ. ಹೋಟೆಲ್‌ ಹಾಗೂ ರೆಸ್ಟೊರಾಂಟ್‌ಗಳಲ್ಲಿ ಶೇ 10 ರಷ್ಟು ಆಹಾರ ಬೆಲೆ ಏರಿಸಲು ಹೋಟೆಲ್‌ ಮಾಲೀಕರ ಸಂಘ ನಿರ್ಧರಿಸಿದೆ.

ಆಗಸ್ಟ್ 1 ರಿಂದ ಆಹಾರ ಪದಾರ್ಥಗಳ ಬೆಲೆಯನ್ನು ಶೇ 10 ರಷ್ಟು ಹೆಚ್ಚಿಸಲು ಹೋಟೆಲ್‌ ಮಾಲೀಕರು ನಿರ್ಧರಿಸಿದ್ದಾರೆ. ಬಹುತೇಕ ರೆಸ್ಟೋರೆಂಟ್‌ಗಳು ಈ ನಿರ್ಧಾರವನ್ನು ಒಪ್ಪಿಕೊಂಡಿವೆ. ತಿಂಡಿ- ತಿನಿಸುಗಳು ಬೆಲೆ ಈಗಾಗಲೇ 5ರಿಂದ 10ರಷ್ಟು ಏರಿಕೆಯಾಗಿದೆ.

Bengaluru Restaurants, Hotels: Food Prices Increase By 10% From August 1, Here’s Why

ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್‌ನಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆಗಳನ್ನು ಹೆಚ್ಚಿಸಲಾಗುತ್ತದೆ. ಆದರೆ, ಈ ವರ್ಷ ಅಗತ್ಯ ವಸ್ತುಗಳ ಬೆಲೆಗಳು ಅಧಿಕವಾಗಿ ಹೆಚ್ಚಿದ್ದರಿಂದ ಅನಿವಾರ್ಯವಾಗಿ ಆಹಾರ ಪದಾರ್ಥಗಳ ಬೆಲೆಗಳನ್ನು ಏರಿಸಲು ನಿರ್ಧರಿಸಬೇಕಾಯಿತು ಎಂದು ಹೋಟೆಲ್‌ ಮಾಲೀಕರ ಸಂಘ ಹೇಳಿಕೆ

'ಚುನಾವಣೆಗಳು ಮತ್ತು ಇತರ ಬೆಳವಣಿಗೆಗಳು ನಡೆಯುತ್ತಿರುವುದರಿಂದ ನಾವು ಕಾಯುತ್ತಿದ್ದೆವು. ಆದರೆ ಈಗ ಎಲ್ಲಾ ಪದಾರ್ಥಗಳ ಬೆಲೆಗಳು ಏರಿಕೆಯಾಗಿರುವುದರಿಂದ ದರವನ್ನು ಹೆಚ್ಚಿಸಲು ನಾವು ಔಪಚಾರಿಕವಾಗಿ ನಿರ್ಧರಿಸಿದ್ದೇವೆ' ಎಂದು ಬಿಬಿಎಚ್‌ಎ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ ಎಂದು 'ದಿ ಹಿಂದೂ' ಪತ್ರಿಕೆ ವರದಿ ಮಾಡಿದೆ.

ಈಗಾಗಲೇ ಬೆಲೆ ಹೆಚ್ಚಿಸಿರುವ ಹೋಟೆಲ್‌ ಹಾಗೂ ರೆಸ್ಟೊರಾಂಟ್‌ಗಳು ಮತ್ತೆ ಏರಿಕೆ ಮಾಡುವುದಿಲ್ಲ. ಈ ವರ್ಷ ಬೆಲೆಯನ್ನು ಹೆಚ್ಚಿಸದ ಹೋಟೆಲ್‌ಗಳಲ್ಲಿ ಶೇ 10 ರಷ್ಟು ಹೆಚ್ಚಳವು ಜಾರಿಗೆ ಬರಲಿದೆ ಎಂದು ಪಿಸಿ ರಾವ್ ತಿಳಿಸಿದ್ದಾರೆ.

Bengaluru Restaurants, Hotels: Food Prices Increase By 10% From August 1, Here’s Why

ಎಲ್ಲಾ ಸರಕುಗಳ ಬೆಲೆಗಳು ಹೆಚ್ಚಾಗಿರುವುದರಿಂದ, ಬೆಂಗಳೂರಿನ ಹೋಟೆಲ್‌ಗಳು ಆಹಾರದ ಬೆಲೆಯನ್ನು ಕನಿಷ್ಠ ಶೇ 10% ರಷ್ಟು ಹೆಚ್ಚಿಸಲು ನಿರ್ಧರಿಸಿವೆ ಎಂದು ಪಿಸಿ ರಾವ್ ಮಾಹಿತಿ ನೀಡಿದ್ದಾರೆ.

ಟೊಮೆಟೊ, ಮೆಣಸಿನಕಾಯಿ ಮತ್ತು ಇತರ ತರಕಾರಿಗಳ ಬೆಲೆಗಳು ಇತ್ತೀಚೆಗೆ ಹೆಚ್ಚಾದ ಕಾರಣ ಹೋಟೆಲ್‌ಗಳು ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ಹಾಲಿನ ಬೆಲೆಗಳ ಪರಿಷ್ಕರಣೆ ನಂತರ ಆಹಾರದ ಬೆಲೆ ಏರಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೋಟೆಲ್ ಮಾಲೀಕರು ಈ ಹಿಂದೆ 'ದಿ ಹಿಂದೂ'ಗೆ ತಿಳಿಸಿದ್ದರು.

ಕಳೆದ ವಾರ ನಂದಿನಿ ಹಾಲು 3 ರೂಪಾಯಿಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ ಎಂದು ಘೋಷಿಸಿದ ನಂತರ ಹೋಟೆಲ್‌ ಮಾಲೀಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

Bengaluru Restaurants, Hotels: Food Prices Increase By 10% From August 1, Here’s Why

ದೇಶದಾದ್ಯಂತ ತರಕಾರಿ ಬೆಲೆ ಏರಿಕೆ

ಈ ತಿಂಗಳ ಆರಂಭದಲ್ಲಿ, ದೇಶದಾದ್ಯಂತ ತರಕಾರಿ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಮೇ ತಿಂಗಳ ಆರಂಭದಿಂದ ಪಾಟ್ನಾದಲ್ಲಿ ತರಕಾರಿ ಬೆಲೆಗಳು ಗಣನೀಯವಾಗಿ ಹೆಚ್ಚಿವೆ. ಹೂಕೋಸು ಬೆಲೆ ಕೆಜಿಗೆ 60 ರೂ.ಗಳಾಗಿದ್ದು, ಮೇ ತಿಂಗಳ ಆರಂಭದಲ್ಲಿ ಕೆಜಿಗೆ 40 ರೂ. ಆಗಿದೆ. ಅದೇ ರೀತಿಯಲ್ಲಿ, ಎಲೆಕೋಸು ಬೆಲೆ ಕೆಜಿಗೆ 40 ರೂಪಾಯಿಯಿಂದ 60 ರೂ.ಗೆ ಏರಿದೆ. ಆಲೂಗೆಡ್ಡೆ ಮತ್ತು ಈರುಳ್ಳಿ ಬೆಲೆಯು ಮೇ ತಿಂಗಳ ಆರಂಭದಲ್ಲಿ ಕೆಜಿಗೆ ರೂ 20 ಇತ್ತು. ಜುಲೈನಲ್ಲಿ ಕೆಜೆಗೆ 30 ರೂಪಾಯಿ ಏರಿಕೆಯಾಗಿದೆ.

ಪಾಟ್ನಾ ಹೊರತುಪಡಿಸಿ, ಇತರ ಹಲವಾರು ನಗರಗಳು ತರಕಾರಿ ಬೆಲೆಯಲ್ಲಿ ಏರಿಕೆ ಕಂಡಿವೆ. ಪಶ್ಚಿಮ ಬಂಗಾಳದಲ್ಲಿ ತರಕಾರಿ ಬೆಲೆ ಶೇ.30-35ರಷ್ಟು ಏರಿಕೆಯಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ತಿಂಗಳ ಆರಂಭದಲ್ಲಿ ಟೊಮೆಟೊ ಕೆಜಿಗೆ 130-150 ರೂ ಮತ್ತು ಹಸಿರು ಮೆಣಸಿನಕಾಯಿ 300-350 ರೂ. ಆಗಿದೆ.

Bengaluru Restaurants, Hotels: Food Prices Increase By 10% From August 1, Here’s Why

ಒಡಿಶಾದಲ್ಲಿ, ತರಕಾರಿ ಬೆಲೆಗಳು ತೀವ್ರವಾಗಿ ಏರಿಕೆ ಕಂಡಿವೆ. ಟೊಮೆಟೊ ಸುಮಾರು ಕೆಜಿಗೆ 140-160 ರೂ ಮಾರಾಟವಾಗುತ್ತಿದ್ದರೆ, ಹಸಿರು ಮೆಣಸಿನಕಾಯಿ ಕೆಜಿಗೆ 200 ರೂ ಮತ್ತು ಶುಂಠಿ ಕೆಜಿಗೆ 300 ರೂಪಾಯಿಗೆ ಮಾರಾಟವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+