Bengaluru Rent: ಬೆಂಗಳೂರಲ್ಲಿ ಬಾಡಿಗೆದಾರರಿಗೆ ಹೊಸ ಸಂಕಷ್ಟ: ಮನೆ ಮಾಲೀಕರಿಂದ ವಿಚಿತ್ರ ಬೇಡಿಕೆ
Bengaluru Rent: ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಬಾಡಿಗೆ ಮನೆಗೆ ಬಾಡಿಗೆ ಪಾವತಿ ಮಾಡುವುದು ಹಾಗೂ ಆಸ್ತಿ ವಿಚಾರಗಳು ಎಂದಿಗೂ ಹಾಟ್ ಟಾಪಿಕ್‌ಗಳಾಗಿವೆ. ಇದೀಗ ಅಂತಹದ್ದೇ ಒಂದು ವಿಚಾರವು ಚರ್ಚೆ ಆಗುತ್ತಿದೆ. ನನ್ನ ಮಗ ಹಿಂತಿರುಗುತ್ತಿದ್ದಾನೆ ಮತ್ತು ಮನೆ ಬೇಕು ಎನ್ನುವ ವಿಷಯದಿಂದ ಹಿಡಿದು ಆಸ್ತಿಯನ್ನು ಮಾರಾಟ ಮಾಡುವ ಯೋಜನೆಗಳು, ಬಾಡಿಗೆ ಹೆಚ್ಚಳ ಮತ್ತು ಹೆಚ್ಚಿನ ಅಡ್ವಾನ್ಸ್ ಮೊತ್ತದ ಬೇಡಿಕೆಗಳವರೆಗೆ ಬೇರೆ ಬೇರೆ ಕಾರಣಗಳಿಗೆ ಬೆಂಗಳೂರಿನ ಬಾಡಿಗೆದಾರರನ್ನು ಮನೆಯಿಂದ ಹೊರ ಹಾಕುವುದಕ್ಕೆ ಮನೆಯ ಮಾಲೀಕರು ಈಗಾಗಲೇ ಬಾಡಿಗೆಗೆ ಇರುವ ನಿವಾಸಿಗಳನ್ನು ಹೊರಹಾಕಲು ಬೇರೆ ಬೇರೆ ಕಾರಣಗಳನ್ನು ಬಳಸುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಕೆಲವು ಮನೆಗಳ ಮಾಲೀಕರು ಬಾಡಿಗೆದಾರರನ್ನು ಹೊರ ಹಾಕುವುದಕ್ಕೆ ವಿಚಿತ್ರ ಕಾರಣಗಳನ್ನು ಹುಡುಕುತ್ತಿದ್ದಾರೆ. ಮನೆ ಮಾಲೀಕರು ಅನುಮತಿಯೊಂದಿಗೆ ಬಟ್ಟೆಗಳನ್ನು ಒಣಗಿಸಲು ನೆರೆಹೊರೆಯವರ ಮನೆಯನ್ನು ಬಳಸುತ್ತಿದ್ದಾರೆಂದು ಗೊತ್ತಾದ ಮೇಲೆ ಬಾಡಿಗೆಗೆ ಇರುವವರನ್ನು ಅವರ ಮನೆಯಿಂದ ಖಾಲಿ ಮಾಡಲು ಹೇಳಲಾಗಿದೆ ಎಂದು ಬಾಡಿಗೆದಾರರೊಬ್ಬರು ಆರೋಪಿಸಿದ್ದಾರೆ.
ಬೆಂಗಳೂರಿನ ಬಾಡಿಗೆ ಮನೆಗಳ ವಿಚಾರದಲ್ಲಿ ಬಹಳದಿನಗಳಿಂದಲೂ ಅಡ್ವಾನ್ಸ್ ಮೊತ್ತ ಹೆಚ್ಚಾಗಿರುವ ಬಗ್ಗೆ ಹೆಚ್ಚು ಚರ್ಚೆ ಆಗುತ್ತಲ್ಲೇ ಇದೆ. ಬೆಂಗಳೂರು ಬಾಡಿಗೆ ಹಾಗೂ ಬಾಡಿಗೆ ಮನೆಯ ಅಡ್ವಾನ್ಸ್ ಹೆಚ್ಚಳವೂ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ, ನಗರದ ಹಲವಾರು ಭಾಗಗಳಲ್ಲಿ ವಸತಿ ಬೇಡಿಕೆ ಹೆಚ್ಚಾಗುತ್ತಿರುವುದು ನಡುವೆಯೂ ಮನೆ ಬಾಡಿಗೆದಾರರನ್ನು ವಿಚಿತ್ರ ಕಾರಣಕ್ಕೆ ಬಾಡಿಗೆದಾರರನ್ನು ಮನೆಯಿಂದ ಖಾಲಿ ಮಾಡಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಹೊಸ ಬಾಡಿಗೆ ಮನೆದಾರರನ್ನು ಆಕರ್ಷಿಸುವ ಉದ್ದೇಶದಿಂದ ಹೊಸ ಹೊಸ ತಕರಾರುಗಳನ್ನು ಮಾಡುತ್ತಿದ್ದಾರೆ ಕೆಲವರು ಆರೋಪಿಸಿದ್ದಾರೆ. ಬಾಡಿಗೆದಾರರು ಉಲ್ಲೇಖಿಸುವ ಸಾಮಾನ್ಯ ಕಾರಣಗಳಲ್ಲಿ ಮನೆ ಮಾಲೀಕರ ಮಗ, ಮಗಳು ಅಥವಾ ಸಹೋದರ ವಿದೇಶದಿಂದ ಹಿಂತಿರುಗುತ್ತಿದ್ದಾರೆ ಎಂಬ ನೆಪವೊಡ್ಡುತ್ತಿದ್ದಾರೆ ಎಂದು ಹೇಳಲಾಗಿದೆ. ಮನೆ ಬೇಕು ಆದರೆ, ಮನೆ ಮಾಲೀಕರು ಆಸ್ತಿಯನ್ನು ಮಾರಾಟ ಮಾಡಲು ಯೋಜಿಸುತ್ತಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನಡೆದ ಚರ್ಚೆಯಲ್ಲಿ ಈ ವಿಷಯಗಳು ಬೆಳಕಿಗೆ ಬಂದಿದೆ. ಬೆಂಗಳೂರಿನ ಬಾಡಿಗೆದಾರರು ದೀರ್ಘಾವಧಿಯ ಬಾಡಿಗೆ ಒಪ್ಪಂದಗಳನ್ನು ಉಳಿಸಿಕೊಂಡಿದ್ದರೂ ಸಹ ಮನೆ ಖಾಲಿ ಮಾಡುವಂತೆ ಕೆಲವು ಬಾಡಿಗೆ ಮನೆದಾರರು ಒತ್ತಡ ಹೇರುತ್ತಿದ್ದಾರೆ. ಹೆಚ್ಚು ಬಾಡಿಗೆಗೆ ಪಡೆಯುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಕೆಲವು ಬಾಡಿಗೆದಾರರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಮನೆ ಮಾಲೀಕರು ಕಾನೂನುಬದ್ಧವಾಗಿ ತಮ್ಮ ಮನೆಗಳನ್ನು ಮರಳಿ ಪಡೆಯಲು ಅರ್ಹರಾಗಿದ್ದರೂ, ಕೆಲವು ಬಾಡಿಗೆದಾರರು ವಿಚಿತ್ರ ನೆಪಗಳನ್ನು ಕೊಡುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ದಿಶಾಕಾ ಎನ್ನುವವರು ಹಂಚಿಕೊಂಡು ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ತಮ್ಮ ಮನೆ ಮಾಲೀಕರು ಆರಂಭದಲ್ಲಿ ಅಪಾರ್ಟ್‌ಮೆಂಟ್ ಖಾಲಿ ಮಾಡಬೇಕಾಗಿದೆ ಎಂದು ಹೇಳಿದ್ದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಆದಾಗ್ಯೂ, ಆ ಪ್ರದೇಶದಲ್ಲಿ ಹೆಚ್ಚುತ್ತಿರುವ ಬಾಡಿಗೆ ದರಗಳು ಇದಕ್ಕೆ ಕಾರಣವಾಗಿರಬಹುದು ಎಂದು ಅವರು ಹೇಳಿಕೊಂಡಿದ್ದಾರೆ ನನ್ನ ಮನೆ ಮಾಲೀಕರು ನನಗೆ ಸುಳ್ಳು ಹೇಳಿದ್ದರು. ಅವರು ಏಕಾಏಕಿ ನನ್ನ ಬಾಡಿಗೆಯನ್ನು ತಿಂಗಳಿಗೆ 4 ಸಾವಿರ ರೂ.ಗಳಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ. ಅವರ ಸಹೋದರರೊಬ್ಬರು ನಮ್ಮ ಅಪಾರ್ಟ್ಮೆಂಟ್‌ಗೆ ಬರುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಆದರೆ ಇದು ಸುಳ್ಳು ಎಂದು ಅವರು ಹೇಳಿದ್ದಾರೆ.












Click it and Unblock the Notifications