• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಜ.10ರಂದು ಒಂದೇ ಒಂದು ಕೊರೊನಾ ಸಾವು ಇಲ್ಲ!

|

ಬೆಂಗಳೂರು, ಜನವರಿ 11:ಕರ್ನಾಟಕದ ಕೊರೊನಾ ರಾಜಧಾನಿಯೂ ಆಗಿ ಬದಲಾಗಿದ್ದ ಬೆಂಗಳೂರಿನಲ್ಲಿ ಆರು ತಿಂಗಳ ನಂತರ ಭಾನುವಾರ ಶೂನ್ಯ ಸಾವು ವರದಿಯಾಗಿದೆ.

ರಾಜ್ಯದ ಕೊರೊನಾ ಸಾವು ಮತ್ತು ಸೋಂಕಿನ ಪ್ರಕರಣಗಳಲ್ಲಿ ಸುಮಾರು ಮೂರನೇ ಒಂದರಷ್ಟು ಬೆಂಗಳೂರು ನಗರದಲ್ಲೇ ದಾಖಲಾಗಿದೆ.

ನವದೆಹಲಿ: ಉಚಿತವಾಗಿ ಕೊವಿಡ್-19 ಲಸಿಕೆ ನೀಡಲು 89 ಕೇಂದ್ರಗಳು ಫಿಕ್ಸ್!

ಇದುವರೆಗೆ ರಾಜ್ಯದಲ್ಲಿ 12,140 ಮಂದಿ ಕೊರೊನಾದಿಂದ ಮೃತರಾಗಿದ್ದು ಇದರಲ್ಲಿ ಬೆಂಗಳೂರಿನಲ್ಲೇ 4,346 ಸಾವು ಸಂಭವಿಸಿದೆ. ಆದರೆ ಈಗ ಬೆಂಗಳೂರಿನಲ್ಲಿ ಶೂನ್ಯ ಸಾವು ವರದಿಯಾಗಿರುವುದು ಮತ್ತು ನಿರಂತರವಾಗಿ 500ಕ್ಕಿಂತ ಕಸಿಮೆ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ.

ಕೊನೆಯ ಬಾರಿಗೆ ಬೆಂಗಳೂರಿನಲ್ಲಿ ಜುಲೈ 7ರಂದು ಶೂನ್ಯ ಸಾವು ವರದಿಯಾಗಿತ್ತು.792 ಹೊಸ ಪ್ರಕರಣ: ಉಳಿದಂತೆ ಭಾನುವಾರ ರಾಜ್ಯವ್ಯಾಪಿ ಒಟ್ಟು 792 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಪ್ರಸ್ತುತ 9649 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 202 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1.13 ಲಕ್ಷ ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.

   ಸಾಡೇಸಾತಿ ಶನಿ ಇದು ನಿಮ್ಮ ರಾಶಿಯಲ್ಲಿದ್ದರೆ ದೋಷವೋ ಫಲವೋ? | Effects of Sade Sati On Signs | Oneindia Kannada

   ತುಮಕೂರು ಮತ್ತು ಮೈಸೂರಿನಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಬಾಗಲಕೋಟೆಯಲ್ಲಿ ಕೊರೊನಾದ ಹೊಸ ಪ್ರಕರಣಗಳು ದಾಖಲಾಗಿಲ್ಲ.

   English summary
   Karnataka on Sunday reported 792 COVID-19 cases and two fatalities, taking the total cases and the toll to 9,27,559 and 12,140 respectively, the health department said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X