ಬೆಂಗಳೂರು ರಿಕ್ಲೇಮ್ : ನಮ್ಮ ಬೆಂಗಳೂರಿನ ಉಳಿವಿಗಾಗಿ ಅಭಿಯಾನ

ಬೆಂಗಳೂರು, ಡಿಸೆಂಬರ್ 11 : ಬೆಂಗಳೂರು ನಗರವನ್ನು ವಿಶಿಷ್ಟ ಹಿತಾಸಕ್ತಿಗಳ ಕಪಿಮುಷ್ಠಿಯಿಂದ ರಕ್ಷಿಸಿ, ನಾಗರಿಕರ ಪಾಲ್ಗೊಳ್ಳಿವಿಕೆ ಮನೋಭಾವ ದಿನದ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಉತ್ತಮ ಜನಪ್ರತಿನಿಧಿಗಳ ಆಯ್ಕೆಗಾಗಿ ಮತ ಚಲಾವಣೆಯೊಂದೇ ನಾಗರಿಕರಿಗಿರುವ ಬಹುಮುಖ್ಯ ಅಸ್ತ್ರ. ಈ ಅಸ್ತ್ರದ ಮೂಲಕವೇ ಉತ್ತಮ ಬೆಂಗಳೂರು ಮರುಕಳಿಸುವಂತೆ ಮಾಡುವ ಪ್ರಯತ್ನವಾಗಿ ಯುನೈಟೆಡ್ ಬೆಂಗಳೂರು ರಿಕ್ಲೇಮ್ ಬೆಂಗಳೂರು ಅಭಿಯಾನ ಆಯೋಜಿತ್ತಿದೆ.

Bengaluru reclaim calling citizens for betterment

ಈ ಅಭಿಯಾನದ ಮೂಲಕ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳನ್ನು ನೋಂದಣಿ ಮಾಡುವುದು ಮೊದಲ ಹೆಜ್ಜೆ. ಆ ಮೂಲಕ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಅಧಿಕಾರ ಪಡೆದುಕೊಳ್ಳಬೇಕೆಂಬುದು ಇದರ ಹಿಂದಿನ ಉದ್ದೇಶ.

2018ರ ರಾಜ್ಯ ವಿಧಾನಸಭೆ ಚುನಾವಣೆ ಈಗಾಗಲೇ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಾಗೃತ ಮತದಾರರನ್ನು ಮತದಾನದ ಪವಿತ್ರ ಕೆಲಸಕ್ಕೆ ಹುರಿದುಂಬಿಸುವ ಸಲುವಾಗಿ ಮತದಾರರ ನೋಂದಣಿ ಶಿಬಿರ ಆಯೋಜಿಸಲಾಗುತ್ತಿದೆ. ಆಸಕ್ತರು ಮೊಬೈಲ್ ಸಂಖ್ಯೆ 9206056010 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಅಭಿಯಾನದಲ್ಲಿ ಭಾಗಿಯಾಗಬಹುದು. ಪ್ರಜಾಪ್ರಭುತ್ವದ ಉಳಿವಿಗಾಗಿ ಬೆಂಗಳೂರಿಗರು ಅಭಿಯಾನದಲ್ಲಿ ಪಾಲ್ಗೊಳ್ಳಬೇಕು.

ಬೆಂಗಳೂರು ರಿಕ್ಲೇಮ್ ಅಭಿಯಾನದ ಭಾಗವಾಗಿ ಮತದಾರರ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದ್ದು, ಆ ಕುರಿತಂತೆ ಅರ್ಧದಿನದ ಕಾರ್ಯಾಗಾರ ಏರ್ಪಡಿಸಲಾಗಿದೆ. ಕಾರ್ಯಾಗಾರದಲ್ಲಿ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಸಾಮಾಜಿಕ ಕಾರ್ಯಕರ್ತ, ಪಿ.ಜಿ. ಭಟ್, ಸ್ವರಾಜ್ಯಮಾಗ್ ಸಿಇಓ ಪ್ರಸನ್ನ ವಿಶ್ವನಾಥನ್, ಹಿರಿಯ ವಕೀಲರಾದ ವಿವೇಕ್ ಸುಬ್ಬಾರೆಡ್ಡಿ ಪಾಲ್ಗೊಳ್ಳಲಿದ್ದಾರೆ.

ದಿನಾಂಕ : 12, ಡಿಸೆಂಬರ್ 2017

ಸ್ಥಳ : ಡಿಜೆಬಿ ಆಡಿಟೋರಿಯಂ, ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ, ಬೆಂಗಳೂರು

ಸಮಯ : ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+