• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್: ಎಂಟಿಬಿ ಹೇಳಿದ್ದೇನು?

|
   Ramalinga Reddy : ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಪಡೆದ ಬಗ್ಗೆ ಎಂ ಟಿ ಬಿ ನಾಗರಾಜ್ ಹೇಳಿದ್ದೇನು?

   ಬೆಂಗಳೂರು, ಜುಲೈ 19: ರಾಮಲಿಂಗಾರೆಡ್ಡಿಯವರು ರಾಜೀನಾಮೆ ಹಿಂಪಡೆದಿರುವುದರಿಂದ ಆಘಾತವಾಗಿದೆ ಎಂದು ಶಾಸಕ ಎಂಟಿಬಿ ನಾಗರಾಜು ಹೇಳಿದ್ದಾರೆ.

   ಅಜ್ಞಾತ ಸ್ಥಳದಿಂದ ಮತ್ತೊಂದು ವಿಡಿಯೋ ಹೊರಬಿಟ್ಟಿರುವ ಎಂಟಿಬಿ ನಾಗರಾಜು ರಾಮಲಿಂಗಾರೆಡ್ಡಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

   ನಾನು ರಾಜೀನಾಮೆಯನ್ನು ಮೊನ್ನೆಯೇ ವಾಪಸ್ ಪಡೆದಿದ್ದೇನೆ: ರಾಮಲಿಂಗಾರೆಡ್ಡಿ

   ಅಜ್ಞಾತ ಸ್ಥಳದಿಂದ ಮತ್ತೊಂದು ವಿಡಿಯೋವನ್ನು ಮಾಡಿರುವ ಎಂಟಿಬಿ ನಾಗರಾಜ್, ನಾವು ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿಯವರ ದಾರಿಯನ್ನು ಅನುಸರಿಸುವುದಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಹಿಂಪಡೆಯಬಾರದು ಎಂದು ರಾಮಲಿಂಗಾರೆಡ್ಡಿ ಹಾಗೂ ಉಳಿದ ಶಾಸಕರು ಸೇರಿ ಚರ್ಚೆ ನಡೆಸಿದ್ದೆವು.

   ಆದರೆ ಕೊನೆಯ ಕ್ಷಣದಲ್ಲಿ ರಾಮಲಿಂಗಾರೆಡ್ಡಿಯವರು ರಾಜೀನಾಮೆ ವಾಪಸ್ ಪಡೆದಿರುವುದು ಬೇಸರ ತಂದಿದೆ. ಅವರು ನಮಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ.

   ಗುರುವಾರಷ್ಟೇ ಎಸ್.ಟಿ.ಸೋಮಶೇಖರ್, ಮುನಿರತ್ನ ಮತ್ತು ಭೈರತಿ ಬಸವರಾಜು ಅವರು ಒಟ್ಟಾಗಿ ವಿಡಿಯೋ ಸಂದೇಶ ರವಾನಿಸಿದ್ದು, ವಿಡಿಯೋದಲ್ಲಿ ಮಾತನಾಡಿರುವ ಶಾಸಕ ಎಸ್‌.ಟಿ.ಸೋಮಶೇಖರ್ ಅವರು, ನಾವು ರಾಮಲಿಂಗಾ ರೆಡ್ಡಿ ಅವರನ್ನು ಅನುಸರಿಸುವುದಿಲ್ಲ ಎಂದು ಹೇಳಿದ್ದರು.

   ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಅತೃಪ್ತ ಶಾಸಕರು

   ರಾಜೀನಾಮೆ ನೀಡಿದ ಮೇಲೂ ಸಹ ರಾಮಲಿಂಗಾ ರೆಡ್ಡಿ ಅವರು ನಮ್ಮೊಂದಿಗೆ ಮಾತನಾಡುವ ಸಂದರ್ಭದಲ್ಲೂ ಸಹ ರಾಜೀನಾಮೆ ಹಿಂಪಡೆಯುವುದಿಲ್ಲವೆಂದೇ ಹೇಳಿದ್ದರು, ಆದರೆ ಅವರು ಒತ್ತಡಕ್ಕೆ ಒಳಗಾಗಿ ರಾಜೀನಾಮೆ ಹಿಂಪಡೆವ ನಿರ್ಣಯ ಕೈಗೊಂಡಿದ್ದಾರೆ ಮತ್ತು ಸರ್ಕಾರಕ್ಕೆ ಬೆಂಬಲಿಸುವ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಸೋಮಶೇಖರ್ ಹೇಳಿದ್ದಾರೆ.

   ರಾಮಲಿಂಗಾ ರೆಡ್ಡಿ ಅವರಂತಲ್ಲದೆ ನಾವು ನಮ್ಮ ನಿರ್ಣಯಕ್ಕೆ ಬದ್ಧರಾಗಿದ್ದು, ನಾವು ಯಾರೂ ಸಹ ರಾಜೀನಾಮೆ ಹಿಂಪಡೆಯುವುದಿಲ್ಲವೆಂದು ಸೋಮಶೇಖರ್ ಹೇಳಿದ್ದರು. ಮುಂಬೈನಲ್ಲಿ ತಂಗಿದ್ದ ಅತೃಪ್ತ ಶಾಸಕರು ಈಗ ಸ್ಥಳ ಬದಲಾಯಿಸಿದ್ದಾರೆ ಎನ್ನಲಾಗಿದ್ದು, ಶಾಸಕರು ಎಲ್ಲಿಗೆ ತೆರಳಿದ್ದಾರೆ, ಎಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

   English summary
   Bengaluru rebel MLAs clarified that they will not follow Ramalinga reddy decision and they are firm on resignation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X