ಬೆಂಗಳೂರಿನಲ್ಲಿ ರಣಚಂಡಿ ಮಳೆ: ಆಫೀಸ್‌ನಿಂದ ಮನೆಗೆ ಹೋಗಲು ಸಿಬ್ಬಂದಿ ಹಿಂದೇಟು: ಹವಾಮಾನ ಇಲಾಖೆ ಎಚ್ಚರಿಕೆ ಏನು?

Bengaluru Rains: ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ವರುಣ ಬಿಡುವು ಕೊಟ್ಟಿದ್ದ. ಆದರೆ, ಇಂದು (ಆಗಸ್ಟ್‌ 28) ಸಂಜೆ 5 ಗಂಟೆ ವೇಳೆಗೆ ಇದ್ದಕ್ಕಿದ್ದಂತೆ ನಗರದಲ್ಲಿ ಮಳೆರಾಯ ಆರ್ಭಟ ಶುರು ಮಾಡಿದ್ದಾನೆ. ಪರಿಣಾಮ ಹಲವೆಡೆ ಅವಾಂತರಗಳೇ ಸೃಷ್ಟಿ ಆಗಿವೆ. ರಸ್ತೆಗಳೆಲ್ಲಾ ಚರಂಡಿಯಂತೆ ಮಾರ್ಪಟ್ಟು ವಾಹನ ಸವಾರರು ಪರದಾಡುತ್ತಿದ್ದರೆ, ಹಲವು ಕಚೇರಿ ಸಿಬ್ಬಂದಿಗಳದ್ದು ಮತ್ತೊಂದು ಗೋಳು.. ಆಫಿಸ್‌ನಿಂದ ಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಆಗಸ್ಟ್ 28) ಬೆಳಗ್ಗೆಯಿಂದಲೂ ಬಿಸಿಲಿನ ವಾತಾವರಣ ಇದ್ದು, ಸಂಜೆ ಆಗುತ್ತಿದ್ದಂತೆ ಮಳೆರಾಯನ ಆರ್ಭಟ ಶುರು ಮಾಡಿದ್ದಾನೆ. ಪರಿಣಾಮ ಹಲವೆಡೆ ದೊಡ್ಡ ದೊಡ್ಡ ಅವಾಂತರಗಳೇ ಸಂಭವಿಸಿವೆ. ರಸ್ತೆಗಳೆಲ್ಲ ಚರಂಡಿಯಂತೆ ಮಾರ್ಪಟ್ಟು ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಮತ್ತೊಂದೆಡೆ, ಭಾರೀ ಮಳೆ ಮುಂದುವರೆದ ಕಾರಣ ಆಫಿಸ್‌ಗಳಿಗೆ ತೆರಳಿರುವ ಸಿಬ್ಬಂದಿ ಇವತ್ತು ಗ್ಯಾರಂಟಿ ನಾವು ಮನೆಗೆ ಹೋಗೋದಿಲ್ಲ ಎಂದು ಹಿಂದೇಟು ಹಾಕುತ್ತಿದ್ದಾರೆ. ಅಷ್ಟರ ಮಟ್ಟಿಗೆ ಮಳೆ ಅಬ್ಬರ ಮುಂದುವರೆದಿದೆ.

Bengaluru Rains Heavy Rainfall forecast on August 28 in Next Three hours

ಇನ್ನು ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಮುನ್ಸೂಚನೆ ಪ್ರಕಾರ, ಭಾರೀ ಮಳೆ ಮುಂದುವರೆದರೆ, ಇನ್ನೂ ಏನೆಲ್ಲ ಅನಾಹುತಗಳು ಸಂಭವಿಸಲಿವೆಯೋ ಗೊತ್ತಿಲ್ಲ ಎನ್ನುವ ಆತಂಕ ನಗರದ ಜನರದ್ದಾಗಿದೆ.

ಇಂದು ಸುರಿದ ಮಳೆಯಿಂದ ನಗರದ ಹಲವೆಡೆ ಬೀದಿ ಬದಿ ವ್ಯಾಪಾರಿಗಳಿಗೆ ತುಂಬಾ ಸಮಸ್ಯೆಯಾಗಿದೆ. ಕೋರಮಂಗಲ, ಬಿಟಿಎಂ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌ ಮೆಜೆಸ್ಟಿಕ್‌, ಶೇಶಾದ್ರಿಪುರಂ, ಮಲ್ಲೇಶ್ವರಂ, ಕೆಆರ್‌ ಪುರಂ, ಕೆಆರ್‌ ಮಾರ್ಕೆಟ್‌, ಜೆಪಿನಗರ, ಜಯನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಹಾಗೆಯೇ ಮುಂದಿನ ಕೆಲವೇ ಗಂಟೆಗಳಲ್ಲಿ ಭಾರೀ ಮಳೆ ಮುಂದಿವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಇಂದು ಉಡುಪಿ, ಮಂಗಳೂರು, ಶಿವಮೊಗ್ಗ, ಯಾದಗಿರಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಹಾಗೆಯೇ ಬೆಂಗಳೂರು ನಗರದಲ್ಲೂ ಕೂಡ ಇದೇ ವೇಳೆ ಗುಡುಗು ಸಹಿತ ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿಗೆ ಬಿಡುವು ಕೊಟ್ಟಿದ್ದ ಮಳೆರಾಯ ನಿನ್ನೆಯಿಂದ ಮತ್ತೆ ಆರ್ಭಟ ಶುರು ಮಾಡಿದ್ದಾನೆ.

ಕಳೆದ ಕೆಲ ದಿನಗಳಿಂದ ನಗರದಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿತ್ತು. ಬಿಸಿಲಿನಿಂದ ಬೇಸತ್ತಿದ್ದ ನಗರದ ಜನ ಮತ್ತೆ ಮಳೆ ಯಾವಾಗ ಎಂಟ್ರಿ ಕೊಡಲಿದೆಯೋ ಎಂದು ಕಾದು ಕುಳಿತಿದ್ದರು. ಅದಂತೆಯೇ ಸರಿಯಾದ ಸಮಯಕ್ಕೆ ಆಗಸ್ಟ್‌ 27ರ ಸಂಜೆ ವೇಳೆಗೆ ನಗರದ ಹಲವೆಡೆ ಸಾಧಾರಣ ಮಳೆಯಾಗಿತ್ತು. ಆದರೆ, ಗುರುವಾರ ನಗರದ ಬಹುತೇಕ ಭಾಗಗಳಲ್ಲಿ ವರುಣ ಆರ್ಭಟ ಶುರು ಮಾಡಿದ್ದಾನೆ. ಇನ್ನು ಮತ್ತೊಂದೆಡೆ, ವಾಯುಭಾರ ಕುಸಿತ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಹಲವು ದಿನಗಳ ಕಾಲ ಭಾರೀ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+