Bengaluru rain: ಸೆ.20ರ ವರೆಗೆ ನಗರದಲ್ಲಿ ಮಳೆಯ ಸಿಂಚನ

ಬೆಂಗಳೂರು, ಸೆಪ್ಟಂಬರ್ 14: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಆಗಾಗ ಮಳೆ ಕಂಡು ಬರುತ್ತಿದೆ. ಇನ್ನೂ ಬುಧವಾರ ಸುರಿದ ಭರ್ಜರಿ ಮಳೆ ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.

ಸೆಪ್ಟಂಬರ್ 20ರವರೆಗೆ ಬೆಂಗಳೂರು ನಗರದ ವಿವಿಧೆಡೆ ಆಗಾಗ ಜಿಟಿ ಜಿಟಿ ಮಳೆ ಆದರೆ, ಕೆಲವೊಮ್ಮೆ ಧಾರಾಕಾರವಾಗಿ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಬಂಗಾಳಕೊಲ್ಲಿ ಭಾಗದ ಒಂದೆರಡು ಕಡೆ ಉಂಟಾದ ಹವಾಮಾನ ವೈಪರಿತ್ಯಗಳಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಸಕ್ರಿಯವಾಗಿದೆ.

bengaluru-rain

ನಗರಾದ್ಯಂತ ಆಗಾಗ ಬಿಸಿಲಿನ ದರ್ಶವಾದರೂ ಸಹಿತ ಸಂಜೆ ಹೊತ್ತಿಗೆ ಅಲ್ಲಲ್ಲಿ ಬಿರುಸಿನ ಮಳೆಯಾಗುವ ಸಂಭವವಿದೆ. ಉಂದಿನ ಐದಾರು ದಿನ ಬಹುತೇಕ ಬೆಂಗಳೂರಿನಲ್ಲಿ ತುಂತುರು ಮಳೆ ಸುರಿಯುವ ಲಕ್ಷಣಗಳು ಹೆಚ್ಚಾಗಿವೆ. ಹೀಗಾಗಿ ನಗರದಲ್ಲಿ ತಂಪು ವಾತಾವರಣ ಜೊತೆಗೆ ಮೋಡ ಕವಿದ ವತಾವರಣ ಇರಲಿದೆ.

ನಗರದ ತಾಪಮಾನ ಎಷ್ಟಿರಲಿದೆ?

ಇಂದು ಗುರುವಾರ ನಗರದಲ್ಲಿ ಅಷ್ಟಾಗಿ ಬಿಸಿಲಿನ ವಾತಾವರಣ ಕಂಡು ಬಂದಿಲ್ಲ. ಈಗಲೋ ಆಗಲೋ ಮಳೆ ಬರುವ ಸ್ಥಿತಿ ನಿರ್ಮಾಣವಾಗಿದೆ. ತಡರಾತ್ರಿ ವೇಳೆ ಮಳೆ ಬಂದರೂ ಅಚ್ಚರಿ ಇಲ್ಲ. ಮುಂದಿನ ಒಂದು ವಾರ ನಗರದಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.

ನೆನ್ನೆ ಬುಧವಾರ ಸೆಪ್ಟಂಬರ್ 13ರಂದು ನಗರದಲ್ಲಿ ಮೂರು ಕಡೆಗಳಲ್ಲಿ ಅತ್ಯಧಿಕ ಮಳೆ 38.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಶೆಟ್ಟಿಹಳ್ಳಿ, ದೊಡ್ಡಬೊಮ್ಮಸಂದ್ರ, ಯಶವಂತಪುರ ಕಡೆಗಳಲ್ಲಿ ಅಧಿಕ ಮಳೆ ಆಗಿದೆ.

bengaluru-rain

ಇನ್ನುಳಿದಂತೆ ಬಾಗಲಗುಂಟೆ 37.5 ಮಿಲಿ ಮೀಟರ್, ವಿಶ್ವನಾಥ್ ನಾಗೇನಹಳ್ಳಿ 32, ರಾಜಮಹಲ್ ಗಟ್ಟಹಳ್ಳಿಯಲ್ಲಿ 33.5 ಮಿ.ಮೀ, ರಾಧಾಕೃಷ್ಣ ಟೆಂಪಲ್ ವಾರ್ಡ್ ಮತ್ತು ಕೊಡಿಗೇಹಳ್ಳಿ 30.5 ಮಿಲಿ ಮೀಟರ್, ಆರ್‌ಆರ್‌ ನಗರ ಮತ್ತು ನಂದಿನಿ ಬಡಾವಣೆಯಲ್ಲಿ 27 ಮಿಲಿ ಮೀಟರ್ ಮಳೆ ಆಗಿದೆ. ಇದರೊಂದಿಗೆ ಹೆಗ್ಗನಹಳ್ಳಿ, ಬಸವನಗುಡಿ, ದಯಾನಂದ ನಗರ, ಪೀಣ್ಯ ಕೈಗರಿಕೆ ಪ್ರದೇಶ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ತುಂತುರು ಮಳೆ ದಾಖಲಾಯಿತು.

ಕರ್ನಾಟಕ ಮಳೆ ಮುನ್ಸೂಚನೆ

ಕರ್ನಾಟಕದಲ್ಲಿ ಮುಂದಿನ ನಾಲ್ಕೈದು ದಿನ ಉತ್ತಮ ಮಳೆ ಆಗಲಿದೆ. ಈ ಪೈಕಿ ನಾಳೆ ಶುಕ್ರವಾರ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರಿ ಮಳೆ ಬರಲಿದ್ದು, ಹಳದಿ ಎಚ್ಚರಿಕೆ ಕೋಡಲಾಗಿದೆ.

ಒಳನಾಡಿ ಜಿಲ್ಲೆಗಳಲ್ಲಿ ಎರಡರಿಂದ ಮೂರು ದಿನ ಆಗಾಗ ಮಳೆ ಬರಲಿದೆ. ಇಂದು ಗುರುವಾರ ಸಹ ಹಾವೇರಿ, ದಾವಣಗೆರೆ, ಶಿಗ್ಗಾವಿ, ಗದಗ, ಹುಬ್ಬಳ್ಳಿ ಕಡೆಗಳಲ್ಲಿ ತುಂತುರು ಮಳೆ ಆಗಿದೆ. ಇದು ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (IMD) ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+