Rain Alert: ಮಳೆ.. ಮಳೆ.. ಮಳೆ.. ಬೆಂಗಳೂರಲ್ಲಿ ವಿಪರೀತ ಮಳೆ!
ಮಳೆ.. ಮಳೆ.. ಮಳೆ.. ಇಷ್ಟುದಿನ ಬಿಸಿಲಿನ ಬೇಗೆಯಲ್ಲಿ ಬೇಸತ್ತ ಜನರ ಬಾಯಲ್ಲಿ ಈಗ ಬರುತ್ತಿರುವ ಒಂದೇ ಒಂದು ಮಾತು ಅದು ಮಳೆ. ಯಾಕಂದ್ರೆ ಬೆಂಗಳೂರು ಸೇರಿದಂತೆ ಈ ಇಡೀ ನಮ್ಮ ಕರ್ನಾಟಕದಲ್ಲಿ ಬಿಸಿಗಾಳಿ ಪರಿಣಾಮ ಬೇಸಿಗೆ ಧಗಧಗ ಹೊತ್ತಿ ಉರಿಯುತ್ತಿತ್ತು. ಮನೆಯಲ್ಲಿ ಮಲಗಲು ಆಗದೆ, ಫ್ಯಾನ್ ಗಾಳಿಗೂ ಸಮಾಧಾನ ಆಗದೆ ನರಳಿದ್ದರು.
ಬೆಳಗ್ಗೆ ಆಯ್ತು ಅಂದ್ರೆ ಸಾಕು, ಕರ್ನಾಟಕ ರಾಜ್ಯದಲ್ಲಿ ಜನರಿಗೆ ಚಿಂತೆ ಶುರುವಾಗ್ತಾ ಇತ್ತು. ಜನರು ಬೆಳಗ್ಗೆ 6 ಗಂಟೆ ನಂತರ ಹೊರಗೆ ಬರಲು ಸಾವಿರ ಬಾರಿ ಯೋಚಿಸುವ ಪರಿಸ್ಥಿತಿ ಕೂಡ ನಿರ್ಮಾಣ ಆಗಿತ್ತು. ಯಾಕಂದ್ರೆ ಬೆಳಗ್ಗೆ 7 ಗಂಟೆಗೆಲ್ಲಾ ಬಿಸಿಲು ನೆತ್ತಿ ಸುಡುತ್ತಿತ್ತು. ಹೀಗಾಗಿ ಜನ ಮಳೆ ಬರಲಿ ಅಂತಾ ಕಾಯುತ್ತಿದ್ದರು. ಇದೀಗ ಭರ್ಜರಿ ಮಳೆ ಆರ್ಭಟ ಶುರುವಾಗಿದೆ. ಇಂದು ಕೂಡ ಬೆಂಗಳೂರು ಸೇರಿದಂತೆ ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮಳೆ ಬರಲಿದೆ. ಹಾಗೇ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಆ ಕುರಿತು ಮಾಹಿತಿಗೆ ಮುಂದೆ ಓದಿ.

ಕೊತ ಕೊತ ಕುದಿಯುತ್ತಿತ್ತು ಕರ್ನಾಟಕ!
ಕೇವಲ 1 ವಾರದ ಹಿಂದೆ ಒಲೆ ಮೇಲೆ ಇಟ್ಟಿರುವ ಬಿಸಿ ನೀರಿನ ರೀತಿ ಕುದಿಯುತ್ತಿದ್ದ ನಮ್ಮ ಬೆಂಗಳೂರಿನಲ್ಲಿ, ಕಳೆದ 3 ದಿನಗಳಿಂದ ಯರ್ರಾಬಿರ್ರಿ ಮಳೆ ಬರುತ್ತಿದೆ. ಅದರಲ್ಲೂ ಮೊನ್ನೆ ಮತ್ತು ನಿನ್ನೆ ಭರ್ಜರಿ ಮಳೆ ಬಂದು ಜನರು ಖುಷಿಯಲ್ಲಿ ಕುಣಿದಾಡಿದ್ದರು. ಇದೀಗ ಇಂದು ಬೆಳಗ್ಗೆಯಿಂದಲೇ ಮಳೆಯ ಅಬ್ಬರ ಶುರುವಾಗಿತ್ತು. ಅದರಲ್ಲೂ ಬೆಂಗಳೂರಿನ ನಗರ ಭಾಗ ಸೇರಿದಂತೆ, ಆನೇಕಲ್ ಸುತ್ತಮುತ್ತಲ ಭಾಗದಲ್ಲಿ ಬೆಳಗ್ಗೆ 6 ಗಂಟೆಗೆ ಮಳೆ ಶುರುವಾಗಿತ್ತು. ಆ ನಂತರ ಮಳೆ ಅಬ್ಬರಕ್ಕೆ ಎಲ್ಲರೂ ಖುಷಿಯಾಗಿದ್ದರು. ಹೀಗಿದ್ದಾಗ ಮತ್ತೆ ಸಂಜೆಯಿಂದ ಮಳೆ ಶುರುವಾಗಿದೆ ಹಾಗಾದ್ರೆ ಇನ್ನೂ ಯಾವ ಯಾವ ಜಿಲ್ಲೆಯಲ್ಲಿ ಮಳೆ ಬಿದ್ದಿದೆ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.
@ravikeerthi22 ಮಳೆ ಬಂತು ಮಳೆ🤩🥳 pic.twitter.com/soxN8RKA6s
— ಗುತ್ತಿ😎 (@nachi_NaveenC) May 8, 2024
ಮಳೆ.. ಮಳೆ.. ಮಳೆ..!
ಕರ್ನಾಟಕದ ಬೆಂಗಳೂರು ಸೇರಿದಂತೆ ಮಲೆನಾಡು ಪ್ರದೇಶಗಳಾದ ಮಡಿಕೇರಿ, ಚಿಕ್ಕಮಗಳೂರು ಮತ್ತು ಹಾಸನ, ಶಿವಮೊಗ್ಗ ಮತ್ತಿತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಜೊತೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಸಾದಾರಣ ಮಳೆ ಬೀಳುತ್ತಿದ್ದು, ಮಧ್ಯ ಕರ್ನಾಟದಲ್ಲಿ ಕೂಡ ಮಳೆ ಅಬ್ಬರಿಸಿದೆ, ಈ ನಡುವೆ ಮುಂದಿನ 2 ವಾರಗಳು ಇದೇ ರೀತಿ ಭರ್ಜರಿ ಮಳೆಯು ಬೀಳುವ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯಲಿದೆ ಎಂದು ಹೇಳಲಾಗಿದೆ. ಹೀಗಾಗಿ ಜನರು ಏನೇ ಸಮಸ್ಯೆ ಬಂದರೂ ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಬಹುದು.
#ಹೊದವಾಡದಲ್ಲಿ_ಗುಡುಗುಸಹಿತ_ಮಳೆ pic.twitter.com/kGP9M7eKOG
— Coorgthekashmirofkarnataka (@Coorgthekashmir) May 8, 2024
ಭೂತಾಯಿ ತಂಪಾದ ಸಮಯ...
ಒಟ್ನಲ್ಲಿ ಮಳೆ.. ಮಳೆ.. ಭರ್ಜರಿ ಮಳೆ ಬಂದು ಭೂತಾಯಿ & ಮನಸ್ಸು ಎರಡೂ ತಂಪಾಗಿದೆ. ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ ಕೆಲವೇ ಕೆಲವು ದಿನದ ಹಿಂದೆ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳ ಜನ ಭಾರಿ ಬಿಸಿಲು & ಬಿಸಿಯಾದ ಗಾಳಿಗೆ ನಲುಗಿ ಹೋಗಿದ್ದರು. ಮನೆ ಮೇಲೆ ಇರುವ, ನೀರಿನ ಟ್ಯಾಂಕರ್ ಕೂಡ ಕರಗಿ ಹೋಗುವಷ್ಟು. ಹಾಗೇ ಮನೆಯಲ್ಲಿ ಬರುವ ನಲ್ಲಿ ನೀರು ಕೂಡ ಕುದಿಯುವಷ್ಟು ಬಿಸಿಲು ಇತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ತಂಪು ತಂಪು ಕೂಲ್.. ಕೂಲ್.. ಆಗಿದೆ ನಮ್ಮ ಕರ್ನಾಟಕ. ಹೀಗೆಯೇ ಮಳೆ ಬೀಳಲಿ ದೇವರೆ ಅಂತಾ ಕನ್ನಡಿಗರು ಈಗ ದೇವರ ಬಳಿ ಬೇಡುತ್ತಿದ್ದಾರೆ.












Click it and Unblock the Notifications