Bengaluru Rain: ರಾಜ್ಯ ರಾಜಧಾನಿಯ ಹಲವೆಡೆ ತಂಪೆರೆದ ಮಳೆರಾಯ
ಬೆಂಗಳೂರು, ಆಗಸ್ಟ್, 26: ಕಳೆದ ಕೆಲವು ವಾರಗಳಿಂದ ಬಿಸಿಲಿನಿ ಬೇಗೆಯಿಂದ ಬೆಂದಿದ್ದ ರಾಜ್ಯ ರಾಜಧಾನಿ ಬೆಂಗಳೂರಿನ ಜನರಿಗೆ ಇಂದು (ಆಗಸ್ಟ್ 26) ಮಳೆರಾಯ ತಂಪೆರೆದಿದ್ದಾನೆ. ಸುಮಾರು 5:40ರ ವೇಳೆಗೆ ಅಬ್ಬರ ಮಳೆ ಸುರಿದಿದ್ದು, ಪರಿಣಾಮ ನಗರದ ಹಲವೆಡೆ ರಸ್ತೆಗಳು ಚರಂಡಿಯಂತಾಗಿವೆ.
ಜುಲೈ ತಿಂಗಳಲ್ಲಿ ಸುರಿದ ಮಳೆಗೆ ರಾಜ್ಯ ರಾಜ್ಯಧಾನಿಯ ಹಲವೆಡೆ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿದ್ದವು. ಬಳಿಕ ಆಗಸ್ಟ್ ತಿಂಗಳ ಆರಂಭದಿಂದಲೂ ಇಲ್ಲಿಯವರೆಗೂ ಮಳೆಯಿಲ್ಲದೆ ಬಿಸಿಲಿನ ಧಗೆ ಏರಿಕೆಯಾಗುತ್ತಲೇ ಇತ್ತು. ಆದರೆ ಇಂದು ಅಬ್ಬರದ ಮಳೆಯಾದ ಹಿನ್ನೆಲೆ ಬಿಸಿಲಿನ ಝಳಕ್ಕೆ ಬೇಸತ್ತಿದ್ದ ಇಲ್ಲಿನ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಶಿವಾನಂದ ಸರ್ಕಲ್, ಶೇಶಾದ್ರಿಪುರಂ, ವಿಧಾನಸೌಧ, ಕೋರಮಂಗಲ ಸೇರಿದಂತೆ ನಗರದ ಹಲವೆಡೆ ಅಬ್ಬರದ ಮಳೆಯಾಗಿದೆ. ಅಲ್ಲದೆ ಭಾರೀ ಮಳೆಯಿಂದ ರಸ್ತೆಗಳಲ್ಲ ಕೆರೆಯಂತಾದ ಪರಿಣಾಮ ವಾಹನ ಸವಾರರು ಪರದಾಡಿದ ಘಟನೆಯೂ ನಡೆದಿದೆ. ಇನ್ನು ರಾತ್ರಿ ವೇಳೆಗೆ ಮಳೆರಾಯ ಮತ್ತಷ್ಟು ರೌದ್ರವಾತಾರ ತಾಳಲಿದ್ದಾನೆ ಎನ್ನುವ ಮುನ್ಸೂಚನೆ ಇದೆ.
ಆಗಸ್ಟ್ ತಿಂಗಳ ಆರಂಭದಿಂದ ರಾಜ್ಯದ ಕೆಲವೆಡೆ ಮಾತ್ರ ಮಳೆಯಾಗಿತ್ತು. ಅದರಲ್ಲೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕಾರವಾರ, ಮಂಗಳೂರು, ಉಡುಪಿಯ ಕಲವು ಭಾಗಗಳಲ್ಲಿ ಅತಿ ಭಾರೀ ಮಳೆಯಾಗುತ್ತಲೇ ಇದೆ. ಮತ್ತೊಂದೆಡೆ ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ಆದರೆ ಬೆಂಗಳೂರು ಸೇರಿದಂತೆ ಇನ್ನಿತರೆ ಜಿಲ್ಲೆಗಳಲ್ಲಿ ಮಳೆಯಿಲ್ಲದೇ ಬರೀ ಬಿಸಿಲಿನ ವಾತಾರವಣವಷ್ಟೇ ಮುಂದುವರೆದಿತ್ತು.

ಕಳೆದ ಮೂರ್ನಾಲ್ಕು ವಾರಗಳಿಂದ ಬಿಸಿಲಿನ ಬೇಗೆಗೆ ಬೆಂದಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಇಂದು ರಾತ್ರಿಯಿಂದಲೇ ಬಹುತೇಕ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications