Bengaluru Rain: ಮಿಂಚು-ಗುಡುಗು, ಆಲಿಕಲ್ಲು ಮಳೆ; ಬೆಂಗಳೂರು ಮಳೆ ಟ್ರೆಂಡಿಂಗ್

ಜೂನ್ ತಿಂಗಳ ಮೊದಲ ದಿನವೇ ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭಾರಿ ಸೆಖೆಯಿಂದ ಬೇಸತ್ತಿದ್ದ ನಗರಕ್ಕೆ ತಂಪೆರದಿದೆ. ಶನಿವಾರ ಮಧ್ಯಾಹ್ನ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ.

ಭಾರಿ ಮಿಂಚು-ಗುಡುಗು ಸಹಿತ ನಗರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಜೂನ್ 8 ರವರೆಗೆ ನಗರದಲ್ಲಿ ವ್ಯಾಪಕ ಮಳೆಯಾಗುತ್ತದೆ ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.

Bengaluru Rain Heavy Rain Hailstorm with Lightning in Bengaluru Trends on Social Media

ಎಲ್ಲೆಲ್ಲಿ ಮಳೆ?

ಶಿವಾಜಿನಗರ, ಬೆಳ್ಳಂದೂರು, ಮಾರತ್‌ಹಳ್ಳಿ, ಹೆಬ್ಬಾಳ, ವಿದ್ಯಾರಣ್ಯಪುರ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಹೆಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಪದ್ಮನಾಭನಗರ, ರಾಜರಾಜೇಶ್ವರಿ ನಗರ, ಸದಾಶಿವನಗರ, ಶೇಷಾದ್ರಿಪುರ, ಬೊಮ್ಮನಹಳ್ಳಿ, ಬಸವನಗುಡಿ, ಮಹಾಲಕ್ಷ್ಮಿ ಲೇಔಟ್, ದೊಮ್ಮಲೂರು, ಇಂದಿರಾನಗರ, ರಾಜಾಜಿನಗರ, ಮಲ್ಲೇಶ್ವರ, ಹಲಸೂರು, ವಸಂತನಗರ, ಕೆಆರ್ ಪುರ, ಮಹದೇವಪುರ, ಬಾಣಸವಾಸಿ, ಹೆಚ್‌ಬಿಆರ್ ಲೇಔಟ್, ಕಲ್ಯಾಣ ನಗರ, ಕಮ್ಮನಹಳ್ಳಿ, ಲಿಂಗರಾಜಪುರ, ಮತ್ತಿಕೆರೆ, ಪೀಣ್ಯ, ಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ವಿಜಯನಗರ ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

ಸಂತಸ ಹಂಚಿಕೊಂಡ ನೆಟ್ಟಿಗರು

ಹಲವು ದಿನಗಳ ವಿರಾಮದ ಬಳಿಕ ಬೆಂಗಳೂರಿನಲ್ಲಿ ಮತ್ತೆ ಮಳೆಯಾಗುತ್ತಿರುವುದು ಜನರ ಖುಷಿ ಹೆಚ್ಚಿಸಿದೆ. ಭಾರಿ ಸೆಖೆಯಿಂದ ಬೇಸತ್ತಿದ್ದ ಜನಕ್ಕೆ ಮಳೆ ತಂಪೆರದಿದೆ.

ಹಲವು ದಿನಗಳ ಬಳಿಕ ಮತ್ತೆ ಮಳೆ ಬಂದಿದ್ದು ಜನರ ಸಂತಸ ಹೆಚ್ಚಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗಿದೆ. ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಹಲವು ನೆಟ್ಟಿಗರು ರಸ್ತೆಗಳಲ್ಲಿ ನೀರು ನಿಂತಿರುವ ದೃಶ್ಯಗಳನ್ನು ಹಂಚಿಕೊಂಡಿದ್ದು, ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+