Bengaluru Property: ಆಂಧ್ರ ಪ್ರದೇಶ ಸರ್ಕಾರ ಮಾದರಿಗೆ ಮುಂದಾದ ಕರ್ನಾಟಕ ಸರ್ಕಾರ!
Bengaluru Property: ಬೆಂಗಳೂರು ಅಭಿವೃದ್ಧಿಯ ವೇಗದಲ್ಲಿದೆ. ಬೆಂಗಳೂರಿಗೆ ಹೈದರಾಬಾದ್, ವಿಶಾಖಪಟ್ಟಣಂ, ಚೆನ್ನೈ, ಮುಂಬೈ, ಪುಣೆ ಹಾಗೂ ದೆಹಲಿ ಸೇರಿದಂತೆ ವಿವಿಧ ಪ್ರಮುಖ ನಗರಗಳು ಬೆಂಗಳೂರಿಗೆ ಪೈಪೋಟಿ ನೀಡುತ್ತಿವೆ. ಅದರಲ್ಲೂ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪೈಪೋಟಿ ನೀಡುತ್ತಿರುವುದರಲ್ಲಿ ಹಾಗೂ ಬೆಂಗಳೂರಿನ ಹೂಡಿಕೆಗಳನ್ನು ಆಕರ್ಷಿಸುವ ನಗರಗಳಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮುಂಚೂಣಿಯಲ್ಲಿದೆ. ಇದೀಗ ಈ ವಿವಿಧ ನಗರಗಳಿಗೆ ಪೈಪೋಟಿ ನೀಡಲು ಆಸ್ತಿ ಬೆಲೆ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅದರ ವಿವರ ನೋಡೋಣ.
ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿದೆ. ಆದರೆ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ವಿವಿಧ ನಗರಗಳ ಪೈಪೋಟಿಯೂ ಹೆಚ್ಚಳವಾಗುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರವು ಇದೀಗ ಮಾಸ್ಟರ್ ಪ್ಲ್ಯಾನ್‌ವೊಂದನ್ನು ಮಾಡಿಕೊಂಡಿದೆ. ಮೊದಲ ಮೂರರಿಂದ ಐದು ವರ್ಷಗಳವರೆಗೆ ಬಂಡವಾಳ ಮತ್ತು ನಿರ್ವಹಣಾ ವೆಚ್ಚ ಎರಡನ್ನೂ ಕಡಿಮೆ ಮಾಡುವ ಮೂಲಕ, ಹೊಸ ತಂತ್ರಜ್ಞಾನ ಕ್ಲಸ್ಟರ್‌ಗಳ ರಚನೆಯನ್ನು ವೇಗಗೊಳಿಸಲು ರಾಜ್ಯ ಸರ್ಕಾರವು ಮುಂದಾಗಿದೆ.

ಕರ್ನಾಟಕವು ತನ್ನ ಕರಡು ಐಟಿ ನೀತಿ 2025-30 ರ ಅಡಿಯಲ್ಲಿ ಬೆಂಗಳೂರಿನಿಂದ ಹೊರಗೆ ತಂತ್ರಜ್ಞಾನ ಹೂಡಿಕೆಗಳನ್ನು ಸ್ಥಳಾಂತರಿಸಲು ವ್ಯಾಪಕವಾದ ವೆಚ್ಚ-ಕಡಿತ ಪ್ರೋತ್ಸಾಹಕಗಳನ್ನು ಪ್ರಸ್ತಾಪಿಸಿದೆ. ಕಂಪನಿಗಳು ಟೈಯರ್ II ಮತ್ತು ಟೈಯರ್ III ನಗರಗಳಲ್ಲಿ (ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ) ಕಾರ್ಯಾಚರಣೆಗಳನ್ನು ಸ್ಥಾಪಿಸಿದರೆ ಬಾಡಿಗೆ, ಆಸ್ತಿ ತೆರಿಗೆ, ವಿದ್ಯುತ್ ಸುಂಕ ಮತ್ತು ಟೆಲಿಕಾಂ ವೆಚ್ಚಗಳ ಮರುಪಾವತಿಯನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇದು ಹೆಚ್ಚು ಕಡಿಮೆ ಆಂಧ್ರಪ್ರದೇಶ ಬಳಸುತ್ತಿರುವ ಟ್ರಿಕ್ಸ್‌ಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶ ಸರ್ಕಾರವು ಉದ್ಯಮ ಮತ್ತು ಹೂಡಿಕೆಯನ್ನು ಆ ರಾಜ್ಯದಲ್ಲಿ ಆಕರ್ಷಿಸುವ ಉದ್ದೇಶದಿಂದ ಈ ರೀತಿಯ ಯೋಜನೆಗಳನ್ನು ರೂಪಿಸುತ್ತಿದೆ.
ಇನ್ನು ಈ ಹೊಸ ಕರಡಿನ ಪ್ರಕಾರ, ಬೆಂಗಳೂರಿನ ಹೊರಗಿನ ಜಿಲ್ಲೆಗಳಲ್ಲಿ ಸ್ಥಾಪಿಸಲಾದ ಐಟಿ ಮತ್ತು ಐಟಿ ಸೇವಾ ಘಟಕಗಳು 2 ಕೋಟಿ ರೂ.ಗಳವರೆಗೆ 50 ಪ್ರತಿಶತ ಬಾಡಿಗೆ ಮರುಪಾವತಿ, ಮೂರು ವರ್ಷಗಳವರೆಗೆ 30 ಪ್ರತಿಶತ ಆಸ್ತಿ ತೆರಿಗೆ ಮರುಪಾವತಿ ಮತ್ತು ಐದು ವರ್ಷಗಳವರೆಗೆ 100 ಪ್ರತಿಶತ ವಿದ್ಯುತ್ ಸುಂಕ ಮನ್ನಾಕ್ಕೆ ಅರ್ಹವಾಗಿರಲಿವೆ.
ರಾಜ್ಯವು ಟೆಲಿಕಾಂ ಮತ್ತು ಇಂಟರ್ನೆಟ್ ಶುಲ್ಕಗಳಲ್ಲಿ 25 ಪ್ರತಿಶತವನ್ನು ರೂ. 12 ಲಕ್ಷದವರೆಗೆ ಮರುಪಾವತಿ ಮಾಡುತ್ತದೆ. ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿಗೆ ಕಾರ್ಯಾಚರಣೆಗೆ ಅನುಕೂಲವಾಗುವ ಮಾದರಿಯಲ್ಲಿ ಇದೆ. ಕರ್ನಾಟಕದ ಹೆಚ್ಚಿನ ಐಟಿ ಸಂಸ್ಥೆಗಳು ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದ್ದು, ನಗರವು ರಾಜ್ಯ ಮತ್ತು ದೇಶಕ್ಕೆ ಗಮನಾರ್ಹ ಆದಾಯವನ್ನು ಗಳಿಸುತ್ತಿದ್ದರೂ, ಅದರ ಮೂಲಸೌಕರ್ಯವು ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ. ಅಲ್ಲದೇ ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡುವುದು ಹಾಗೂ ಇನ್ನುಳಿದ ನಗರಗಳ ಅಭಿವೃದ್ಧಿಯ ದೃಷ್ಟಿಯಿಂದಲೂ ಈ ರೀತಿಯ ಯೋಜನೆಗಳನ್ನು ಕರ್ನಾಟಕ ಸರ್ಕಾರವು ರೂಪಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications