Bengaluru Property: ಬೆಂಗಳೂರಿಗಿಂತ ಯುಕೆಯಲ್ಲಿ ಪ್ರಾಪರ್ಟಿ ಖರೀದಿ ಮಾಡುವುದು ಸುಲಭ: ಟೆಕ್ಕಿ ಪೋಸ್ಟ್‌ ವೈರಲ್

Bengaluru Property: ಬೆಂಗಳೂರಿನಲ್ಲಿ ಪ್ರಾಪರ್ಟಿ ಹಾಗೂ ಭೂಮಿ ಖರೀದಿ ಮಾಡುವ ವಿಚಾರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಬಹುತೇಕರು ಬೆಂಗಳೂರಿನಲ್ಲಿ ಪ್ರಾಪರ್ಟಿ ಖರೀದಿ ಮಾಡುವುದು ಈಗ ಒಳ್ಳೆಯದಲ್ಲೇ ಎಂದೇ ಹೇಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರಿನಲ್ಲಿ ಪ್ರಾಪರ್ಟಿ ಬೆಲೆಯು ವಿಪರೀತವಾಗಿ ಹೆಚ್ಚಳವಾಗಿರುವುದು ಹಾಗೂ ಮೂಲಸೌಕರ್ಯ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳು ಎದುರಾಗಿರುವುದು. ಇದೀಗ ಬೆಂಗಳೂರಿಗಿಂತಲೂ ಬೆಂಗಳೂರಿನಷ್ಟೇ ಖ್ಯಾತಿ ಗಳಿಸುತ್ತಿರುವ ಅಥವಾ ಅಭಿವೃದ್ಧಿ ಹೊಂದಿರುವ ನಗರಗಳಲ್ಲಿ ಪ್ರಾಪರ್ಟಿ ಖರೀದಿ ಮಾಡುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಬೆಂಗಳೂರು ಮೂಲದ ಸಂಸ್ಥಾಪಕಿ ನೇಹಾ ಶರ್ಮಾ ಅವರು ಭಾರತದಲ್ಲಿ ಮನೆ ಖರೀದಿಸಲು ಪ್ರಯತ್ನಿಸಿದ ಅನುಭವ ಮತ್ತು ಅಂತಿಮವಾಗಿ "ಯುಕೆ"ಯಲ್ಲಿ ಮನೆ ಖರೀದಿಸಿದ ಅನುಭವದ ನಡುವಿನ ಹೋಲಿಕೆಯನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರು ಹಂಚಿಕೊಂಡ ಅನುಭವವು ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ವಾಸವಿದ್ದಾಗ ಮನೆಯಲ್ಲಿ ಇಬ್ಬರು ಕೆಲಸಕ್ಕೆ ಹೋಗುತ್ತಿದ್ದರೂ, ಫ್ಲಾಟ್ ಖರೀದಿಸುವುದು ಇನ್ನೂ ಆರ್ಥಿಕವಾಗಿ ದಣಿದ ಅನುಭವವಾಗುತ್ತಿತ್ತು ಎಂದು ಶರ್ಮಾ ಬರೆದಿದ್ದಾರೆ.

Bengaluru Property

ಬೆಂಗಳೂರಿನಲ್ಲಿ ಮನೆ - ಪ್ರಾಪರ್ಟಿ ಖರೀದಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಸಂಬಳದೊಂದಿಗೆ ನಾವು ಫ್ಲಾಟ್ ಖರೀದಿಸಲು ಕಷ್ಟಪಟ್ಟಿದ್ದೆವು. ಆದರೆ ಕಷ್ಟದಲ್ಲಿ ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಮನವರಿಕೆಯಾದ ಮೇಲೆ ಆ ಪ್ಲ್ಯಾನ್ ಕೈಬಿಟ್ಟೆವು ಅಮೆಜಾನ್ ಟೆಕ್ಕಿ ಮತ್ತು JSLovers ನ ಸಂಸ್ಥಾಪಕಿಯೂ ಆಗಿರುವ ನೇಹಾ ಶರ್ಮಾ ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದಿದ್ದಾರೆ.

ಯುಕೆ vs ಬೆಂಗಳೂರು ಮನೆ ಖರೀದಿಗೆ ಯಾವುದು ಬೆಸ್ಟ್‌

ಶರ್ಮಾ ಅವರು ಪ್ರಾಪರ್ಟಿ ಖರೀದಿಯ ಅನುಭವವನ್ನು ಹಂಚಿಕೊಂಡಿದ್ದು ಅದರಲ್ಲಿ ಯುಕೆ ಹಾಗೂ ಬೆಂಗಳೂರಿನ ನಡುವಿನ ವ್ಯತ್ಯಾಸವನ್ನು ಹಂಚಿಕೊಂಡಿದ್ದಾರೆ. ಯುಕೆಯಲ್ಲಿ ಪ್ರಾಪರ್ಟಿ ಖರೀದಿ ಮಾಡುವುದು ಹೆಚ್ಚು ಸುಲಭ ಮತ್ತು ಹೆಚ್ಚು ಪಾರದರ್ಶಕ ಪ್ರಕ್ರಿಯೆ ಆಗಿದೆ. ಯುಕೆಗೆ ಸ್ಥಳಾಂತರವಾದ ಎರಡು ವರ್ಷಗಳಲ್ಲಿ ಮೂರು ಬಿಎಚ್‌ಕೆಯ ಮನೆಯನ್ನು ಖರೀದಿಸಲು ಸಾಧ್ಯವಾಯಿತು. ಅದೂ ಸಹ ಒಬ್ಬರದ್ದೇ ಆದಾಯದಲ್ಲಿ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಒಂದು ಸಣ್ಣ ಅಪಾರ್ಟ್ಮೆಂಟ್ ಬೆಲೆಯೂ ಸಹ ಕೈಗೆಟುಕುವಂತಿಲ್ಲ ಎಂದು ಅವರು ಹೇಳಿದ್ದಾರೆ. UK ಯಲ್ಲಿ ಅವರ ಮೂರು ಬಿಎಚ್‌ಕೆ ಮನೆ ವಿಶಾಲವಾದ ಜಾಗ, ಪಾರ್ಕಿಂಗ್ ಜಾಗ ಹಾಗೂ ಸುತ್ತಮುತ್ತ ಉತ್ತಮ ಪ್ರದೇಶವಿದೆ ಎಂದಿದ್ದಾರೆ. ಯುಕೆಗೆ ಸ್ಥಳಾಂತರಗೊಂಡ 2 ವರ್ಷಗಳ ನಂತರ ನಾವು ಹೊಸ ಪ್ರಾಪರ್ಟಿ ಖರೀದಿ ಮಾಡಿದೆವು. ಅದರಲ್ಲಿ ಎಲ್ಲಾ ಅಡುಗೆ ಸಲಕರಣೆಗಳು - ಗ್ಯಾಸ್, ಫ್ರಿಡ್ಜ್, ಡಿಶ್‌ವಾಶರ್, ವಾಷಿಂಗ್ ಮೆಷಿನ್, ಓವನ್, ಕಾರ್ಪೆಟ್ ಹಾಗೂ ಲೈಟಿಂಗ್ ಸೇರಿದಂತೆ ಸಕಲ ಸೌಲಭ್ಯವೂ ಇದೆ ಎಂದು ಅವರು ಹೇಳಿದ್ದಾರೆ.

ಯಾರೂ ಸಹ ಬ್ಲ್ಯಾಕ್‌ಮನಿ ಕೇಳಲಿಲ್ಲ ಮನೆ - ಪ್ರಾಪರ್ಟಿಯನ್ನು ಖರೀದಿ ಮಾಡುವ ವಿಚಾರದಲ್ಲಿ ಶೇ. 100% ಪಾರದರ್ಶಕತೆ ಇದೆ. ಆದರೆ ಬೆಂಗಳೂರಿನಲ್ಲಿ ಪ್ರಾಪರ್ಟಿ ಖರೀದಿ ವಿಚಾರವು ಭಿನ್ನವಾಗಿದೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರು ವಿವರಿಸಿದ್ದಾರೆ. ಹಣಕಾಸು ವ್ಯವಹಾರದಲ್ಲಿ ತೊಡಕುಗಳು ಉಂಟಾಗುತ್ತಿರುವ ಬಗ್ಗೆ ಅವರು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+