ವೇಶ್ಯಾವಾಟಿಕೆ ಮೇಲೆ ದಾಳಿ, ನಕಲಿ ಪತ್ರಕರ್ತ ಸೇರಿ ನಾಲ್ವರ ಬಂಧನ
ಬೆಂಗಳೂರು, ಡಿಸೆಂಬರ್, 05: ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದ ನಕಲಿ ಪತ್ರಕರ್ತ ಸೇರಿ ನಾಲ್ವರನ್ನು ಕಬ್ಬನ್ ಪಾರ್ಕ್ ಪೊಲೀಸರು ನಗರದ ಸೇಂಟ್ ಮಾರ್ಕ್ಸ್ ರಸ್ತೆ ಬಳಿ ಇರುವ ಹೋಟೆಲ್ ವೊಂದರಲ್ಲಿ ಶನಿವಾರ ಬಂಧಿಸಿದ್ದಾರೆ.
ಹೊಸಕೋಟೆಯ ಮೌಸಿಮ್ ಖಾನ್, ಶೃಂಗೇರಿಯ ರಾಘವೇಂದ್ರ, ಹಾರೋಹಳ್ಳಿಯ ಆನಂದಮೂರ್ತಿ ಹಾಗೂ ಕಗ್ಗಲಿಪುರದ ಸುಗುಣ ಮೂರ್ತಿ ವೇಶ್ಯಾವಾಟಿಕೆ ದಂಧೆ ನಡೆಸಲು ಹೋಗಿ ಸಿಕ್ಕಿಬಿದ್ದ ಆರೋಪಿಗಳು. ದಂಧೆ ನಡೆಯುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಮುಂಬೈ ಮೂಲದ ಯುವತಿಯನ್ನು ರಕ್ಷಿಸಿದ್ದಾರೆ.[ಕೇರಳದ ಹೈಟೆಕ್ ವೇಶ್ಯಾವಾಟಿಕೆ ಜಾಲ ಭೇದಿಸಿದ್ದು ಹೇಗೆ?]

ಬಂಧಿತರಾದ ಮೌಸಿಂ ಖಾನ್ ಹಾಗೂ ಆತನ ಸ್ನೇಹಿತರು ಆನ್ ಲೈನ್ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಮುಂಬೈನ ಕೆಲವು ಮಂದಿಯೊಂದಿಗೆ ಸಂಪರ್ಕದಲ್ಲಿದ್ದ ಇವರು ಮುಂಬೈ ಯುವತಿಯನ್ನು ಕರೆಸಿಕೊಂಡು ಈ ದಂಧೆ ಮಾಡುತ್ತಿದ್ದರು. ಈ ಬಗ್ಗೆ ಡಿಸೆಂಬರ್ 03 ರ ಗುರುವಾರದಂದು ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.[ಸೆಕ್ಸ್ ರಾಕೆಟ್' ಹತ್ತಿದ್ದ ನಟಿ ಈಗ ಪೊಲೀಸರ ಅತಿಥಿ]
ಸೇಂಟ್ ಮಾರ್ಕ್ಸ್ ರಸ್ತೆ ಬಳಿ ಇರುವ ಹೋಟೆಲ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡದ ಮೇಲೆ ಪೊಲೀಸರು ದಾಳಿ ಮಾಡಿದಾಗ ಮೌಸಿಮ್ ಖಾನ್ ಸಿಕ್ಕಿಬಿದ್ದಿದ್ದಾರೆ. ಆಗ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು.
ಹಾಗಾಗಿ ನಾನು ಕುಟುಕು ಕಾರ್ಯಾಚರಣೆ ನಡೆಸಲು ಬಂದಿದ್ದೇನೆ ಎಂದು ಸುದ್ದಿವಾಹಿನಿಯೊಂದರ ಗುರುತಿನ ಚೀಟಿ ತೋರಿಸಿ ತಾನು ವರದಿಗಾರ ಎಂದು ಹೇಳಿಕೊಂಡಿದ್ದಾನೆ. ಮೌಸಿಮ್ ಖಾನ್ ನ ಗುರುತಿನ ಚೀಟಿಯನ್ನು ಪರಿಶೀಲಿಸಿದ ಪೊಲೀಸರಿಗೆ ಆತ ವರದಿಗಾರನಲ್ಲ ಎಂದು ತಿಳಿದು ಬಂದಿದೆ.[30 ಸಾವಿರಕ್ಕೆ ಹೆಂಡತಿಯನ್ನೇ ಮಾರಿದ್ದ ಪತಿರಾಯ ಅಂದರ್]
ಈತ ಸುಮಾರು ಆರು ತಿಂಗಳಿಂದ ಈ ಕೃತ್ಯದಲ್ಲಿ ತೊಡಗಿಕೊಂಡಿದ್ದು, ಈತನ ಕುರಿತಾಗಿ ಇನ್ನಷ್ಟು ಮಾಹಿತಿ ಕಲೆಹಾಕುವುದಾಗಿ ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.












Click it and Unblock the Notifications