ಬೆಂಗಳೂರು ಪೊಲೀಸರಿಂದ ನಟ ಸಿದ್ದಾಂತ್ ಕಪೂರ್ ಸೇರಿ ಐವರ ಬಂಧನ

ಬೆಂಗಳೂರು, ಜೂನ್ 13: ಹಲಸೂರಿನ 5 ಸ್ಟಾರ್ ಹೋಟೆಲ್‌ನಲ್ಲಿ ಮಾದಕ ವಸ್ತು ಸೇವನೆ‌ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟ ಸಿದ್ದಾಂತ್ ಕಪೂರ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌. ವೈದ್ಯಕೀಯ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಸಾಬೀತಾಗಿದ್ದರಿಂದ ಕಾನೂನು ಪ್ರಕಾರ ನಟ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಡ್ರಗ್ಸ್ ಸೇವನೆ ಪ್ರಕರಣವು ಜಾಮೀನುಸಹಿತ ವಾರೆಂಟ್ ಅಪರಾಧವಾಗಿರುವುದರಿಂದ‌ ಠಾಣಾ ಜಾಮೀನಿನ ಮೇರೆಗೆ ವಿಚಾರಣೆ ಮುಕ್ತಾಯ ಬಳಿಕ ಬಿಡುಗಡೆ ಮಾಡಿಸುವ ಸಾಧ್ಯತೆಯಿದೆ.

ಹಳೆ ಮದ್ರಾಸ್ ರಸ್ತೆಯಲ್ಲಿರುವ ದಿ ಪಾರ್ಕ್ ನ ಐ ಬಾರ್‌ನಲ್ಲಿ ನಡೆಯುತ್ತಿದ್ದ ಕೇವಲ ಪಾರ್ಟಿಯಾಗಿರಲಿಲ್ಲ. ಹೈ-ಫೈ ಯುವಕ-ಯುವತಿಯರಿಂದ ಕೂಡಿದ್ದ ರೇವ್ ಪಾರ್ಟಿ ಆಗಿತ್ತು. ಖಚಿತ ಮಾಹಿತಿ‌ ಪಡೆದ ಇನ್ ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದಾಗ ಬಾರ್‌ನಲ್ಲಿ 14 ಜನ ಯುವತಿಯರು ಹಾಗೂ 21 ಜನ ಯುವಕರು ಭಾಗಿಯಾಗಿದ್ದರು.

ಬಾರ್ ಇಂಚಿಂಚೂ ಶೋಧಿಸಿದಾಗ ಮಾದಕ 7 ಕಸದ ಡಬ್ಬಿಯಲ್ಲಿ ಎಂಡಿಎಂಎ ಟ್ಯಾಬ್ಲೇಟ್‌ಗಳು ಪತ್ತೆಯಾಗಿದೆ. 4 ಗುಲಾಬಿ ಮತ್ತು 3 ನೀಲಿ ಬಣ್ಣದ ಟ್ಯಾನಲೇಟ್ ಇದಾಗಿದೆ. ಜೊತೆಗೆ 5 ಗ್ರಾಂ ತೂಕದ ಗಾಂಜಾ ಕೂಡ ಡಸ್ಟ್ ಬೀನ್‌ನಲ್ಲಿ ಪತ್ತೆಯಾಗಿದೆ.‌ ಈ ಬಗ್ಗೆ‌ ಪ್ರಶ್ನಿಸಿದ್ದ ಪೊಲೀಸರಿಗೆ ಡ್ರಗ್ಸ್ ತಮ್ಮದಲ್ಲ ಎಂದು ಪಾರ್ಟಿಯಲ್ಲಿ‌ದ್ದವರು ವಾದಿಸಿದ್ದರು. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಸಂತೋಷ್ ಆಸ್ಪತ್ರೆಯಲ್ಲಿ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತು‌. ಅದರಲ್ಲಿ ಐವರಿಗೆ ಪಾಸಿಟಿವ್ ರಿಪೋರ್ಟ್ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ದಾಂತ್ ಜೊತೆ ಬಂಧಿಲ್ಪಟ್ಟವರು ಯಾರು?

ಸಿದ್ದಾಂತ್ ಜೊತೆ ಬಂಧಿಲ್ಪಟ್ಟವರು ಯಾರು?

ಸಿದ್ದಾಂತ್ ಕಪೂರ್ ನಟನಾದರೆ ಅಕಿಲ್ ಸೋನಿ ಇಂದಿರಾನಗರದಲ್ಲಿ ವಾಸವಾಗಿದ್ದು ಕಂಪೆನಿಯೊಂದರಲ್ಲಿ ಬಿಸಿನೆಸ್ ಮ್ಯಾನೇಜರ್ ಆಗಿದ್ದಾನೆ. ಪಂಜಾಬ್ ಮೂಲದ ಹರ್ಜೋತ್ ಸಿಂಗ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾನೆ. ಹನಿ ಬಿಟಿಎಂ ಲೇಔಟ್ ಹಾಗೂ ಅಕಿಲ್ ಎಂಬಾತ ಮಾಗಡಿ ರೋಡ್‌ ನಿವಾಸಿಯಾಗಿದ್ದಾನೆ.

ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಪ್ರತಿಕ್ರಿಯೆ

ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಪ್ರತಿಕ್ರಿಯೆ

ಖಾಸಗಿ ಹೊಟೇಲ್‌ ಮೇಲೆ‌‌‌‌‌‌ ನಡೆದ‌ ದಾಳಿಯಲ್ಲಿ ನಟ ಸೇರಿದಂತೆ ಐವರು ಬಂಧನ‌ ಪ್ರಕರಣ ಸಂಬಂಧ‌ ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಪ್ರತಿಕ್ರಿಯೆ ನೀಡಿ "ಡ್ರಗ್ಸ್ ಪಾರ್ಟಿ ಸಂಬಂಧ ನಮ್ಮ ಅಧಿಕಾರಿಗಳು ರಾತ್ರಿ ದಾಳಿ ನಡೆಸಿದ್ದಾರೆ. ಅದರಲ್ಲಿ ಈಗಾಗಲೆ 30 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಈ ಪೈಕಿ ಐದು ಜನರನ್ನ ಬಂಧಿಸಲಾಗಿದೆ‌‌. ಬಂಧಿತರ ಪೈಕಿ ಬಾಲಿವುಡ್ ನ ಖ್ಯಾತ ನಟ ಕೂಡ ಇದ್ದಾನೆ. ಮುಖ್ಯವಾಗಿ ಪಾರ್ಟಿಯನ್ನು ಆಯೋಜನೆ ಯಾರು ಮಾಡಿದ್ದು ಎಂದು ತಿಳಿಯಬೇಕಿದೆ'' ಎಂದಿದ್ದಾರೆ.

ಇನ್ನು "ಡ್ರಗ್ ಸೇವನೆ ಮಾಡಿರೋದು ಬ್ಲಡ್ ಸ್ಯಾಂಪಲ್‌ನಲ್ಲಿ ಗೊತ್ತಾಗಿದೆ. ಈಗಾಗಲೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುತ್ತಿದೆ. ಮುಖ್ಯವಾಗಿ ಡ್ರಗ್ ಪೆಡ್ಲಿಂಗ್ ಮಾಡಿದವರ ಬಗ್ಗೆ ಕೂಡ ಮಾಹಿತಿ ಕಲೆ ಹಾಕಲಾಗುತ್ತಿದೆ. ಪಾರ್ಟಿ ಮಾಡಿದವರು ರೆಗ್ಯೂಲರ್ ಇರುವಂತಹ ವ್ಯಕ್ತಿಗಳಲ್ಲ. ಹೊರಗಡೆಯಿಂದ ಬಂದಿರುವ ಸಾಧ್ಯತೆಯಿದೆ. ಸದ್ಯ ಈ ಡ್ರಗ್ ಪಾರ್ಟಿ ಸಂಬಂಧ ಈಗಾಗಲೆ ತನಿಖೆ ಮುಂದುವರೆದಿದೆ‌'' ಎಂದಿದ್ದಾರೆ.

ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಹೇಳಿಕೆ

ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಹೇಳಿಕೆ

ಬಾಲಿವುಡ್ ಹಿರಿಯ ನಟ ಪುತ್ರ ಮಾದಕ ವಸ್ತು ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ನಟ ಸಿದ್ದಾಂತ್ ಕಪೂರ್, ಅಕಿಲ್ ಸೋನಿ, ಹರ್ಜೋತ್ ಸಿಂಗ್, ಅಕಿಲ್ ಹಾಗೂ ಹನಿ ಎಂಬುವರು ಡ್ರಗ್ಸ್ ಸೇವನೆ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನುಳಿದವರು ವೈದ್ಯಕೀಯ ಪರೀಕ್ಷೆ ಬಳಿಕ ಡ್ರಗ್ಸ್ ಸೇವನೆ ಬಗ್ಗೆ ಗೊತ್ತಾಗಲಿದೆ.

ಈ ಬಗ್ಗೆ ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್, "ರಾತ್ರಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ರೇಡ್ ಮಾಡಲಾಗಿತ್ತು. 100 ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿದ್ದರು. ಅದರಲ್ಲಿ ಭಾಗಿಯಾಗಿದ್ದ ಕೆಲವರನ್ನ ಡ್ರಗ್ಸ್ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಐವರಿಗೆ ಪಾಸಿಟಿವ್ ಬಂದಿತ್ತು.‌ ಪಾರ್ಟಿಯಲ್ಲಿ ಉತ್ತರ ಭಾರತವರು ಜಾಸ್ತಿಯಿದ್ದರು. ಐದೂ ಜನ ಕೂಡ ಕರ್ನಾಟಕದವರಲ್ಲ. ಈ ಪೈಕಿ ಮೂವರು ರಾಜ್ಯದಲ್ಲಿ ವಾಸವಾಗಿದ್ದಾರೆ. ಪಾರ್ಟಿ ಓಪನ್ ಫಾರ್ ಪಬ್ಲಿಕ್ ಆಗಿದೆ‌. ಡಸ್ಟ್ ಬಿನ್ ಬಳಿ 7 ಎಂಡಿಎಂಎ, ಗಾಂಜಾ ಸಿಕ್ಕಿದೆ. ನಟ ಸಿದ್ಧಾಂತ್ ಕಪೂರ್ ಡ್ರಗ್ಸ್ ತೆಗೆದುಕೊಂಡಿದ್ದರು'' ಎಂದು ಮಾಹಿತಿ ನೀಡಿದ್ದಾರೆ.

ಕಾನೂನಿನ ಪ್ರಕಾರ ಕ್ರಮ

ಕಾನೂನಿನ ಪ್ರಕಾರ ಕ್ರಮ

"ಹಿಂದಿ ಸಿನೆಮಾ ರಂಗದ ನಟನೊಬ್ಬನನ್ನು ಬೆಂಗಳೂರು ಪೊಲೀಸರು ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಬಂಧಿಸಿದ್ದಾರೆ. ಕಾನೂನಿನ ಪ್ರಕಾರ ಕ್ರಮ ತೆಗೆದು ಕೊಳ್ಳಲಾಗುತ್ತದೆ. ಕರ್ನಾಟಕ ಸರಕಾರ ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ವಿರುಧ್ದ ಅಭಿಯಾನದ ರೂಪದಲ್ಲಿ ಕ್ರಮ ವಹಿಸುತ್ತಿದೆ. ಯುವಕರಲ್ಲಿ ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಮಾದಕ ವಸ್ತುಗಳ ವಿರುದ್ದದ ಹೋರಾಟದಲ್ಲಿ ಎಲ್ಲರೂ ಕೈಗೂಡಿಸಬೇಕು'' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+