• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪಾರ್ಕ್‌ಗಳು ಇನ್ನು ಮುಂದೆ ದಿನವಿಡೀ ಓಪನ್‌?

|
Google Oneindia Kannada News

ಬೆಂಗಳೂರು,ಜು.11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಉದ್ಯಾನವನಗಳನ್ನು ಎಲ್ಲರಿಗೂ ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕ ಸ್ಥಳಗಳ ಬಳಕೆಯನ್ನು ಅತ್ಯುತ್ತಮವಾಗಿಸಲು ರಾತ್ರಿ 8 ಗಂಟೆವರೆಗೆ ತೆರೆಯಲು ಶೀಘ್ರದಲ್ಲೇ ಆದೇಶವನ್ನು ನೀಡುವುದಾಗಿ ಹೇಳಿದೆ.

ನೂರಾರು ಮಂದಿ ಕೆಲಸಗಾರರು ಮತ್ತು ಇತರರಿಗೆ ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆ ಸ್ವಲ್ಪ ವಿರಾಮದ ಅಗತ್ಯವಿರುತ್ತದೆ ಇದಕ್ಕೆ ನಗರದ ಉದ್ಯಾನವನಗಳು ಅವಕಾಶ ನೀಡುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಜಾರಿಗೆ ಬರಲಿದೆ.

ಬೆಂಗಳೂರಿನ ನೀರಿನ ಸಮಸ್ಯೆ ಶೀಘ್ರವೇ ಕೊನೆ, ಇಲ್ಲಿದೆ ಮಾಹಿತಿ!ಬೆಂಗಳೂರಿನ ನೀರಿನ ಸಮಸ್ಯೆ ಶೀಘ್ರವೇ ಕೊನೆ, ಇಲ್ಲಿದೆ ಮಾಹಿತಿ!

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾತನಾಡಿ, "ಪ್ರತಿ ವರ್ಗದ ಜನರು ಕುಳಿತುಕೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ಉದ್ಯಾನವನಗಳು ತೆರೆದಿರಬೇಕು ಹೌದು. ಈ ಬಗ್ಗೆ ನಾನು ಶೀಘ್ರದಲ್ಲೇ ಆದೇಶವನ್ನು ನೀಡುತ್ತೇನೆ. ಆದಾಗ್ಯೂ, ಪರಿಸರ ಕಾರಣಗಳಿಂದಾಗಿ ಕೆರೆ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳನ್ನು ನಿರ್ಬಂಧಿಸಲಾಗುವುದು," ಎಂದು ಅವರು ಹೇಳಿದರು.

ಈಗ ಹೆಚ್ಚಿನ ಉದ್ಯಾನವನಗಳು ಪ್ರತಿದಿನ ಸೀಮಿತ ಗಂಟೆಗಳವರೆಗೆ ತೆರೆದಿರುತ್ತವೆ. ವಸತಿ ಪ್ರದೇಶಗಳಲ್ಲಿ ಅವುಗಳನ್ನು ಬೆಳಗ್ಗೆ 6 ರಿಂದ 11 ಅಥವಾ 12 ರವರೆಗೆ ಮತ್ತು ಸಂಜೆ 4-5 ರಿಂದ 7-8 ರವರೆಗೆ ತೆರೆದಿಡಲಾಗುತ್ತಿದೆ. ಶನಿವಾರ ಮಧ್ಯಾಹ್ನ ಆಹಾರ -ವಿತರಣಾ ಪಾಲುದಾರರಾದ ಮಾಧುರಿ ಅವರು ಮಾತನಾಡಿ, "ನಾವು ಮುಂಜಾನೆಗೆ ಕೆಲಸವನ್ನು ಪ್ರಾರಂಭಿಸುತ್ತೇವೆ. ಕೆಲಸದಿಂದ 11 ಗಂಟೆಗೆ ಸುಸ್ತಾಗುತ್ತೇವೆ. ಉದ್ಯಾನವನದಲ್ಲಿ 15 ನಿಮಿಷಗಳ ನಿದ್ದೆ ನಮಗೆ ಅಗತ್ಯವಾಗಿದ್ದು ಇದು ನಮಗೆ ಚೈತನ್ಯ ನೀಡುತ್ತದೆ ಮತ್ತು ಕೆಲಸಕ್ಕೆ ಮರಳಲು ಸಹಾಯ ಮಾಡುತ್ತದೆ. ನಾನು ನನ್ನ ಬಿಡುವಿಲ್ಲದ ಕೆಲಸದ ನಡುವೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಜಯನಗರದಾದ್ಯಂತ ಪಾರ್ಕ್‌ ಹುಡುಕಿತ್ತಿದ್ದೆ. ಆದರೆ ಎಲ್ಲಿಯೂ ಪಾರ್ಕ್‌ ತೆರೆದಿರಲಿಲ್ಲ. ಬಳಿಕ ನಾನು ರಾತ್ರಿ ಕೆಲಸ ಮುಗಿಯುವರೆಗೂ ಬಿಡುವಿಲ್ಲದ ಕೆಲಸ ಮುಂದುವರಿಸಿದೆ," ಎಂದು ಹೇಳಿದ್ದಾರೆ ಎಂದು ಹೇಳಿದ್ದಾರೆ.

ನಗರದ ಕರೆಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕಿದೆನಗರದ ಕರೆಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕಿದೆ

 ಕಾರ್ಮಿಕ ವರ್ಗದ ನಾಗರಿಕರಿಗೆ ನಿರ್ಬಂಧ

ಕಾರ್ಮಿಕ ವರ್ಗದ ನಾಗರಿಕರಿಗೆ ನಿರ್ಬಂಧ

ವಿಶ್ರಮಿಸಲು ಮತ್ತು ಊಟ ಮಾಡಲು ಸ್ಥಳಗಳಿಲ್ಲದೆ ಇದೇ ರೀತಿ ಸಾವಿರಾರು ಜನರು ಬೆಂಗಳೂರಿನಲ್ಲಿದ್ದಾರೆ. ಜೆ.ಪಿ.ನಗರ, ಜಯನಗರ, ಕೋರಮಂಗಲ, ರಾಜಾಜಿನಗರ, ಬಿಟಿಎಂ ಲೇಔಟ್, ಬಸವೇಶ್ವರನಗರ ಮುಂತಾದ ಪ್ರದೇಶಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಯುನೈಟೆಡ್ ಫುಡ್ ಡೆಲಿವರಿ ಪಾರ್ಟ್‌ನರ್ಸ್ ಯೂನಿಯನ್‌ನ ಅಧ್ಯಕ್ಷ ವಿನಯ್ ಸಾರಥಿ ಮಾತನಾಡಿ, "ಫುಡ್ ಡೆಲಿವರಿ ಮಾಡುವ ಯುವಕರು ಪಾರ್ಕ್ ಜಾಗಗಳನ್ನು ಕೊಳಕು ಮಾಡಬಹುದು ಎಂಬ ಕಾರಣಕ್ಕೆ ಉದ್ಯಾನ ನಿರ್ವಹಣೆ ಮಾಡುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು ಬೀಗ ಹಾಕಿಕೊಳ್ಳುವುದು ಅಮಾನವೀಯ. ಇದಕ್ಕಾಗಿ ಆನ್‌ಲೈನ್ ಆಹಾರ ವಿತರಣಾ ಕಂಪನಿಗಳಿಗೆ ಅಲ್ಲಲ್ಲಿ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪಿಸಲು ಒತ್ತಾಯಿಸುತ್ತಿದ್ದೇವೆ. ಆದರೆ ಅದಕ್ಕಾಗಿ ಉದ್ಯಾನಗಳು ಮುಚ್ಚುವುದು ಸರಿಯಲ್ಲ. ಯಾವಾಗಲೂ ಪ್ರವೇಶ ಇರುವಂತಿದ್ದರೆ ಚೆಂದ," ಎಂದು ಅವರು ಹೇಳಿದರು.

 ಸಾರ್ವಜನಿಕ- ಖಾಸಗಿ ಪಾಲುದಾರಿಕೆ

ಸಾರ್ವಜನಿಕ- ಖಾಸಗಿ ಪಾಲುದಾರಿಕೆ

ದುಡಿಯುವ ವರ್ಗದ ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಮಧು ಭೂಷಣ್, "ಉದ್ಯಾನವನಗಳ ಖಾಸಗೀಕರಣವೇ ಅವುಗಳ ನಿಯಂತ್ರಣವು ನಿವಾಸಿಗಳ ಕೈಗೆ ಹೋಗುವುದಕ್ಕೆ ಪ್ರಮುಖ ಕಾರಣವಾಗಿದೆ. ಸಾರ್ವಜನಿಕ- ಖಾಸಗಿ ಪಾಲುದಾರಿಕೆಯ ಮಾದರಿಯ ಮೂಲಕ ಈ ಜಾಗಗಳು ಖಾಸಗೀಕರಣಗೊಂಡಿರುವುದರಿಂದ ನಿವಾಸಿಗಳು ಅಂತಹ ಸ್ಥಳಗಳನ್ನು ತಮ್ಮ ಜಾಗಗಳು ಎಂಬಂತೆ ಭಾವಿಸುತ್ತಾರೆ," ಎಂದು ಹೇಳಿದರು.

 ಸಮಯವನ್ನು ಆರ್‌ಡಬ್ಲ್ಯೂಎಗಳು ನಿರ್ಧರಿಸುತ್ತವೆ

ಸಮಯವನ್ನು ಆರ್‌ಡಬ್ಲ್ಯೂಎಗಳು ನಿರ್ಧರಿಸುತ್ತವೆ

ವಕೀಲರಾದ ವಿನಯ್ ಶ್ರೀನಿವಾಸ ಅವರು "ಉದ್ಯಾನವನಗಳು ತೆರೆದಿರಬೇಕಾದ ಸಮಯವನ್ನು ನಿವಾಸಗಳ ಕ್ಷೇಮಾಭಿವೃದ್ಧಿ ಸಂಘಗಳು ನಿರ್ಧರಿಸುತ್ತವೆ. ಉದ್ಯಾನವನಗಳು ವಾಕಿಂಗ್‌ ಮಾಡುವವರಿಗೆ ಸೀಮಿತವಾಗಿಲ್ಲ. ಏಕೆಂದರೆ ಅನೇಕ ಜನರು, ವಿಶೇಷವಾಗಿ ಕಾರ್ಮಿಕ ವರ್ಗದವರು ಇಲ್ಲಿಗೆ ವಿಶ್ರಾಂತಿ ಪಡೆಯಲು, ನಿದ್ದೆ ಮಾಡಲು ಅಥವಾ ಆಹಾರ ಸೇವಿಸಲು ಬರುತ್ತಾರೆ," ಎಂದು ಹೇಳಿದರು.

ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುವ ಪೌರಕಾರ್ಮಿಕರು ಮುಂಜಾನೆಯ ಸಮಯದಲ್ಲಿ ಉದ್ಯಾನವನಗಳ ಹೊರಗೆ ಕುಳಿತುಕೊಳ್ಳುತ್ತಾರೆ. ಬೆಳಗ್ಗೆ 10:30ಕ್ಕೆ ತಮ್ಮ ಮೊದಲಾರ್ಧದ ಕೆಲಸವನ್ನು ಮುಗಿಸುವ ಸಾವಿರಾರು ಪೌರಕಾರ್ಮಿಕರು ಪ್ರವೇಶವನ್ನು ನಿರ್ಬಂಧಿಸಿರುವುದರಿಂದ ಉದ್ಯಾನವನಗಳ ಹೊರಗೆ ಊಟ ಮಾಡಬೇಕಾಗಿದೆ.

 ಕೊಳಕು ಮಾಡುತ್ತಾರೆ ಎಂಬ ವಾದ

ಕೊಳಕು ಮಾಡುತ್ತಾರೆ ಎಂಬ ವಾದ

ಈ ಬಗ್ಗೆ ಪೌರಕಾರ್ಮಿಕರ ಸಂಘದ ಸದಸ್ಯೆ ಲೇಖಾ ಮಾತನಾಡಿ, "ವಸತಿ ಪ್ರದೇಶದಲ್ಲಿರುವ ಉದ್ಯಾನವನಗಳಿಗೆ ಪೌರಕಾರ್ಮಿಕರು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಪೌರ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರು ಈ ಪ್ರದೇಶವನ್ನು ಕೊಳಕು ಮಾಡುತ್ತಾರೆ ಎಂಬ ನಿವಾಸಿಗಳ ವಾದಕ್ಕೆ ಪ್ರತಿಕ್ರಿಯಿಸಿದ ಲೇಖಾ, ಇದನ್ನು ಸಾಮಾನ್ಯೀಕರಿಸಲಾಗುವುದಿಲ್ಲ ಮತ್ತು ಯಾರಾದರೂ ಇದನ್ನು ಮಾಡಿದರೆ ಉದ್ಯಾನವನ್ನು ನಿರ್ವಹಿಸುವ ಏಜೆನ್ಸಿಗಳು ಅಂತಹ ಚಟುವಟಿಕೆಗಳನ್ನು ನಿರ್ಬಂಧಿಸಬಹುದು," ಎಂದು ಹೇಳಿದರು.

Recommended Video

   ಕಡಕ್‌ನಾತ್ ಕೋಳಿ ಮಾರಲು ರೆಡಿಯಾದ MS Dhoni, ಈ ಕೋಳಿಯ ಸ್ಪೆಷಾಲಿಟಿ ಏನು? | *Cricket | OneIndia Kannada
   English summary
   The BBMP has said it will soon issue an order to open parks for all from 6 am to 8 pm to optimize the use of public spaces.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X