ಒಟಿಟಿ ಬಳಿಕ ಎಲ್ಲಾ ಕಲೆಗಳು ನಶಿಸುತ್ತಿವೆ : ಅಲೋಕ್ ಕುಮಾರ್
ಬೆಂಗಳೂರು, ಫೆ. 21 : ಸರ್ಕಾರವೇ ಎಲ್ಲವನ್ನೂ ಮಾಡುತ್ತೆ ಅಂತ ಕಾಯಬೇಡಿ. ನಿಮ್ಮ ಪ್ರಯತ್ನ ನೀವು ಮಾಡಬೇಕು. ಫಿಡಿಲಿಟಸ್ ಗ್ಯಾಲರಿನಂತಹ ಸರ್ಕಾರೇತರ ಸಂಸ್ಥೆಗಳೂ ಕಲಾವಿದರನ್ನು ಪ್ರೋತ್ಸಾಹ ಮಾಡ್ತಿರೋದು ಶ್ಲಾಘನೀಯ. ಇತ್ತೀಚೆಗೆ ಒಟಿಟಿ ಪ್ಲಾಟ್ ಫಾರಂ ನಿಂದ ಎಲ್ಲ ಕಲೆಗಳೂ ನಶಿಸ್ತಾ ಇದೆ. ಇಂತಹ ಸಮಯದಲ್ಲಿ ಇಂತಹ ಕಲಾ ಪ್ರದರ್ಶನಗಳು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಬನಶಂಕರಿಯಲ್ಲಿರುವ ಫಿಡಿಲಿಟಸ್ ಗ್ಯಾಲರಿಯಲ್ಲಿ ಜರುಗಿದ "CONSORTIUM-Art Preceptors of Bengaluru Art Institutions" ವಿಶೇಷ ಕಲಾ ಪ್ರದರ್ಶನ ಕಾರ್ಯಕ್ರಮ ಹಾಗೂ ವರ್ಚುಯಲ್ ಗ್ಯಾಲರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಲಹರಿ ಸಂಸ್ಥೆಯ ಎಂಡಿ ಲಹರಿ ವೇಲು, ಖ್ಯಾತ ಕಲಾ ಇತಿಹಾಸಗಾರ್ತಿ ಡಾ. ಪ್ರಮೀಳಾ ಲೋಚನ್ ಹಾಗೂ ಫಿಡಿಲಿಟಸ್ ಕಾರ್ಪ್ ಎಂಡಿ ಅಚ್ಯುತ್ ಗೌಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಲಹರಿ ವೇಲು ಮಾತನಾಡಿ, 'ಬ್ಯುಸಿನೆಸ್ ಜೊತೆ ಆರ್ಟ್‌ಗೆ ಬೆಂಬಲ ನೀಡ್ತಿರೋದು ತುಂಬಾ ಒಳ್ಳೆಯ ಕೆಲಸ. ಸಂಗೀತ ಕ್ಷೇತ್ರದಲ್ಲಿ ನಿಮ್ಮ ಲಹರಿ ಸಂಸ್ಥೆ ಬೆಳೆದ ರೀತಿಯಲ್ಲಿ ಫಿಡಿಲಿಟಸ್ ಗ್ಯಾಲರಿಯೂ ಬೆಳೆಯಲಿ ಎಂದು ಹಾರೈಸುತ್ತೇನೆ. ಕಲಾವಿದರಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಿಮ್ಮ ಜೊತೆ ಎಂದಿಗೂ ನಾವಿರ್ತೀವಿ ಎಂದು ಕಲಾವಿದರಿಗೆ ಕಿವಿಮಾತು ಹೇಳಿದರು.

ಇತಿಹಾಸಗಾರ್ತಿ ಡಾ. ಪ್ರಮೀಳಾ ಲೋಚನ್ ಮಾತನಾಡಿ, ಅಚ್ಚುತ್ ಗೌಡ ಅವರು ಕಲಾವಿದರಿಗೆ ಕೊಡುತ್ತಿರುವ ಬೆಂಬಲಕ್ಕೆ ಎಷ್ಟು ಹೊಗಳಿದರೂ ಸಾಲದು. ಕಲಾವಿದರ ಕಲಾಕೃತಿಗಳಿಗೆ ತುಂಬಾ ಗೌರವ ನೀಡಬೇಕಿದೆ. ಅದು ಈ ಸುಂದರ ಸಂಜೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಜರುಗುತ್ತಿದೆ ಎಂದು ಫಿಡಿಲಿಟಸ್ ಗ್ಯಾಲರಿಯನ್ನು ಪ್ರಶಂಶೆ ಮಾಡಿದರು.

Recommended Video

ಪ್ರತಿಷ್ಠಿತ ಕಲಾ ಕಾಲೇಜುಗಳ 10 ಮಂದಿ ಹಿರಿಯ ಬೋಧಕರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ 9 ದಿನಗಳ ಕಾಲ ಅಂದರೆ ಫೆಬ್ರವರಿ 27ರ ವರೆಗೆ ನಡೆಯಲಿದೆ. ಪ್ರದರ್ಶನದಲ್ಲಿ ಮಾರಾಟವಾದ ಕಲಾಕೃತಿಗಳ ಮೌಲ್ಯದ 25% ರಷ್ಟನ್ನು ಶಿಲ್ಪಾ ಫೌಂಡೇಷನ್‌ಗೆ ನೀಡಲಾಗುವುದು. ಫಿಡಿಲಿಟಸ್ ಕಾರ್ಪ್‌ನ ಅಂಗ ಸಂಸ್ಥೆಯಾದ ಶಿಲ್ಪಾ ಫೌಂಡೇಷನ್ ಶಿಕ್ಷಣ, ಪರಿಸರ ಮತ್ತು ಆರೋಗ್ಯ ಸಂಬಂಧಿತ ಕ್ಷೇತ್ರಗಳಲ್ಲಿ ಕರ್ನಾಟಕದಾದ್ಯಂತ ಕೆಲಸ ಮಾಡುತ್ತಿದ್ದು, ಕಲಾಕೃತಿ ಮಾರಾಟದಲ್ಲಿ ಬಂದ ಹಣವನ್ನು ಈ ಮೂಲಕ ಸದ್ವಿನಿಯೋಗ ಮಾಡಲಾಗುತ್ತಿದೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು











Click it and Unblock the Notifications