• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಓಲಾ ಕ್ಯಾಬ್ ಚಾಲಕನಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

|

ಬೆಂಗಳೂರು, ಜೂನ್ 5: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವಾಗ ಓಲಾ ಕ್ಯಾಬ್ ಚಾಲಕನೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಈಚೆಗೆ ನಡೆದಿದೆ. ದೂರು ದಾಖಲಾದ ಮೂರು ಗಂಟೆ ಅವಧಿಯೊಳಗೆ ಚಾಲಕನನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಪ್ಪತ್ತಾರು ವರ್ಷದ ಮಹಿಳೆ, ವೃತ್ತಿಯಿಂದ ಆರ್ಕಿಟೆಕ್ಟ್ ಜೂನ್ ಒಂದರಂದು ಮಧ್ಯರಾತ್ರಿ ಮುಂಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ಹೋಗಬೇಕಾದ್ದರಿಂದ ಓಲಾ ಕ್ಯಾಬ್ ನಲ್ಲಿ ಹತ್ತಿದ್ದಾರೆ. ಟೋಲ್ ಗೇಟ್ ಗೂ ಮುನ್ನ, ಇಲ್ಲೇ ಹತ್ತಿರದ ದಾರಿ ಇನ್ನೊಂದಿದೆ ಎಂದು ನಂಬಿಸಿದ ಆತ ಬೇರೆ ಕಡೆ ಕರೆದುಕೊಂಡು ಹೋಗಿದ್ದಾನೆ.

ಚಾಲಕ ಮುಸ್ಲಿಂ ಆಗಿದ್ದಕ್ಕೆ ಓಲಾ ರೈಡ್ ರದ್ದುಪಡಿಸಿದ ವಿಎಚ್‌ಪಿ ಮುಖಂಡ

ನಿರ್ಜನವಾದ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಫೋನ್ ಕಸಿದುಕೊಂಡು, ಯಾರಿಗಾದರೂ ತಿಳಿಸಿದರೆ, ತನ್ನ ಸ್ನೇಹಿತರನ್ನು ಕರೆಸಿ, ಸಾಮೂಹಿಕ ಅತ್ಯಾಚಾರ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಬಟ್ಟೆ ತೆಗೆದು ಬೆತ್ತಲಾಗುವಂತೆ ಒತ್ತಾಯಿಸಿದ್ದಾನೆ. ಆ ನಂತರ ಫೋಟೋ ತೆಗೆದು ಅವುಗಳನ್ನು ವಾಟ್ಸಾಪ್ ಮೂಲಕ ಕಳಿಸಿದ್ದಾನೆ.

ಈ ವಿಚಾರವನ್ನು ಯಾರಿಗೂ ಹೇಳುವುದಿಲ್ಲ ಎಂದು ಆತನ ಮನವೊಲಿಸಿ, ತಪ್ಪಿಸಿಕೊಳ್ಳುವಲ್ಲಿ ಆ ಮಹಿಳೆ ಯಶಸ್ವಿಯಾಗಿದ್ದಾರೆ. ಆ ನಂತರ ಆತ ವಿಮಾನ ನಿಲ್ದಾಣಕ್ಕೆ ಮಹಿಳೆಯನ್ನು ಬಿಟಿದ್ದಾನೆ. ವಿಮಾನ ನಿಲ್ದಾಣ ತಲುಪಿದ ಮೇಲೆ ಮಹಿಳೆ ಇಮೇಲ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.

"ಮಹಿಳೆಯ ಮೇಲ್ ನ ಆಧಾರದಲ್ಲಿ ಎಫ್ ಐಆರ್ ದಾಖಲು ಮಾಡಿದ್ದೇವೆ. ಆ ತಕ್ಷಣವೇ ಧೈರ್ಯದಿಂದ ಪೊಲೀಸರಿಗೆ ದೂರು ನೀಡಿದ ಮಹಿಳೆಯನ್ನು ಮೆಚ್ಚಿಕೊಳ್ಳಬೇಕು" ಎಂದು ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಚಾಲಕನ ಹೆಸರು ವಿ.ಅರುಣ್ ಎನ್ನಲಾಗಿದೆ.

ಚಾಲಕನ ಬಗ್ಗೆ ಏಕೆ ಪೊಲೀಸರ ಪರಿಶೀಲನೆ ಆಗಿಲ್ಲ ಎಂದು ಪ್ರಶ್ನಿಸಿ ಓಲಾ ಕ್ಯಾಬ್ಸ್ ನವರಿಗೆ ನೋಟಿಸ್ ನೀಡಿದ್ದೇವೆ" ಎಂದು ಅಧಿಕಾರಿ ತಿಳಿಸಿದ್ದಾರೆ. ಇನ್ನು ಓಲಾ ವಕ್ತಾರ ಮಾತನಾಡಿ, ಗ್ರಾಹಕರಿಗೆ ಆದ ದುರದೃಷ್ಟ ಅನುಭವಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಇಂಥ ಘಟನೆಗಳನ್ನು ಸಹಿಸಿಕೊಳ್ಳುವ ಮಾತೇ ಇಲ್ಲ. ತಕ್ಷಣದಿಂದ ಆ ಚಾಲಕನನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ" ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
26 year young woman in Bengaluru took an Ola cab to the airport and suffered a ride to hell as the driver took a detour, allegedly molested her and forced her to strip for photos that he shared on WhatsApp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more