ರೈಲು ದುರಂತ : ಬೆಂಗಳೂರಿಗೆ ಬರುವ ರೈಲುಗಳ ಮಾರ್ಗ ಬದಲಾವಣೆ

ಬೆಂಗಳೂರು, ಆಗಸ್ಟ್,24 : ಆಂಧ್ರ ಪ್ರದೇಶದ ಮಡಕಶಿರ ಬಳಿಯ ರೈಲ್ವೇ ಕ್ರಾಸಿಂಗ್ ನಲ್ಲಿ ಅಪಘಾತ ಸಂಭವಿಸಿದ ಕಾರಣ ನೈಋತ್ಯ ರೈಲ್ವೇ ಇಲಾಖೆಯು ಬೆಂಗಳೂರಿಗೆ ಆಗಮಿಸಲಿರುವ ಕೆಲವು ರೈಲುಗಳ ಮಾರ್ಗ ಬದಲಿಸಿ ಪ್ರಕಟಣೆ ಹೊರಡಿಸಿದೆ.

ಲಾರಿಡಿಕ್ಕಿಯಿಂದ ಸಂಭವಿಸಿರುವ ರೈಲು ಅಪಘಾತದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೆಂಕಟೇಶ ನಾಯಕ ಸೇರಿದಂತೆ 6 ಜನ ಮೃತಪಟ್ಟಿದ್ದು, 30 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ. ಪರಿಣಾಮವಾಗಿ ಆ ಮಾರ್ಗವಾಗಿ ಸಂಚರಿಸುವ ರೈಲುಗಳು ಬೇರೆ ಮಾರ್ಗವಾಗಿ ತೆರಳಲಿವೆ.[ರೈಲು ಅಪಘಾತ : ದೇವದುರ್ಗ ಶಾಸಕ ವೆಂಕಟೇಶ್ ನಾಯಕ್ ಸಾವು]

Bengaluru-Nanded train express train accident: south western railway changes routes

ಬದಲಾವಣೆಗೊಂಡ ರೈಲು ಮಾರ್ಗಗಳು ಇಂತಿದೆ:

ಮುಂಬೈಗೆ ತೆರಳಲಿರುವ ನಾಗರಕೊಯಿಲ್ ಎಕ್ಸ್ ಪ್ರೆಸ್ ರೈಲು ಧರ್ಮವರಂ ಮತ್ತು ಕೃಷ್ಣಾರಾಜಪುರಂ ಬದಲಾಗಿ ಗುತ್ತಿ, ರೆನಿಗುಂಟಾ ಮತ್ತು ಪೆನುಕೊಂಡಾ ಮಾರ್ಗವಾಗಿ ಚಲಿಸಲಿದೆ.

ಬೆಂಗಳೂರಿನ ನಗರಕ್ಕೆ ಬರಲಿರುವ ಕಾಚಿಗೊಡ ಹಾಗೂ ಉದ್ಯಾನ್, ಸೊಲ್ಲಾಪುರ ಹಾಗೂ ಬೀದರ್ ನಿಂದ ಯಶವಂತಪುರಕ್ಕೆ ಬರಲಿರುವ ಎಕ್ಸ್ ಪ್ರೆಸ್ ರೈಲುಗಳು ಧರ್ಮವರಂ, ಪಕಲ, ಕಟ್‌ಪಡಿ ಮೂಲಕ ಆಗಮಿಸಲಿದೆ.

ಕಾಚಿಗುಡ ದಿಂದ ಬರಲಿರುವ ರೈಲು ಗುತ್ತಿ, ರೆನಿಗುಂಡಾ ಮತ್ತು ಪೆನುಕೊಂಡಾ ಮಾರ್ಗವಾಗಿ ಯಶವಂತಪುರಕ್ಕೆ ತೆರಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+