ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ: ವೈಟ್‌ಫಿಲ್ಡ್-ಗರುಡಾಚಾರ್‌ಪಾಳ್ಯ ಟ್ರ್ಯಾಕ್ ಪರಿಶೀಲನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ನಮ್ಮ ಮೆಟ್ರೋ 2ನೇ ಹಂತದ ವೈಟ್‌ಫಿಲ್ಡ್-ಬೈಯಪ್ಪನಹಳ್ಳಿ ಮೆಟ್ರೋ ಕಾಮಗಾರಿಯ ಪೈಕಿ ವೈಟ್‌ಫಿಲ್ಡ್‌ನಿಂದ ಗರುಡಾಚಾರ್‌ ಪಾಳ್ಯದವರೆಗಿನ ಟ್ರ್ಯಾಕ್‌ ಅನ್ನು ಗುರುವಾರ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಎನ್‌.ಎಂ.ಧೋಕೆ ಅವರು ಪರಿಶೀಲಿಸಿದರು.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌) ನಮ್ಮ ಮೆಟ್ರೋ 2ನೇ ಹಂತದ ಮಾರ್ಗದ ಟ್ರ್ಯಾಕ್‌ ಜೊತೆಗೆ ಥರ್ಡ್ ರೈಲು ವ್ಯವಸ್ಥೆಗಳ ಕಾಮಗಾರಿಯನ್ನು ಮೋಟಾರ್‌ ಟ್ರಾಲಿಯಲ್ಲಿ ಸಂಚರಿಸಿ ಎನ್‌.ಎಂ.ಧೋಕೆ ಪರಿಶೀಲಿಸಿ, ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದರು. ಈ ವೇಳೆ ಬಿಬಿಎಂಪಿ, ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ನಮ್ಮ ಮೆಟ್ರೋ 2ನೇ ಹಂತದ ವೈಟ್‌ಫಿಲ್ಡ್-ಬೈಯಪ್ಪನಹಳ್ಳಿ ವಿಸ್ತರಣೆ ಹಂತದ ಕಾಮಗಾರಿ ಪರಿಶೀಲನೆಗೆ 2023ನೇ ಫೆಬ್ರುವರಿ ಮೊದಲ ವಾರದಲ್ಲಿ ರೈಲು ಸುರಕ್ಷತಾ ಆಯುಕ್ತರನ್ನು ತಪಾಸಣೆಗೆ ಆಹ್ವಾನಿಸಬಹುದು. ತದನಂತರ ಬಾಕಿ ಕಾಮಗಾರಿಯನ್ನು 2023ನೇ ವರ್ಷಾಂತ್ಯಕ್ಕೆ ಪೂರ್ಣಗೊಳಿಸುವುದು ಅಗತ್ಯವಿದೆ. ಹೀಗಾಗಿ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Bengaluru Namma Metro Whitefield-Garudacharpalya track review By BMRCL officers

ವೈಟ್‌ಫಿಲ್ಡ್: ಅ.25ಕ್ಕೆ ಪ್ರಾಯೋಗಿಕ ಸಂಚಾರ, ಬೋಗಿ ಆಗಮನ

ಅಕ್ಟೋಬರ್ 25ರಂದು ವೈಟ್‌ಫಿಲ್ಡ್‌ ಭಾಗದಲ್ಲಿ ಮೆಟ್ರೋ ರೈಲುಗಳು ಪ್ರಾಯೋಗಿಕ ಸಂಚಾರ ಪರೀಕ್ಷೆ ನಡೆಯಲಿವೆ. ಈ ವೇಳೆ ಅಧಿಕಾರಿಗಳು, ಇನ್ನಿತರ ಇಲಾಖೆ ಮುಖ್ಯಸ್ಥರು ಉಪಸ್ಥಿತಿ ಇರಲಿದೆ. ಈ ಸಂಬಂಧ ಗುರುವಾರ ಬೈಯಪ್ಪನಹಳ್ಳಿಯಿಂದ ವ್ಯವಸ್ಥಿತ ವಾಹನಗಳ ಮೂಲಕ ಮೆಟ್ರೋ ಬೋಗಿಗಳನ್ನು ವೈಟ್‌ಫಿಲ್ಡಗೆ ಸ್ಥಳಾಂತರಿಸಲಾಗಿದ್ದು, ಅವುಗಳು ಶುಕ್ರವಾರ ಬೆಳಗ್ಗೆ 9ಕ್ಕೆ ನಿಗದಿತ ಸ್ಥಳ ತಲುಪಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 72ಕಿ.ಮೀ. ಉದ್ದದ ಒಟ್ಟು ಯೋಜನೆಯನ್ನು 2024ರ ಒಳಗೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಎರಡನೇ ಹಂತ ನಿಧಾನಗತಿಯಲ್ಲಿ ಸಾಗಿದೆ. ಜನರು ಸಂಚಾರ ದಟ್ಟಣೆ ಕಿರಿಕಿರಿ ಅನುಭವಿಸುವಂತಾಗಿದೆ.

English summary
Bengaluru Namma Metro Whitefield-Garudacharpalya track review By BMRCL director NM Dhoke.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X