Bengaluru Namma Metro: ಪ್ರಯಾಣಿಕರಿಗೆ ಸಂಪರ್ಕ ಮತ್ತಷ್ಟು ಸುಲಭ; 2 ಮೆಟ್ರೋ ನಿಲ್ದಾಣಗಳ ಬಳಿ ಹೊಸ ಬಸ್ ಸ್ಟಾಪ್

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ ಸುಧಾರಣೆಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗಳು ಕ್ರಮ ಕೈಗೊಂಡಿವೆ. ಉಪಕ್ರಮದ ಭಾಗವಾಗಿ 'ನೇರಳೆ ಹಾಗೂ ನೂತನ ಗುಲಾಬಿ ಮೆಟ್ರೋ' ಮಾರ್ಗಗಳ ಮೆಟ್ರೋ ನಿಲ್ದಾಣಗಳ ಸಮೀಪ ಹೊಸ ಬಸ್‌ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ.

BMRCL ಮತ್ತು BMTC ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದೇ ಅಕ್ಟೋಬರ್ 06 ರಿಂದ ಜಾರಿಗೆ ಬರುವಂತೆ, ಕೆಳಕಂಡ ಮೆಟ್ರೋ ನಿಲ್ದಾಣಗಳ ಸಮೀಪ ಬಿಎಂಟಿಸಿ ವತಿಯಿಂದ ಹೊಸ ಬಸ್ ನಿಲ್ದಾಣಗಳನ್ನು ಒದಗಿಸಲಾಗಿದೆ. ಇದರಿಂದ ಆಯಾ ನಿಲ್ದಾಣಗಳಲ್ಲಿ ಬಸ್ ನಿಲುಗಡೆ ಆಗಲಿದ್ದು, ದೂರದ ಪ್ರಯಾಣಿಕರಿಗೆ ಮೆಟ್ರೋ ಸಾರಿಗೆ ಸೌಲಭ್ಯ ಸಿಗಲಿದೆ.

Bengaluru Namma Metro

ಯಾವೆಲ್ಲ ನಿಲ್ದಾಣಗಳ ಬಳಿ ಬಸ್ ನಿಲ್ದಾಣ ಸ್ಥಾಪನೆ?

* ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ:

ನೇರಳೆ ಮಾರ್ಗದಲ್ಲಿ ಬರುವ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಕಡೆಯಿಂದ ಬಂದು ಅನಿಲ್ ಕುಂಬ್ಳೆ ವೃತ್ತದ ಮೂಲಕ ಶಾಂತಿನಗರದ ಕಡೆಗೆ ಸಂಚರಿಸುವ ಬಸ್‌ಗಳಿಗಾಗಿ 'B' ಪ್ರವೇಶದ್ವಾರದ (ಚಿನ್ನಸ್ವಾಮಿ ಕ್ರೀಡಾಂಗಣದ ಕಡೆ) ಸಮೀಪ ಹೊಸ ಬಸ್ ನಿಲ್ದಾಣವನ್ನು ಕಲ್ಪಿಸಲಾಗಿದೆ.

ಅನಿಲ್ ಕುಂಬ್ಳೆ ವೃತ್ತದ ಕಡೆಯಿಂದ ಬಂದು ಲೋಕ್ ಭವನ (ರಾಜಭವನ) ಕಡೆಗೆ ಸಂಚರಿಸುವ ಬಸ್‌ಗಳಿಗಾಗಿ 'C' ಪ್ರವೇಶದ್ವಾರದ ಸಮೀಪ ಹೊಸ ಬಸ್ ನಿಲ್ದಾಣವನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.

* ತಾವರೆಕೆರೆ ಮೆಟ್ರೋ ನಿಲ್ದಾಣ (ಬನ್ನೇರುಘಟ್ಟ ರಸ್ತೆ)

ಉದ್ಘಾಟನೆಗೆ ಸಿದ್ಧವಾದ ನೂತನ ಗುಲಾಬಿ ಮಾರ್ಗದ ವ್ಯಾಪ್ತಿಗೆ ಬರುವ ಪ್ರಮುಖ ತಾವರೆಕೆರೆ ಮೆಟ್ರೋ ನಿಲ್ದಾಣ (ಬನ್ನೇರುಘಟ್ಟ ರಸ್ತೆ) ಬಳಿ ನೂತನ ಬಸ್ ನಿಲ್ದಾಣ ಒದಗಿಸಲಾಗಿದೆ. ಇಲ್ಲಿ ಡೈರಿ ಸರ್ಕಲ್‌ನಿಂದ ಬನ್ನೇರುಘಟ್ಟದ ಕಡೆಗೆ ಸಂಚರಿಸುವ ಬಸ್‌ಗಳಿಗೆ ಹಾಗೂ ಜಯದೇವ ಆಸ್ಪತ್ರೆ ಕಡೆಯಿಂದ ಡೈರಿ ಸರ್ಕಲ್ ಕಡೆಗೆ ಸಂಚರಿಸುವ ಬಸ್‌ಗಳಿಗೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣದ ಬಳಿ ಹೊಸ ಬಸ್ ನಿಲ್ದಾಣ ಕಲ್ಪಿಸಲಾಗಿದೆ.

ಮೆಟ್ರೋ ಪ್ರಯಾಣಿಕರು ಸುಗಮವಾದ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕಕ್ಕಾಗಿ ಮೇಲ್ಕಂಡ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ ಮೆಟ್ರೋ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

ಗುಲಾಬಿ ಮಾರ್ಗ: CMRS ಪರಿಶೀಲನೆ ನಾಳೆ ಮುಕ್ತಾಯ

ಕಾಳೇನ ಅಗ್ರಹಾರ-ತಾವರಕೆರೆವರೆಗಿನ 7.5ಕಿಲೋ ಮೀಟರ್ ಉದ್ದದ ಗುಲಾಬಿ ಮಾರ್ಗದಲ್ಲಿ ಅಂತಿಮ ಮತ್ತು ಶಾಸನಬದ್ಧ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (CMRS) ಅಕ್ಟೋಬರ್ 6ರಿಂದ ತಪಾಸಣೆ ಆರಂಭವಾಗಿದೆ. ಇಂದು ಎರಡನೇ ಬುಧವಾರ ಪರಿಶೀಲನೆ ನಡೆದಿದೆ, ನಾಳೆ ಗುರುವಾರ ಕೊನೆಯ ದಿನವು ಪ್ರಮುಖ ತಪಾಸಣೆಯನ್ನು ಆಯಕ್ತರು ನಡೆಸಲಿದ್ದಾರೆ.

ಬೆಂಗಳೂರು ದಕ್ಷಿಣ ವಲಯದ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಾದ (CMRS) ವಿ. ವೆಂಕಟಸುಬ್ರಮಣಿಯನ್ ರವರು BMRCL ತಂಡದೊಂದಿಗೆ ನಮ್ಮ ಮೆಟ್ರೋ ಗುಲಾಬಿ ಕಾರಿಡಾರ್ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಎತ್ತರಿಸಿದ ವಿಭಾಗದ ಮೂರು ದಿನಗಳ ಸುರಕ್ಷತಾ ಪರಿಶೀಲನೆ ಮುಂದುವರಿಸಿದ್ದಾರೆ. ಈ ಮಾರ್ಗವು 6 ಮೆಟ್ರೋ ನಿಲ್ದಾಣ ಒಳಗೊಂಡಿದೆ. ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ಅಗತ್ಯವಿರುವ ಸುರಕ್ಷತಾ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಸಿಎಂಆರ್‌ಎಸ್ ಪರಿಶೀಲನೆಯು ಅತ್ಯಂತ ಮಹತ್ವದ ಶಾಸನಬದ್ಧ ಹಂತವಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+