Metro work stopped: ಮೆಟ್ರೋ ಪಿಲ್ಲರ್ ಹಾಳು ಮಾಡಿದ ಭೂ ಮಾಲೀಕ, ಯಾವ ಲೈನ್, ಸಮಸ್ಯೆ ಏನು?
ಬೆಂಗಳೂರು, ಡಿಸೆಂಬರ್ 24: ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಟಿನ್ ಫ್ಯಾಕ್ಟರಿ ಬಳಿಯ ಮೆಟ್ರೋ ಮಾರ್ಗ ಸ್ಥಾಪನೆಯು ಸದ್ಯ ಜಟಿಲವಾದಂತಿದೆ. ಕಾರಣ ಇಲ್ಲಿನ ಭೂಮಾಲೀಕರು ಮತ್ತು ಬಿಎಂಆರ್‌ಸಿಎಲ್ ಮಧ್ಯ ಸಮಯ ಏರ್ಪಟ್ಟಿದೆ. ಇದು ತಾರಕಕ್ಕೆ ಹೋಗಿದ್ದು, ಭೂಮ ನೀಡಿದ್ದ ಮಾಲೀಕರು ಎನ್ನಲಾಗುತ್ತಿರುವ ವ್ಯಕ್ತಿ ನಿರ್ಮಾಣ ಹಂತ ಮೆಟ್ರೋ ಪಿಲ್ಲರ್ ಮೇಲೆ ತ್ಯಾಜ್ಯ ಆಯಿಲ್ ಸುರಿದಿದ್ದಾರೆ. ಪಿಲ್ಲರ್ ಗಳ ಮುಂದೆ ಕಟ್ಟಡದ ಅವಶೇಷ ತಂದು ಸುರಿದ್ದಾರೆ.
ಟಿನ್ ಫ್ಯಾಕ್ಟರಿ ಬಳಿಯ ಐದು ಮೆಟ್ರೋ ಪಿಲ್ಲರ್‌ಗಳ ಕಾಮಗಾರಿಯು ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದೆ. ಪಿಲ್ಲರ್‌ಗಳು ನಿರ್ಮಾಣವಾಗುತ್ತಿರುವ ಸ್ಥಳ (ಜಮೀನಿನ) ಮಾಲೀಕರು ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯಿಂದ ಇದೀಗ ಮೆಟ್ರೋ ಪಿಲ್ಲರ್ ಗಳ ಕಾರ್ಯ ಸ್ಥಗಿತಕ್ಕೆ ಕಾರಣವಾಗಿದ್ದಾರೆ.

ಬೆನ್ನಿಗಾನಹಳ್ಳಿ ಮತ್ತು ಕೆಆರ್ ಪುರ ನಡುವಿನ ಈ ರಸ್ತೆಯಲ್ಲಿ ಪಕ್ಕದ ಪಿಲ್ಲರ್‌ಗಳ ಮೇಲೆ ತ್ಯಾಜ್ಯ ತೈಲವನ್ನು ಸುರಿದು ಅದನ್ನು ಹಾಳು ಮಾಡಲು ಮುಂದಾಗಿದ್ದಾರೆ. ಇದರಿಂದ ಕಾಮಗಾರಿ ನಿಂತಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಭೂಸ್ವಾಧೀನದ ಜನರಲ್ ಮ್ಯಾನೇಜರ್ ಎಂ ಎಸ್ ಚನ್ನಪ್ಪ ಗೌಡರ್ ಮಾಹಿತಿ ನೀಡಿದ್ದಾರೆಂದು TNIE ವರದಿ ಮಾಡಿದೆ.
ಪರಿಹಾರದ ವಿಚಾರದಲ್ಲಿ ಸೃಷ್ಟಿಯಾದ ವ್ಯಾಜ್ಯ
ಸೈಯದ್ ಫಯಾಜ್ ಎನ್ನುವವರು, BMRCL ಟಿನ್ ಫ್ಯಾಕ್ಟರಿಯಿಂದ ಕೆಆರ್ ಪುರದ ಕಡೆಗೆ 200 ಮೀಟರ್ ದೂರದಲ್ಲಿರುವ 3,762 ಚದರ ಮೀಟರ್ ಭೂಮಿಗೆ ಹಕ್ಕು ಸ್ವಾಧೀನಪಡಿಸಿಕೊಂಡಿದೆ. 5 ಎಕರೆಯಲ್ಲಿ 1 ಎಕರೆ 20 ಗುಂಟಕ್ಕೆ ಮಾತ್ರ ಮಾರಾಟ ಮಾಡಲಾಗಿದ್ದು, ಈ ಬಗ್ಗೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಹಿಂದಿನ ಮಾಲೀಕರಿಂದ ಜಮೀನು ಖರೀದಿಸಿರುವುದರಿಂದ ತಾವೇ ನಿಜವಾದ ಮಾಲೀಕ ಎಂದು ಅವರು ಹೇಳಿಕೊಂಡಿದ್ದಾರೆ. ಹೀಗಾಗಿ ಅದರ ಪರಿಹಾರ ನೀಡುವ ವಿಚಾರದಲ್ಲಿ ವ್ಯಾಜ್ಯ ಸೃಷ್ಟಿಯಾಗಿದೆ.
ಇದೇ ಕಾರಣದಿಂದಲೇ ಫಯಾಜ್ ಅವರು ವರ್ಷದ ಹಿಂದೆ ಇಲ್ಲಿನ ಮೆಟ್ರೋ ಕಾಮಗಾರಿ ನಿಲ್ಲಿಸಿದ್ದರು. ನಂತರ BMRCL ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅದಾಗಿಯೂ ಟಿನ್ ಫ್ಯಾಕ್ಟರಿ ಬಳಿ ಬಿಎಂಆರ್‌ಸಿಎಲ್ ಕಾಮಗಾರಿ ಆರಂಭವಾಗಿತ್ತು.
ಕಾಮಗಾರಿಗೆ ತಡೆಯಾಜ್ಞೆ ನೀಡಿಲ್ಲ
ಬಳಿಕ ಆಸ್ತಿಯ ಮಾಲೀಕತ್ವವನ್ನು ಪಡೆದುಕೊಳ್ಳುವ ಇತರರ ವಿರುದ್ಧ ಫಯಾಜ್ ನಗರದ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಹೋರಾಟಕ್ಕೆ ಮುಂದಾದರು. ಆದರೆ ಈವರೆಗೆ ಮೆಟ್ರೋ ಕಾಮಗಾರಿಗೆ ನ್ಯಾಯಾಲಯ ಯಾವುದೇ ತಡೆಯಾಜ್ಞೆ ನೀಡದ ಕಾರಣಕ್ಕೆ ಪಿಲ್ಲರ್ ಕಾಮಗಾರಿ ನಡೆಯುತ್ತಿತ್ತು ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದರು.
ಕಾನೂನಿನ ಆಶ್ರಯದಲ್ಲಿ ಭೂ ಸ್ವಾಧೀನಕ್ಕೆ ಪರಿಹಾರ ಮೊತ್ತ ಪಡೆಯಬಹದು. ಆದರೆ ನಮ್ಮ ಕೆಲಸ ನಿಲ್ಲಿಸಬಾರದು ಎಂದು ನಾವು ತಿಳಿಸಿದ್ದೆವು. ಇದೇ ವೇಳೆ ಫಯಾಜ್ ಇತರ ನಿರ್ಮಾಣದ ನಾಲ್ಕು ಪಿಲ್ಲರ್‌ಗಳ ಮೇಲೆ ನ್ಯಾಯಾಲಯದ ಪ್ರಕರಣದ ಸಂಖ್ಯೆಯ ವಿವರ ಬರೆದಿದ್ದರು ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಅವರು ಪಿಲ್ಲರ್ ನಿರ್ಮಾಣದಲ್ಲಿ ತೊಡಗಿದ್ದ ರಾತ್ರಿ ಪಾಳಿಯ ಉದ್ಯೋಗಿಗಳ ಮೇಲೆ ಸಹಚರರಿಂದ ಫಯಾಜ್ ಬೆದರಿಕೆ ಸಹ ಹಾಕಿದ್ದರು ಎಂದು ವರದಿ ಆಗಿದೆ.

ಎಣ್ಣೆ ಸುರಿದು ಪಿಲ್ಲರ್ ನಾಶ
ಈ ಮಧ್ಯೆ ಪ್ರತಿಭಟನೆಗೆ ಮುಂದಾದ ಫಯಾಜ್ ಪಿಲ್ಲರ್ (583) ಮೇಲೆ ಎಣ್ಣೆಯನ್ನು ಸುರಿದಿದ್ದಾರೆ. ಅಲ್ಲದೇ ಪಿಲ್ಲರ್‌ಗಳ ಮೂರು ಟ್ರಕ್‌ಲೋಡ್‌ನ ಅವಶೇಷಗಳನ್ನು ತಂದು ಸುರಿದಿದ್ದಾರೆ. ನಿರ್ಮಾಣ ಹಂತದಲ್ಲಿ ಉಕ್ಕಿನ ಬಲವರ್ಧನೆಯ ರಚನೆಯ ಮೇಲೆ ಅಪಾರ ಪ್ರಮಾಣದ ತ್ಯಾಜ್ಯ ತೈಲ ಅವರು ಸುರಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿಗಳಿಗೆ ಯು-ಗಿರ್ಡರ್ಗಳ ಅಳವಡಿಕೆಆಗಿ ಪಿಲ್ಲರ್ ಮೇಲಿನ ಪಿಯರ್ ಕ್ಯಾಪ್‌ಗೆ ಬೆಂಬಲವನ್ನು ಒದಗಿಸಲು ಮೆಟ್ರೋ ಪಿಲ್ಲರ್ ಸುತ್ತಲೂ ಬಲವರ್ಧನೆ ನಿರ್ಮಿಸಲಾಗುತ್ತಿದೆ. ಇದೀಗ ಅದರ ಮೇಲೆ ತ್ಯಾಜ್ಯ ಎಣ್ಣೆ ಸುರಿದ ಪರಿಣಾಮ ಅದರ ಮೇಲೆ ಕ್ರಾಂಕ್ರಿಟ್ ಹಿಡಿದುಕೊಳ್ಳೂವುದಿಲ್ಲ.
ಪೊಲೀಸ್ ರಕ್ಷಣೆಯಲ್ಲಿ ಕೆಲಸ
ಈ ಕಾರಣದಿಂದ ಮುಂದೆ ನಾವು ಕಾಮಗಾರಿ ಆರಂಭಿಸಿದಾಗ ಉಕ್ಕಿನ ಬಾರ್‌ಗಳನ್ನು ತಂತಿಗಳೊಂದಿಗೆ ಒಟ್ಟಿಗೆ ಜೋಡಿಸಿ ಹೊರ ರಚನೆ ಮಾಡಬೇಕು. ಸದ್ಯ ಮುಂದಿನ ಕಾಮಗಾರಿ ಪುನಾರಂಭದ ವೇಲೆ ನಗರ ಪೊಲೀಸ ಅಧಿಕಾರಿಗಳ ಸಂಪರ್ಕದಲ್ಲಿ ನಾವು ಮುಂದುವರಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.












Click it and Unblock the Notifications