Metro: ಬೆಂಗಳೂರು ಮೆಟ್ರೋಗಿಂತ ದೆಹಲಿ ಮೆಟ್ರೋ ಪ್ರಯಾಣ ಅಗ್ಗ, BMRCL ಎಫ್‌ಎಫ್‌ಸಿ ವರದಿ ಬಿಡುಗಡೆಗೆ ಆಗ್ರಹ

ಬೆಂಗಳೂರು, ಆಗಸ್ಟ್ 26: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ದರ ಏರಿಕೆಗೂ ಹಾಗೂ ರಾಜ್ಯ ರಾಜಧಾನಿ ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಗೆ ಪ್ರಯಾಣಿಕರು ಹೋಲಿಕೆ ಮಾಡುತ್ತಿದ್ದಾರೆ. ಬೃಹತ್ ಜಾಲ ಹೊಂದಿರುವ ದೆಹಲಿ ಕಡಿಮೆ ದರ ಏರಿಕೆ ಮಾಡಿದ್ದರೆ, ಕಡಿಮೆ ಜಾಲ ಹೊಂದಿರುವ ಬೆಂಗಳೂರು ಮೆಟ್ರೋ ಪ್ರಯಾಣ ಬಲು ದುಬಾರಿಯಾಗಿದೆ ಎಂದಿರುವ ಪ್ರಯಾಣಿಕರು BMRCL ಕೂಡಲೇ ದರ ಪರಿಷ್ಕರಣೆ ಸಮಿತಿ ವರದಿ ಬಿಡುಗಡೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಸಹ ಮನವಿ ಮಾಡಿದ್ದಾರೆ.

ಸೋಮವಾರವಷ್ಟೇ ದೆಹಲಿ ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ಮಾಡಿದೆ. 1 ರಿಂದ 4 ರೂಪಾಯಿ ಹೆಚ್ಚಿಸಿದೆ. ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಮಾತ್ರ ಒಟ್ಟು 5 ರೂ. ಪರಿಷ್ಕರಿಸಿದೆ. ದೆಹಲಿ ಮೆಟ್ರೋ ಬರೋಬ್ಬರಿ 395 ಕಿಲೋ ಮೀಟರ್ ವಿಸ್ತಾರ ಜಾಲ ಹೊಂದಿದ್ದರು ಸಹಿತ ಇಷ್ಟು ಕಡಿಮೆ ಪ್ರಮಾಣದಲ್ಲಿ, ಪ್ರಯಾಣಿಕರಿಗೆ ಹೊರೆ ಆಗದಂತೆ ಹೆಚ್ಚಿಸಿದೆ. ಆದರೆ ಕೇವಲ 96 ಕಿಲೋ ಮೀಟರ್ ಜಾಲ ಹೊಂದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMTCL) ಪ್ರಯಾಣಿಕರಿಗೆ ಹೊರೆ ಆಗುವಂತೆ ದುಪ್ಪಟ್ಟು ರೀತಿಯಲ್ಲಿ ಟಿಕೆಟ್ ಬೆಲೆ ಏರಿಕೆ ಮಾಡಿದೆ.

Bengaluru Namma Metro Fare Hike Draws Flak Compared to Cheaper Delhi Metro

ದೆಹಲಿ ಮೆಟ್ರೋ ದರ ಪರಿಷ್ಕರಣೆ ಅಗ್ಗ: ತೇಜಸ್ವಿ ಸೂರ್ಯ

BMRCL ಸಹ ನಗರದ ಪ್ರಯಾಣಿಕರನ್ನು ಗಮನದಲ್ಲಿಕೊಂಡು ದರ ಪರಿಷ್ಕರಿಸಬೇಕು. ಅಲ್ಲದೇ ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಇದೇ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರು ಸಹ ಪ್ರತಿಕ್ರಿಯಿಸಿದ್ದಾರೆ. ದೆಹಲಿ ಮೆಟ್ರೋ 08 ವರ್ಷಗಳ ಬಳಿಕ ದರ ಏರಿಕೆ ಮಾಡಿದೆ. ಅದು ಕೇವಲ 1-4 ರೂಪಾಯಿ. ಇದು ಬೆಂಗಳೂರಿಗೆ ಹೋಲಿಕೆ ಮಾಡಿದರೆ ತುಂಬ ಅಗ್ಗವಾಗಿದೆ. ನಮ್ಮ ಮೆಟ್ರೋ ಟಿಕೆಟ್ ದರ ದುಬಾರಿ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.

ಬೆಂಗಳೂರು ಮೆಟ್ರೋ ದುಬಾರಿ ಟಿಕೆಟ್ ದರ ಚಾಲ್ತಿಯಲ್ಲಿದೆ. ಇದನ್ನು ದೇಶದಲ್ಲೇ ಅತ್ಯಂತ ದುಬಾರಿ, ದೆಹಲಿಗೆ ಹೋಲಿಕೆ ಮಾಡಿದರೆ ನಮ್ಮ ಪ್ರಯಾಣಿಕರಿಗೆ ಹೆಚ್ಚಿನ ಆರ್ಥಿಕ ಹೊರೆ ಆಗುತ್ತಿದೆ. ತರ್ಕಬದ್ಧವಲ್ಲದ ರೀತಿಯಲ್ಲಿ ದರ ಏರಿಕೆ ಮಾಡಿದ್ದು ಸರಿಯಲ್ಲ. ಈಗಾಗಲೇ ನಾನು ಕೆಲವು ಬಾರಿ ದರ ಏರಿಕೆ ಸಮಿತಿ ವರದಿ ಬಹಿರಂಗಪಡಿಸುವಂತೆ ಆಗ್ರಹಿಸಿದರು. ಅದನ್ನು ಸಾರ್ವಜನಿಕಗೊಳಿಸಿಲ್ಲ ಎಂದು ಸಂಸದರು BMRCL ವಿರುದ್ಧ ಕಿರಿ ಕಾರಿದರು.

ಪ್ರಯಾಣಿಕರ ಪೈಕಿ ಜಯನಗರದ ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿ, ಮೆಟ್ರೋ ರೈಲುಗಳ ಆವರ್ತನ, ಜನದಟ್ಟಣೆ ಮತ್ತು ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕದ ಕೊರತೆ ಇದೆ. ಈ ಬಗ್ಗೆ ಸಾಕಷ್ಟು ದೂರುಗಳನ್ನು ನೀಡಿದ್ದರೂ ಸಹ ಬಗೆಹರಿಯುತ್ತಿಲ್ಲ. ದೇಶದ ದುಬಾರಿ ಮೆಟ್ರೋ ಸೇವೆ ಎಂಬ ಹೆಸರು ಪಡೆದಿದೆ. ಸಾರ್ವಜನಿಕರಿಗೆ ಹೊರೆ ಆಗದಂತೆ ದರ ಇಳಿಕೆಗೆ ಅವರು ಮನವಿ ಮಾಡಿದ್ದಾರೆ.

BMRCL ಮೊಂಡುತನ ಪ್ರದರ್ಶನ

ದೊಡ್ಡ ಜಾಲ ಹೊಂದಿರುವ ದೆಹಲಿ ಮೆಟ್ರೋ ಕಡಿಮೆ ದರ ಏರಿಕೆ ಮಾಡಿ ನಿರ್ವಹಣೆ ಮಾಡುತ್ತದೆ ಎಂದರೆ, ಕಡಿಮೆ ಜಾಲ ಹೊಂದಿರುವ ಬೆಂಗಳೂರು ಮೆಟ್ರೋಗೆ ಏಕೆ ಸಾಧ್ಯವಿಲ್ಲ ಎಂದು ಮತ್ತೊಬ್ಬ ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಎಫ್‌ಎಫ್‌ಸಿ ವರದಿ ನೀಡುವಂತೆ ಕೇಳುವ ಜೊತೆಗೆ ನಮ್ಮ ಮೆಟ್ರೋ ದರ ಪರಿಷ್ಕರಣೆ ನಡೆಗೆ ಅವರು ಅನುಮಾನ ಹೊರ ಹಾಕಿದ್ದಾರೆ. ಇಷ್ಟೆಲ್ಲ ಆಗ್ರಹ, ದೂರುಗಳು ಕೇಳಿ ಬಂದರೂ ಬಿಎಂಆರ್‌ಸಿಎಲ್ ಎಫ್‌ಎಫ್‌ಸಿ ವರದಿ ಬಹಿರಂಗಗೊಳಿಸಲದೇ ಮೊಂಡುತನ ಪ್ರದರ್ಶಿಸುತ್ತಿರುವುದು ಖಂಡನೀಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+