Bengaluru Namma Metro: ನೀಲಿ ಮಾರ್ಗದ ಕಾಮಗಾರಿ ಅಪ್ಡೇಟ್

ಬೆಂಗಳೂರು, ನವೆಂಬರ್ 05: ಬೆಂಗಳೂರು ನಮ್ಮ ಮೆಟ್ರೋ ಜಾಲವು ವಿಸ್ತರಣೆಗೊಳ್ಳುತ್ತಿದೆ. ಹೊಸ ಮಾರ್ಗಗಳ ಪೈಕಿ ಸಿಲ್ಕ್ ಬೋರ್ಡ್‌ನಿಂದ ದೇವನಹಳ್ಳಿವರೆಗಿನ ನೀಲಿ ಮಾರ್ಗದ (Namma Metro Blue Line) ಕಾಮಗಾರಿ ಭರದಿಂದ ಸಾಗಿದೆ. ಕಳೆದ ಸೋಮವಾರದಿಂದ ಈ ಮಾರ್ಗದ ಕೆಂಪಾಪುರ ಮಾರ್ಗದಲ್ಲಿ ಪಾಕೇಟ್ ಟ್ರ್ಯಾಕ್ ವರ್ಕ್ ಆರಂಭವಾಗಿದೆ. ನಗರದಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ (KIA)ಕ್ಕೆ ಕಡಿಮೆ ಅವಧಿಯಲ್ಲಿ ತುಲುಪಲು ಈ ಮಾರ್ಗ ನೀರ್ಣಾಯಕವಾಗಿದೆ.

ಸಿಲ್ಕ ಬೋರ್ಡ್‌ನಿಂದ ಕೆ.ಆರ್.ಪುರಂ ವರೆಗೆ 2ಎ ಮತ್ತು ಕೆ.ಆರ್‌.ಪುರಂನಿಂದ ದೇವನಹಳ್ಳಿ ಏರ್‌ಪೋರ್ಟ್ ವರೆಗೆ 2ಬಿ ಎಂದು ಎರಡು ಹಂತಗಳಲ್ಲಿ ಈ ನೀಲಿ ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಿದೆ.

Bengaluru Namma Metro Blue Line Pocket Track Work Begins in Kempapura See More

ಸಿಲ್ಕಬೋರ್ಡ್ ಜಂಕ್ಷನ್‌ನಿಂದ, ಏರ್‌ಪೋರ್ಟ್ ವರೆಗೆ ಅಲ್ಲಲ್ಲಿ ಪಿಲ್ಲರ್, ವಯಾಡಕ್ಟ್ ನಿರ್ಮಾಣ, ಜೋಡಣೆ ಕಾರ್ಯ ನಡೆಯುತ್ತಿದೆ. ಜನದಟ್ಟಣೆ ಇಲ್ಲ ಕಡೆ, ಚುರುಕಿನಿಂದ ಸಾಗಿದೆ. ಸಿಲ್ಕಬೋರ್ಡ್ ಜಂಕ್ಷನ್‌, ಆಗರ ಕೆರೆ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಮಾರತ್ತಹಳ್ಳಿ ಮಾರ್ಗವಾಗಿ ಕೆ.ಆರ್ ಪುರ ಮಾರ್ಗವಾಗಿ ಹೆಬ್ಬಾಳ ಮೂಲಕ ದೇವನಹಳ್ಳಿಯ ಏರ್‌ಪೋರ್ಟ್‌ ಸಿಟಿಗೆ ತಲುಪಲಿದೆ.

ಸದ್ಯ ಈ ಮಾರ್ಗದಲ್ಲಿ ಹೆಬ್ಬಾಳ ನಂತರದ ನಿಲ್ದಾಣ ಕೆಂಪಾಪುರ ಕಡೆಗೆ 'ಪಾಕೇಟ್ ಟ್ಯಾಕ್ ವರ್ಕ್' ಶುರುವಾಗಿದೆ. ಎರಡು ಕಡೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೊಟ್ಟು BMRCL ಬ್ಯಾರಿಕೇಡ್ ಹಾಕಿಕೊಂಡು ಒಳಗೆ ಜೆಸಿಬಿ ಮೂಲಕ ಪಿಲ್ಲರ್ ಸ್ಥಾಪನೆ, ಸಿವಿಲ್ ಕಾಮಗಾರಿಗೆ ಸ್ವಚ್ಛತೆ, ಇನ್ನಿತರ ಕೆಲಸಗಳು ಅತೀ ವೇಗದಲ್ಲಿ ನಡೆಯುತ್ತಿದೆ.

Bengaluru Namma Metro Blue Line Pocket Track Work Begins in Kempapura See More

ನಾಗವಾರ ಮತ್ತು ಹೆಬ್ಬಾಳ ಮಧ್ಯೆ ಈ ಕೆಂಪಾಪುರದ ಕಡೆ ನೀಲಿ ಮಾರ್ಗದ ಕಾಮಗಾರಿ ಶುರುವಾಗಿದೆ. ಒಟ್ಟು 58.19 ಕಿಲೋ ಮೀಟರ್ ಉದ್ದವಿದೆ. ಒಟ್ಟು 29 ಮೆಟ್ರೋ ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ. ಇತರ ಮಾರ್ಗಗಳ ಪೈಕಿ ಅತೀ ವೇಗದಲ್ಲಿ ಕಾಮಗಾರಿ ನಡೆಯುತ್ತಿರುವ ಮಾರ್ಗ ಇದಾಗಿದೆ. ಇದು 2026ರ ಜೂನ್ ಹೊತ್ತಿಗೆ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಗಳು ಇವೆ.

ಎರಡು ನಿಲ್ದಾಣ ಕೈ ಬಿಟ್ಟ BMRCL

ಚಿಕ್ಕಜಾಲ ನಿಲ್ದಾಣಕ್ಕೆ 130 ಕೋಟಿ ಹಾಗೂ ಬೆಟ್ಟಹಲಸೂರು ಮೆಟ್ರೋ ನಿಲ್ದಾಣಕ್ಕೆ 140 ಕೋಟಿ ರೂಪಾಯಿ ಬೇಕಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಕಾರಣದಿಂದಲೇ ಎರಡು ನಿಲ್ದಾಣಗಳ ನಿರ್ಮಾಣದಿಂದ ನಮ್ಮ ಮೆಟ್ರೋ ಹಿಂದೇ ಸರಿದಿದೆ.

ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ

ಸಿಲ್‌ಬೋರ್ಡ್‌ನಿಂದ ಕೆಐಎ ವರೆಗೆ ಇರುವ ನೀಲಿ ಮಾರ್ಗದಲ್ಲಿ ಮೂರು ಇಂಟರ್‌ಚೇಂಜ್ ನಿಲ್ದಾಣಗಳು ಬರಲಿವೆ. ಸಿಲ್ಕಬೋರ್ಡ್ (ಹಳದಿ ಮಾರ್ಗ), ಕೆ.ಆರ್‌.ಪುರ (ನೇರಳೆ ಮಾರ್ಗ) ಹಾಗೂ ನಾಗವಾರ ನಿಲ್ದಾಣಗಳು (ಗುಲಾಬಿ ಮಾರ್ಗ) ಇಂಟರ್‌ಚೇಂಜ್ ನಿಲ್ದಾಣಗಳಾಗಲಿವೆ.

ಮಾರ್ಗ ನಿರ್ಮಾಣಕ್ಕಾಗಿ 41ಮರಗಳಿಗೆ ಕೊಡಲಿ

ಇಬ್ಬಲೂರು, ಎಚ್‌ಎಸ್‌ಆರ್ ಬಡಾವಣೆ ಮೆಟ್ರೋ ನಿಲ್ದಾಣಗಳ ಮಧ್ಯೆ ಅಡಚಣೆಯಾಗಿದ್ದ ಮರಗಳನ್ನು ತೆರವುಗೊಳಿಸಲು ಇತ್ತೀಚೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅನುಮತಿ ಪಡೆದುಕೊಂಡಿದೆ. ಈ ಕುರಿತು ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಪೀಠ 41ಮರ ಕಡಿಯಲು ಹಾಗೂ 20 ಮರಗಳನ್ನು ಸ್ಥಳಾಂತರಿಸಬೇಕು. ಅವುಗಳ ಬೆಳವಣಿಗೆ ಕುರಿತು ಆಗಾಗ ಮಾಹಿತಿ ನೀಡುವಂತೆ ಸೂಚಿಸಿ ಅನುಮತಿ ನೀಡಿ ಆದೇಶಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+