Bengaluru-Mysuru Expressway: ಸಿಎಂ ಪತ್ರ ಬೆನ್ನಲ್ಲೆ ₹688 ಕೋಟಿ ಸುರಕ್ಷತಾ ಕಾಮಗಾರಿ ಅನುಷ್ಠಾನಕ್ಕೆ ಟೆಂಡರ್: NHAI
ಬೆಂಗಳೂರು, ಜನವರಿ 11: ಪ್ರಧಾನಿ ಮೋದಿಯವರಿಂದ ಕೆಳದ ವರ್ಷ ಮಾರ್ಚ್‌ನಲ್ಲಿ ಉದ್ಘಾಟನೆಗೊಂಡಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru Expressway) ನಲ್ಲಿ ಹೆಚ್ಚುವರಿ ಕಾಮಗಾರಿಗಳು ಶೀಘ್ರವೇ ನಡೆಯಲಿವೆ. ಈ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೆಂಡರ್ ಆಹ್ವಾನಿಸಿದೆ.
ರಾಜ್ಯದ ಎರಡು ಬೃಹತ್ ನಗರಗಳ ಮಧ್ಯೆ ಅತ್ಯುತ್ತಮ ಸಾರಿಗೆ ಸೇವೆಗೆ ಅನುಕೂಲವಾಗಿರುವ ಈ ಬೆಂಗಳೂರು-ಮೈಸೂರು ರಾಷ್ಟ್ರಿಯ ಹೆದ್ದಾರಿಯ (Banglore-Mysore Expressway) ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಟ್ಟು ಸುಮಾರು ₹688 ಕೋಟಿಗೆ ಒಂದಷ್ಟು ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಟೆಂಡರ್ ಪ್ರಾಧಿಕಾರವು ಟೆಂಡರ್ ಕರೆದಿದೆ.

ಹೆದ್ದಾರಿಯಲ್ಲಿ ವಿವಿಧ ಕಾಮಗಾರಿ
ಕೇಂದ್ರ ಸರ್ಕಾರವು ಹೈಬ್ರಿಡ್ ವರ್ಷಾಶನ ಮಾಡ್ಯುಂಡರ್ NH(O) ನಲ್ಲಿ ಈ ಹೆದ್ದಾರಿ ಆರು ಪಥದಲ್ಲಿ (ಲೇನ್) ಪ್ರವೇಶ-ನಿಯಂತ್ರಿತ ವಿಭಾಗದಲ್ಲಿ ರಸ್ತೆ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಿದೆ. ಈ ಸಂಬಂಧ ಹೆದ್ದಾರಿಯಲ್ಲಿ ಇನ್ನೊಂದಿಷ್ಟು ಕಾಮಗಾರಿಗಳ ಅಭಿವೃದ್ಧಿ ಮಾಡಲು ಮುಂದಾಗಿದೆ. ಅದರ ನಿರ್ವಹಣೆಯನ್ನು ಪ್ರಾಧಿಕಾರ ನೋಡಿಕೊಳ್ಳಲಿದೆ ಎಂದು ಜನವರಿ 5 ರಂದು ನೀಡಿದ ಟೆಂಡರ್ ದಾಖಲಾತಿಯಲ್ಲಿ ವಿವರಿಸಲಾಗಿದೆ.
ಎಕ್ಸ್‌ಪ್ರೆಸ್‌ವೇಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಒಟ್ಟು ₹688 ಕೋಟಿ ಬಿಡುಗಡೆ ಮಾಡಿದೆ ಎಂದು ಇತ್ತೀಚೆಗೆ ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದರು. ಈ ಹೆದ್ದಾರಿ ಉದ್ಘಾಟನೆ ಬಳಿಕ ಕಳೆದ ವರ್ಷ ಜುಲೈ ತಿಂಗಳಲ್ಲಿ ಹೆದ್ದಾರಿ ಸುರಕ್ಷತಾ ತಪಾಸಣೆ ನಡೆಸಲು NHAI ಮೂರು ಸದಸ್ಯರ ತಜ್ಞರ ಸಮಿತಿ ರಚನೆ ಮಾಡಿತ್ತು.
ಹಲವು ಕ್ರಮಕ್ಕೆ ತಜ್ಞರ ಸೂಚನೆ ಸಾಧ್ಯತೆ
ಈ ಸಮಿತಿಯು ವಾಹನ ಚಾಲಕರ ಸುರಕ್ಷತೆ ಮತ್ತು ಸ್ಪೀಡ್ ಕ್ಯಾಮೆರಾಗಳ ಅಳವಡಿಕೆ ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಸೂಚಿಸುವ ಸಾಧ್ಯತೆ ಇದೆ. ಅಲ್ಲದೇ ಅಪಘಾತ ಹೆಚ್ಚಾಗುತ್ತಿದ್ದಂತೆ ಅದರ ನಿಯಂತ್ರಣಕ್ಕಾಗಿ ನಿಧಾನವಾಗಿ ಚಲಿಸುವ ಬೈಕ್, ತ್ರಿಚಕ್ರ ದಂತಹ ವಾಹನಗಳಿಗೆ ಬ್ರೇಕ್ ಹಾಕಿದರು. ಪ್ರವೇಶ ನಿರಾಕರಿಸಿದರು. ಆದಾಗಿಯೂ ಅಪಘಾತಗಳು ನಡೆಯುತ್ತಲೇ ಬಂದವು. ಬಳಿಕ ಪೊಲೀಸರು ಈ ಬಗ್ಗೆ ಅಧ್ಯಯನ ನಡೆಸಿದರು.

ಅತಿವೇಗ ಮತ್ತು ಲೇನ್ ಶಿಸ್ತಿನ ಕೊರತೆಯು ಮಾರಣಾಂತಿಕ ಅಪಘಾತಗಳಿಗೆ ಮುಖ್ಯ ಕಾರಣಗಳೆಂದು ಅಧ್ಯಯನವು ಗುರುತಿಸಿದೆ. ಇದರಿಂದಾಗಿ ಪೊಲೀಸರು ಗರಿಷ್ಠ ವೇಗವನ್ನು ಗಂಟೆಗೆ 100 ಕಿಮೀಗೆ ಮಿತಿಗೊಳಿಸಿದರು. ನಂತರ ಒಂದಷ್ಟು ತಾಂತ್ರಿಕತೆಗಳನ್ನು ಹೆದ್ದಾರಿಯಲ್ಲಿ ಅಳವಡಿಸಿದ್ದರ ಪರಿಣಾಮ ಈಗ ಎಲ್ಲವು ಸುಗಮವಾಗಿದೆ.
BHAIಗೆ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ
ಪ್ರಧಾನಿ ಮೋದಿಯವರು ಹೆದ್ದಾರಿ ಉದ್ಘಾಟನೆ ಬಳಿಕ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರ ಕೋಪಕ್ಕೆ ಗುರಿ ಆಯಿತು. ಮಾರಣಾಂತಿಕ ಅಪಘಾತಗಳ ಏರಿಕೆ ಹಾಗೂ ಎಕ್ಸ್‌ಪ್ರೆಸ್ ಭಾಗಗಳೂ ಜಲಾವೃತಗೊಂಡಿದ್ದವು. ಇದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈನಲ್ಲಿ ಎಕ್ಸ್‌ಪ್ರೆಸ್‌ವೇ ಪರಿಶೀಲನೆ ನಡೆಸಿದರು.
ಈ ವೇಳೆ ರಸ್ತೆ ಸುರಕ್ಷತಾ ಕ್ರಮಗಳು ಸೇರಿದಂತೆ ಎಲ್ಲ ಕಾಮಗಾರಿ ಪೂರ್ಣಗೊಳಿಸಿಲ್ಲ ತರಾತುರಿಯಲ್ಲಿ ರಸ್ತೆ ಸಂಚಾರಕ್ಕೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಇದರ ಭಾಗವಾಗಿಯೇ ಪ್ರಾಧಿಕಾರ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆದಿದೆ.












Click it and Unblock the Notifications