Bengaluru-Mysuru Expressway: ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಸ್ಪೀಡ್‌ ಲಿಮಿಟ್‌- ಅಪಘಾತ ತಡೆಗೆ ಮತ್ತೊಂದು ನಿಯಮ

ಮೈಸೂರು, ಆಗಸ್ಟ್‌ 01: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಇಂದಿನಿಂದ ದ್ವಿಚಕ್ರ ವಾಹನಗಳು, ಆಟೋಗಳು, ಟ್ರ್ಯಾಕ್ಟರ್‌ಗಳು, ಮೋಟಾರು ರಹಿತ ವಾಹನಗಳು, ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು ಮತ್ತು ಎತ್ತಿನ ಗಾಡಿಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಆದೇಶ ಹೊರಡಿಸಿದೆ.

ಇದೇ ವೇಳೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಅಧಿಕಾರಿಗಳು ಅಪಘಾತಗಳನ್ನು ತಪ್ಪಿಸಲು ಹೊಸ ನಿಯಮವೊಂದನ್ನು ಜಾರಿಗೊಳಿಸಿದ್ದಾರೆ.

Bengaluru-Mysuru Expressway: Speed limit for KSRTC buses - another rule to prevent accidents

ಮೈಸೂರಿನಿಂದ ಬೆಂಗಳೂರಿಗೆ ನಿತ್ಯ ಸಾವಿರಾರು ಜನರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಪಘಾತ ತಪ್ಪಿಸಲು ಮೈಸೂರು ವಿಭಾಗದ ಅಧಿಕಾರಿಗಳು 118 ಕಿ.ಮೀ ವ್ಯಾಪ್ತಿಯಲ್ಲಿ ಬಸ್‌ಗಳಿಗೆ ಸ್ಪೀಡ್‌ ಲಿಮಿಟ್‌ ಅನ್ನು ವಿಧಿಸಿದ್ದಾರೆ. ಈಗ ಇರುವ ಸ್ಪೀಡ್‌ ಲಿಮಿಟ್‌ ಪ್ರಕಾರ, ಬಸ್‌ಗಳು ಗಂಟೆಗೆ 120 ಕಿಲೋಮೀಟರ್‌ಗೂ ಅಧಿಕ ವೇಗದಲ್ಲಿ ಸಂಚರಿಸಬಹುದು.

ಹೊಸ ನಿಯಮದ ಪ್ರಕಾರ, ಕೆಎಸ್‌ಆರ್‌ಟಿಸಿ ಬಸ್‌ಗಳು ಗಂಟೆಗೆ 100 ಕಿಲೋಮೀಟರ್‌ ವೇಗದಲ್ಲಿ ಸಂಚರಿಸಬೇಕೆಂದು ಆದೇಶ ಹೊರಡಿಸಲಾಗಿದೆ.

ಕೆಎಸ್‌ಆರ್‌ಟಿಸಿ ಅಳವಡಿಸಿಕೊಂಡ ಉಪಕ್ರಮಗಳ ಪ್ರಕಾರ, ವೇಗದ ವಾಹನಗಳಿಗಾಗಿ ಮೂರನೇ ಬಲ ಲೇನ್‌ ಬಿಟ್ಟು ಮೊದಲ ಅಥವಾ ಎರಡನೇ ಲೇನ್‌ನಲ್ಲಿ ವಾಹನಗಳನ್ನು ಓಡಿಸಲು ಬಸ್ ಚಾಲಕರಿಗೆ ನಿರ್ದೇಶನ ನೀಡಲಾಗಿದೆ.

Bengaluru-Mysuru Expressway: Speed limit for KSRTC buses - another rule to prevent accidents

ಮುಂಭಾಗದ ಮತ್ತೊಂದು ವಾಹನವನ್ನು ಹಿಂದಿಕ್ಕುವಾಗ ಚಾಲಕರು ಸರಿಯಾದ ಮಾರ್ಗವನ್ನು ಮಾತ್ರ ಬಳಸಬೇಕೆಂದು ಸೂಚಿಸಲಾಗಿದೆ.

ಲೇನ್ ಶಿಸ್ತು ಕಾಯ್ದುಕೊಳ್ಳುವುದರ ಹೊರತಾಗಿ, ಚಾಲಕರು ಸೈಡ್ ಮಿರರ್‌ಗಳನ್ನು ನೋಡುವಂತೆ ಸೂಚನೆ ನೀಡಲಾಗಿದೆ. ಲೇನ್ ಬದಲಾವಣೆಯ ಸಮಯದಲ್ಲಿ ಟರ್ನ್ ಇಂಡಿಕೇಟರ್‌ಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಆದೇಶಿಸಲಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 80 ಕಿಮೀ ವೇಗವನ್ನು ಕಾಯ್ದುಕೊಳ್ಳುವಂತೆ ನಿಯಮ ರೂಪಿಸಲಾಗಿದೆ.

ಎಡಿಜಿಪಿ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಅವರು ಇತ್ತೀಚೆಗೆ ಎಕ್ಸ್‌ಪ್ರೆಸ್‌ವೇಯನ್ನು ಪರಿಶೀಲನೆ ಮಾಡಿದ್ದಾರೆ. 25 ಅಪಘಾತ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಗ್ರಾಮಸ್ಥರು ಎಕ್ಸ್‌ಪ್ರೆಸ್‌ವೇ ದಾಟುವ ಸ್ಥಳಗಳಲ್ಲಿ 25 ಅಪಘಾತಗಳು ನಡೆದಿರುವುದನ್ನು ಅವರು ತಿಳಿದುಕೊಂಡಿದ್ದಾರೆ.

Bengaluru-Mysuru Expressway: Speed limit for KSRTC buses - another rule to prevent accidents

ಈ ಸ್ಥಳಗಳ ಬಳಿ ಸಂಚಾರಿಸುವಾಗ ಜಾಗರೂಕರಾಗಿರಲು ಚಾಲಕರಿಗೆ ತಿಳಿಸಲಾಗಿದೆ. ಮೈಸೂರು ವಿಭಾಗವು ಮೈಸೂರಿನಿಂದ ಬೆಂಗಳೂರಿಗೆ ದಿನಕ್ಕೆ 150 ಟ್ರಿಪ್‌ಗಳನ್ನು ಓಡಿಸುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಿ ಶ್ರೀನಿವಾಸ್ 'ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌'ಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+