Bengaluru- Mysuru Expressway: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾದ ಕಳ್ಳತನ; ತಡೆಗೆ ಹೈವೇ ಪೆಟ್ರೋಲಿಂಗ್
ಬಹುನಿರೀಕ್ಷಿತ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೇ ಕಾರಣಕ್ಕೆ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮುಂದೆ ಓದಿ.
ಬೆಂಗಳೂರು, ಫೆಬ್ರವರಿ. 02: ಮೈಸೂರು - ಬೆಂಗಳೂರಿನ ನಡುವೆ ಪ್ರಯಾಣದ ಸಮಯವನ್ನು ತಗ್ಗಿಸಲು, ಆರಾಮದಾಯಕ ಪ್ರಯಾಣದ ಅನುಭವವನ್ನು ಪಡೆಯಲು ಸಾವಿರಾರು ಮಂದಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಬಳಸುತ್ತಿದ್ದು, ಪ್ರಯಾಣಿಕರ ನೆಚ್ಚಿನ ದಾರಿಯಾಗಿದೆ. ಹಾಗೇಯೇ ಈ ಹೆದ್ದಾರಿಯನ್ನು ಕಳ್ಳರ ನೆಚ್ಚಿನ ತಾಣವಾಗಿಯು ಪರಿಣಮಿಸಿದೆ.
ಪ್ರತಿದಿನಿ ಸಾವಿರಾರು ಪ್ರಯಾಣಿಕರು 10 ಪಥದ ಬೆಂಗಳೂರು- ಮೈಸೂರು ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ (ಎನ್‌ಎಚ್-275)ಯನ್ನು ಸುಗಮ ಸಂಚಾರಕ್ಕಾಗಿ ಆಯ್ಕೆ ಮಾಡಿಕೊಂಡು ಹೆದ್ದಾರಿಯ ಪ್ರಯಾಣವನ್ನು ಸವಿಯುತ್ತಿದ್ದರೇ, ಇತ್ತ ಕಳ್ಳಕಾಕರು ಈ ಎಕ್ಸ್‌ಪ್ರೆಸ್‌ವೇಯಲ್ಲಿ ಅಳವಡಿಸಲಾಗಿರುವ ಲೋಹದ ವಸ್ತುಗಳು, ಸ್ಟೇನ್‌ಲೆಸ್ ಸ್ಟೀಲ್ ಬ್ಯಾರಿಕೇಡ್‌ಗಳು ಮತ್ತು ಲೋಹದ ನೀರಿನ ಪೈಪ್‌ಗಳನ್ನು ಕದಿಯುವಲ್ಲಿ ನಿರತರಾಗಿದ್ದಾರೆ.
ಈ ವಸ್ತುಗಳು ದಿನದಿಂದ ದಿನಕ್ಕೆ ಕಳ್ಳತನವಾಗುತ್ತಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ಕಳ್ಳರ ಕೈಚಳಕ ನೋಡಿ ತಬ್ಬಿಬ್ಬಾಗಿದ್ದಾರೆ.

ಕಂಬಗಳ ನಡುವಿನ ಬಾರ್‌ಗಳನ್ನೆ ಕದಿಯುವ ಕಳ್ಳರು
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಬಳಸಲಾಗಿರುವ ಉಕ್ಕಿನ ತಡೆಗೋಡೆಗಳು ಉತ್ತಮ ದರ್ಜೆಯ ಉಕ್ಕಿನಿಂದ ಮಾಡಲ್ಪಟ್ಟಿದೆ. ಹೀಗಾಗಿ ಕಳ್ಳರು ಅವುಗಳನ್ನು ಗುಜರಿಗಳಲ್ಲಿ ಮಾರಾಟ ಮಾಡಲು ಕತ್ತರಿ ಕಳ್ಳತನ ಮಾಡುತ್ತಿದ್ದಾರೆ. ಈಗ ಕಳ್ಳರು ವಿದ್ಯುತ್ ಕಂಬಗಳನ್ನೇ ಗುರಿಯಾಗಿಟ್ಟುಕೊಂಡು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಕಂಬಗಳ ನಡುವಿನ ಬಾರ್‌ಗಳನ್ನು ಕದಿಯುತ್ತಿದ್ದಾರೆ.
ಹೈವೇಯ ಬಿಡದಿ ಮತ್ತು ರಾಮನಗರದಲ್ಲಿ ಹಲವೆಡೆ ಸ್ಟೀಲ್ ಬ್ಯಾರಿಕೇಡ್‌ಗಳನ್ನು ಕಳ್ಳರು ಕದ್ದು ಹೊತ್ತುಕೊಂಡು ಹೋಗಿದ್ದಾರೆ. ಶ್ರೀರಂಗಪಟ್ಟಣ ಭಾಗದಲ್ಲಿ ವಿದ್ಯುತ್ ಕಂಬಗಳನ್ನು ಗುರಿಯಾಗಿಸಿ ಕಳ್ಳತನ ಎಸಗಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಳ್ಳರು
ಈ ಕಬ್ಬಿಣ ಮತ್ತು ಉಕ್ಕಿನ್ನು ಕಳ್ಳತನ ಮಾಡುತ್ತಿರುವವರು ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಮಾಡಿರುವ ಪ್ರಯತ್ನಗಳು ಮತ್ತು ವ್ಯಯ ಮಾಡಿರುವ ಹಣದ ಬಗ್ಗೆ ತಿಳಿಸುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಉತ್ತಮ ಗುಣಮಟ್ಟದ ಕಾಮಗಾರಿಗೆ ಅಪಖ್ಯಾತಿ ತರುತ್ತಿದ್ದಾರೆ. ಕತ್ತಲಲ್ಲಿ ಬಂದು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳ್ಳತನದಿಂದ ಉಂಟಾಗುವ ಅಪಾಯಯದ ಬಗ್ಗೆ ಕಳ್ಳರು ಯೋಚಿಸಿಲ್ಲ. ಇವುಗಳಿಂದಾಗುವ ಆಘಾತಕಾರಿ ಸಂಗತಿಯೆಂದರೆ, ಉದ್ದದ ಕಂಬಗಳ ಕೆಳಗಿನ ಅರ್ಧಭಾಗದಲ್ಲಿ ಅಡ್ಡಲಾಗಿ ಬೆಂಬಲಕ್ಕೆ ಹಾಕಿರುವ ಬಾರ್‌ಗಳನ್ನು ಕತ್ತರಿಸಿ ತೆಗೆಯುವುದರಿಂದ ಈ ದೊಡ್ಡ ದೊಡ್ಡ ಕಂಬಗಳು ದುರ್ಬಲಗೊಳ್ಳುತ್ತಿವೆ ಮತ್ತು ಗಾಳಿ ಬೀಸಿದಾಗ ತೂಗಾಡುತ್ತಿವೆ. ಹೀಗಾಗಿ ಕಾಲಕ್ರಮೇಣ ಇವು ದುರ್ಬಲಗೊಂಡು ರಸ್ತೆ ಮತ್ತು ಸರ್ವಿಸ್ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರ ಮೇಲೆ ಬೀಳುವ ಅಪಾಯವಿದೆ ಎಂದು ಆತಂಕ ಹೊರಹಾಕಿದ್ದಾರೆ.

ಲೋಹದ ಕಂಬಿಗಳನ್ನು ತೆಗೆದರೆ ಭಾರಿ ಅಪಾಯ!
ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಯಲ್ಲಿರುವ ಸರ್ವಿಸ್ ರಸ್ತೆಗಳಲ್ಲಿ ಹಲವೆಡೆ ವಿದ್ಯುತ್ ಕಂಬಗಳ ಆಧಾರವಾಗಿರುವ ಸೈಡ್‌ಬಾರ್‌ಗಳನ್ನು ತೆಗೆದುಹಾಕಲಾಗಿದೆ. ಸೈಡ್‌ಬಾರ್‌ಗಳು ಹಾಳಾಗಿದ್ದು, ಕಂಬಗಳು ಅಸ್ಥಿಪಂಜರಗಳಂತೆ ನಿಂತು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕಂಬಗಳನ್ನು 25 ಅಡಿ ಎತ್ತರದಲ್ಲಿ ಹಾಕಲಾಗಿದೆ ಮತ್ತು ಅಡ್ಡಲಾಗಿರುವ ಪೋಷಕ ಪಟ್ಟಿಗಳನ್ನು 12 ಅಡಿ ಎತ್ತರದವರೆಗೆ ತೆಗೆದುಹಾಕಲಾಗಿದೆ.
ಈ ಕಂಬಿಗಳನ್ನು ಮಿಶ್ರಲೋಹದಂತಹ ಲೋಹದಿಂದ ಮಾಡಲ್ಪಟ್ಟಿವೆ, ಆದರೆ ಅವುಗಳನ್ನು ಸುಲಭವಾಗಿ ತೆಗೆಯಬಹುದಾದ ನಟ್ ಮತ್ತು ಬೋಲ್ಟ್‌ಗಳಿಂದ ಸೇರಿಸಲಾಗಿದ್ದು, ಕಳ್ಳರು ಸ್ಕ್ರೂಗಳೂ, ಸುತ್ತಿಗೆಗಳನ್ನು ಬಳಸಿ ಸುಲಭವಾಗಿ ಇವುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಕಳ್ಳರನ್ನು ಹಿಡಿಯಲು ಎನ್‌ಎಚ್‌ಎಐ ರಸ್ತೆಯುದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಬಹುದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಳ್ಳತನ ತಡೆಯಲು ಹೈವೇ ಪೆಟ್ರೋಲಿಂಗ್ ವ್ಯವಸ್ಥೆ; ಪ್ರತಾಪ್ ಸಿಂಹ
ಕಳ್ಳತನದ ಪ್ರಕರಣಗಳಿಗೆ ಪ್ರತಿಕ್ರಿಯಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಇದೊಂದು ದುರಾದೃಷ್ಟಕರ ಬೆಳವಣಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
" ಸಾರ್ವಜನಿಕರ ಅನುಕೂಲಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತವೆ. ಆದರೆ, ಜನರಸುರಕ್ಷತೆಗೆ ಅಪಾಯವಿದೆ ಎಂದು ತಿಳಿಯದೆ ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವ ಕೆಲವು ಸಮಾಜವಿರೋಧಿಗಳು ನಮ್ಮ ನಡುವೆಯಿದ್ದಾರೆ. ಹೀಗಾಗಿ ನಾವು ಈ ಹೆದ್ದಾರಿಯಲ್ಲಿ ಹೈವೇ ಪೆಟ್ರೋಲಿಂಗ್ ವ್ಯವಸ್ಥೆ ಜಾರಿಗೆ ತರುತ್ತೇವೆ" ಎಂದಿದ್ದಾರೆ.
"ಈಗಾಗಲೇ, ಅಪಘಾತಗಳು ಮತ್ತು ಲೋಹದ ಬ್ಯಾರಿಕೇಡ್‌ಗಳು ಮತ್ತು ಇತರ ವಸ್ತುಗಳ ಕಳ್ಳತನವನ್ನು ನಿಯಂತ್ರಿಸಲು ಈ ಎಕ್ಸ್‌ಪ್ರೆಸ್‌ವೇಯಲ್ಲಿ ಇಂಟೆಲಿಜೆಂಟ್ ಹೈವೇ ಇನ್ಫರ್ಮೇಷನ್ ಮತ್ತು ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (IHI-TMS) ಅನ್ನು ಅಳವಡಿಸಲು ನಾವು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ. ಪ್ರಸ್ತಾವನೆಯು ಕಾರ್ಯರೂಪಕ್ಕೆ ಬಂದರೆ, ನಾವು ಪ್ರತಿ 500 ಮೀಟರ್‌ಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications