Bengaluru-Mysuru Expressway: ನೂತನ ಹೆದ್ದಾರಿಯಲ್ಲಿ 100 ಸಾವು ಎಂದ ಗೃಹ ಸಚಿವ, 132 ಸಾವು ಎಂದ ಬಿಜೆಪಿ ಶಾಸಕ ಸುರೇಶ್‌ ಕುಮಾರ

ಬೆಂಗಳೂರು, ಜುಲೈ 11: ಪ್ರಧಾನಿ ನರೇಂದ್ರ ಮೋದಿ ( PM Modi ) ಅವರಿಂದ ಉದ್ಘಾಟನೆಗೊಂಡಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ( Bengaluru-Mysuru Expressway ) ಅಪಘಾತಗಳು ಹೆಚ್ಚುತ್ತಲೇ ಇವೆ. ಈ ಸರಣಿ ಅಪಘಾತಗಳ ಕುರಿತು ಮಂಗಳವಾರ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.

ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಸುರೇಶ್‌ಕುಮಾರ್, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಘಟನೆಗಳನ್ನು ತಪ್ಪಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿದರು. ಇದಕ್ಕೆ ಲಿಖಿತ ಉತ್ತರ ನೀಡಿರುವ ಗೃಹ ಸಚಿವಾಲಯವು ಹೆದ್ದಾರಿಯಲ್ಲಿ 100 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.

Bengaluru-Mysuru Expressway: 100 dead, 335 injured on this road- What does Karnataka Govt Say?

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುರೇಶ್ ಕುಮಾರ್, ತಮ್ಮ ಅಂದಾಜಿನ ಪ್ರಕಾರ, ಈ ವರ್ಷದ ಮಾರ್ಚ್‌ನಿಂದ ( ಹೆದ್ದಾರಿ ಉದ್ಘಾಟನೆ ) ಜೂನ್‌ವರೆಗೆ 132 ಜನರು ಸಾವನ್ನಪ್ಪಿದ್ದಾರೆ. ಮೃತರ ಪೈಕಿ ರಾಮನಗರ ಜಿಲ್ಲೆಯಲ್ಲಿ 63, ಮಂಡ್ಯದಲ್ಲಿ 65 ಮತ್ತು ಮೈಸೂರಿನಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ, ರಸ್ತೆಯಲ್ಲಿ ಹಲವಾರು ಸಮಸ್ಯೆಗಳಿವೆ ಎಂದು ಒಪ್ಪಿಕೊಂಡರು.

'ಸರಿಯಾದ ಸೂಚನಾ ಫಲಕಗಳಿಲ್ಲ. ವಕ್ರರೇಖೆಗಳಿದ್ದರೂ ಅದಕ್ಕೆ ಸೂಚನಾ ಫಲಕಗಳಿಲ್ಲ. ಮಾರ್ಚ್ ತಿಂಗಳೊಂದರಲ್ಲೇ 20 ಮಂದಿ ಸಾವನ್ನಪ್ಪಿದ್ದು, 63 ಮಂದಿ ಗಾಯಗೊಂಡಿದ್ದಾರೆ' ಎಂದು ಹೇಳಿದರು.

ಏಪ್ರಿಲ್‌ನಲ್ಲಿ 23 ಜನರು ಸಾವನ್ನಪ್ಪಿದ್ದಾರೆ ಮತ್ತು 83 ಜನರು ಗಾಯಗೊಂಡಿದ್ದಾರೆ. ಮೇ ತಿಂಗಳಲ್ಲಿ 29 ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 93 ಮಂದಿ ಗಾಯಗೊಂಡಿದ್ದಾರೆ. ಜೂನ್‌ನಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ ಮತ್ತು 96 ಮಂದಿ ಗಾಯಗೊಂಡಿದ್ದಾರೆ ಎಂದು ಗೃಹ ಮಂತ್ರಿಗಳು ಹೇಳಿದರು.

Bengaluru-Mysuru Expressway: 100 dead, 335 injured on this road- What does Karnataka Govt Say?

ನಮ್ಮ ವರದಿಗಳ ಪ್ರಕಾರ, 100 ಜನರು ಸಾವನ್ನಪ್ಪಿದ್ದಾರೆ ಮತ್ತು 335 ಜನರು ಗಾಯಗೊಂಡಿದ್ದಾರೆ. ನಿಮ್ಮ ನಂಬರ್ ಚೆಕ್ ಮಾಡುತ್ತೇನೆ ಎಂದು ಪರಮೇಶ್ವರ್‌ ತಿಳಿಸಿದರು.

ಇದೇ ವೇಳೆ, ಗೃಹ ಸಚಿವರು ರಸ್ತೆಯಲ್ಲಿ ಅಪಘಾತಗಳನ್ನು ಕಡಿಮೆ ಮಾಡುವ ಕೆಲವು ಕ್ರಮಗಳನ್ನು ಪಟ್ಟಿ ಮಾಡಿದರು.

'ಅಪಘಾತಗಳನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ವೇಗವಾಗಿ ಚಲಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಪ್ರತಿ 30 ಕಿಲೋಮೀಟರ್‌ಗೆ ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಬೇಕಿದೆ' ಎಂದು ಹೇಳಿದರು.

ನಿಲುಗಡೆ ಮಾಡಬೇಕಾದ ಹೆದ್ದಾರಿಯಲ್ಲಿ ಕೆಲ ವಾಹನಗಳು ಅಕ್ರಮವಾಗಿ ನಿಲ್ಲುತ್ತಿವೆ. ಅಲ್ಲಿ ಸೂಕ್ತ ಸೂಚನಾ ಫಲಕ ಅಳವಡಿಸಲಾಗಿದೆ. ಟ್ರಕ್‌ಗಳು ಅದನ್ನು ಅನುಸರಿಸದ ಕಾರಣ ಲೇನ್ ಶಿಸ್ತು ದೊಡ್ಡ ಸಮಸ್ಯೆಯಾಗಿದೆ ಎಂದು ತಿಳಿಸಿದರು.

Bengaluru-Mysuru Expressway: 100 dead, 335 injured on this road- What does Karnataka Govt Say?

ಅದನ್ನು ಅನುಸರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಾದಚಾರಿಗಳು ಹೆದ್ದಾರಿ ದಾಟುವುದನ್ನು ತಡೆಯಲು ಕ್ರಮಕೈಗೊಳ್ಳುವಂತೆ ನಾವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (NHAI) ಕೇಳಿದ್ದೇವೆ. ನಿರ್ಗಮನ ಸ್ಥಳಗಳಲ್ಲಿ ಯಾವುದೇ ಬೀದಿ ದೀಪಗಳಿಲ್ಲ. ದೀಪಗಳನ್ನು ಅಳವಡಿಸುವಂತೆ ನಾವು NHAI ಗೆ ಮನವಿ ಮಾಡಿದ್ದೇವೆ ಎಂದು ಗೃಹ ಸಚಿವರು ಹೇಳಿದರು.

ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಅವರು ಎನ್‌ಎಚ್‌ಎಐನಿಂದ ಸುರಕ್ಷತಾ ಆಡಿಟ್ ವರದಿಯನ್ನು ಕೇಳಿದ್ದಾರೆ ಎಂದು ಪರಮೇಶ್ವರ್‌ ತಿಳಿಸಿದರು.

ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಮಧ್ಯಪ್ರವೇಶಿಸಿ, ಹೆದ್ದಾರಿಯಲ್ಲಿ ಮಳೆ ನೀರು ಸಂಗ್ರಹವಾದಾಗ ರಸ್ತೆಗಳು ಜಾರುತ್ತವೆ. ರಸ್ತೆಯ ಸಮರ್ಪಕ ನಿರ್ವಹಣೆಯೂ ಇಲ್ಲ ಎಂದು ದೂರಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಗೃಹ ಸಚಿವರು ಭರವಸೆ ನೀಡಿದರು.

ಕಳೆದ ತಿಂಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಅವರು ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಗೆ ಭೇಟಿ ನೀಡಿದ್ದರು. ಮಿತಿಮೀರಿದ ವೇಗದ ಮೂಲಕ ಕಾನೂನು ಉಲ್ಲಂಘಿಸುವವರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದರು. ಹೆದ್ದಾರಿಯಲ್ಲಿ ವೇಗದ ಮಿತಿ ಗಂಟೆಗೆ 100 ಕಿ.ಮೀ ಎಂದು ತಿಳಿಸಿದ್ದರು.

ನಿರ್ದೇಶನದ ಆಧಾರದ ಮೇಲೆ ರಾಮನಗರ ಪೊಲೀಸರು ಎಕ್ಸ್‌ಪ್ರೆಸ್‌ವೇಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+