• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆಪ್ಟೆಂಬರ್‌ ಮೊದಲ ವಾರ ಬೆಂಗಳೂರು-ಮೈಸೂರು ಹೈವೇ ಕಾಮಗಾರಿ ಶುರು

By Nayana
|

ಬೆಂಗಳೂರು, ಆಗಸ್ಟ್ 3: ಬಹುವರ್ಷಗಳಿಂದ ಕಾಗದದಲ್ಲೇ ಉಳಿದಿದ್ದ ಬೆಂಗಳೂರು-ಮೈಸೂರು ದಶಪಥ ರಸ್ತೆ ಕೊನೆಗೂ ಅನುಷ್ಠಾನಗೊಳ್ಳುವ ಭರವಸೆ ಮೂಡಿದೆ.

ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರು-ಮೈಶೂರು ದಶಪಥಗಳ ರಸ್ತೆ ನಿಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು-ಮೈಸೂರು ಷಟ್ಪಥ ರಸ್ತೆ ಕಾಮಗಾರಿ ಸೆಪ್ಟೆಂಬರ್‌ನಲ್ಲಿ ಆರಂಭ

ಈಗಾಗಲೇ ಶೇ.80ರಷ್ಟು ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ ಕಾಮಗಾರಿಗೆ ಚಾಲನೆ ನೀಡಲು ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದರು.

Bengaluru- Mysuru 10 lane highway work will resume by early September

ಈ ಮೊದಲು ಅಷ್ಟಪಥಗಳ ಹೆದ್ದಾರಿಯಾಗಿದ್ದ ಮೈಸೂರು ಬೆಂಗಳೂರು ರಸ್ತೆಯನ್ನು ಮಾರ್ಗಮಧ್ಯದ ಗ್ರಾಮಗಳು ಹಾಗೂ ಪಟ್ಟಣಗಳ ಜನರಿಗೆ ಅನುಕೂಲವಾಗುವಂತೆ ಹಾಗೂ ಸ್ಥಳೀಯ ನಾಗರಿಕರ ಒತ್ತಾಯದ ಮೇರೆಗೆ ಎರಡೂ ಬದಿಯಲ್ಲಿ ಸರ್ವೀಸ್‌ ರಸ್ತೆಗಳನ್ನೂ ಸಹಿತ ಸೇರ್ಪಡೆ ಮಾಡಿ ದಶಪಥಗಳ ರಸ್ತೆಯನ್ನಾಗಿ ಮಾರ್ಪಡಿಸುತ್ತಿದೆ.

ಇದರಿಂದ ಮುಂಬರುವ ಎರಡು ವರ್ಷಗಳಲ್ಲಿ ಕಾಮಗಾರಿ ಸರಾಗವಾಗಿ ಮುಗಿಯಲಿದೆ ಎಂದು ಸಚಿವ ರೇವಣ್ಣ ಸಮರ್ಥಸಿಕೊಂಡರು.

ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಟಾನ ಕಾರ್ಯ ಸಾಧ್ಯವಾಗುತ್ತಿಲ್ಲ ಎಂಬ ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಯೋಜನೆಯ ಅನುಷ್ಟಾನಕ್ಕೆ ರಾಜ್ಯದ ವತಿಯಿಂದ ಇರುವ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Most awaited Bengaluru- Mysuru 10 lane highway work will be resumed by first week of September and expected to complete within two years, said public works department minister H.D. Revanna on Friday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more