Namma Metro New Line: ಹೊಸ ಯೋಜನೆಗೆ ಬೇಕಿದೆ 830ಕ್ಕೂ ಹೆಚ್ಚು ಆಸ್ತಿಗಳ ಜಾಗ
ಬೆಂಗಳೂರು, ಡಿಸೆಂಬರ್ 24: ಬೆಂಗಳೂರು ನಮ್ಮ ಮೆಟ್ರೋ ಯೋಜನೆಗಳಲ್ಲಿ ಮಹತ್ವದ್ದಾಗಿರುವ ಹೆಬ್ಬಾಳ-ಸರ್ಜಾಪುರ ಲೈನ್ ಕಾಮಗಾರಿ ಆರಂಭಕ್ಕೆ ರಾಜ್ಯ ಸರ್ಕಾರ ಡಿಸೆಂಬರ್ 7ರಂದು ಅನುಮೋದನೆ ನೀಡಿದೆ. ಯೋಜನೆ ಕಾರ್ಯಗತಗೊಳಿಸಲು BRMCL ಸೂಕ್ತ ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ ನೂರಾರು ಎಕರೆ ಜಾಗ ಗುರುತಿಸಲಾಗಿದೆ. ಅದರಲ್ಲಿ ಖಾಸಗಿ ಜಾಗಗಳು ಇದ್ದು, ಯೋಜನೆ ಸಾಕಾರಕ್ಕೆ ಅವುಗಳು ಅಗತ್ಯವಿವೆ.
ನಮ್ಮ ಮೆಟ್ರೋ ಅಧಕಾರಿಗಳು ಗುರುತಿಸಿರುವ 160 ಎಕರೆ ಪ್ರದೇಶದಲ್ಲಿನ ಒಟ್ಟು 830ಕ್ಕೂ ಹೆಚ್ಚು ಆಸ್ತಿಗಳು ನೂತನ ಮಾರ್ಗ ನಿರ್ಮಾಣ, ನಿಲ್ದಾಣ ನಿರ್ಮಿಸಲು ಅಗತ್ಯವಿದೆ. ಕೆಲವೆಡೆ ದೊಡ್ಡ ದೊಡ್ಡ ಆಸ್ತಿಗಳಿದ್ದು, ಅವು ಖಾಸಗಿ ವ್ಯಕ್ತಗಳಿಗೆ ಸೇರಿವೆ. ಹೆಬ್ಬಾಳ ಕೆರೆಯ ಪಕ್ಕದಲ್ಲಿ ಒಟ್ಟು ಸುಮಾರು 45 ಎಕರೆ ಜಾಗವನ್ನು ಬಿಎಂಆರ್‌ಸಿಎಲ್ ಈಗಾಗಲೇ ಗುರುತಿಸಿದೆ ಎಂದು 'ಡಿಎಚ್' ವರದಿ ಮಾಡಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರಿದ ಜಾಗ ಬಿಎಂಆರ್‌ಸಿಎಲ್‌ಗೆ ಬಿಟ್ಟುಕೊಡುವಂತೆ ಸಾಕಷ್ಟು ಮನವಿ, ಒತ್ತಾಯ ಕೇಳಿ ಬಂದಿವೆ. ಅದರ ನಡುವೆ ಯೋಜನೆಗೆ ಸರ್ಕಾರವೇ ಒಪ್ಪಿಗೆ ನೀಡಿದ್ದರಿಂದ ಜಾಗ ಸಮಸ್ಯೆ ಆಗುವುದಿಲ್ಲ ಎನ್ನಲಾಗಿದೆ. ಆದರೆ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ 830 ಎಕರೆ ಆಸ್ತಿಗಳು ಈ ಮಾರ್ಗ ನಿರ್ಮಾಣಕ್ಕೆ ಬೇಕಿದೆ. ಈ ಬಗ್ಗೆ ನಮ್ಮ ಮೆಟ್ರೋ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.
28000 ಕೋಟಿ ರೂ, 28 ಮೆಟ್ರೋ ನಿಲ್ದಾಣಗಳು
ಹೆಬ್ಬಾಳ-ಸರ್ಜಾರಪುರ ಮಾರ್ಗವು 36.5 ಕೀ.ಮೀ ಇದ್ದು, ಮೆಟ್ರೋ ಯೋಜನೆ ಮೂರನೇ ಹಂತದ ಭಾಗವಾಗಿದೆ. ಇದರಲ್ಲಿ ಒಟ್ಟು 28 ನಿಲ್ದಾಣಗಳು ನಿರ್ಮಾಗೊಳ್ಳಲಿವೆ. ಅದರಲ್ಲಿ ಎತ್ತರಿಸಿದ (22.14ಕಿ.ಮೀ) ಮಾರ್ಗದಲ್ಲಿ 17 ನಿಲ್ದಾಣ ಹಾಗೂ ಸುರಂಗ (14.45 ಕಿ.ಮೀ.) ಮಾರ್ಗದಲ್ಲಿ 11 ನಿಲ್ದಾಣಗಳು ತಲೆಎತ್ತಲಿವೆ. ಯೋಜನೆಯ ವೆಚ್ಚ ಒಟ್ಟು 28000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಇದೆಲ್ಲ ಯೋಜನೆಗಳು ಅಂದುಕೊಂಡಂತೆ ನೆರವೇರಲು ಮೊದಲು ಗುರುತಿಸಿದ ಭೂಮಿ ಸ್ವಾಧಿನವಾಗಬೇಕು. ಅದರ ಆರಂಭಿಕ ಪ್ರಕ್ರಿಯೆ ಶುರುವಾಗಿವೆ. ಸುಮಾರು 482 ಕಟ್ಟಡಗಳು ಮಾರ್ಗದಲ್ಲಿ ಇವೆ. ಅದರಲ್ಲಿ 314 ವಸತಿ, 37 ವಾಣಿಜ್ಯ ಮತ್ತು 63 ಕೈಗಾರಿಕಾ ಆಸ್ತಿಗಳಿವೆ ಎಂದು BMRCL ಗುರುತಿಸಿದೆ.
ಹೆಬ್ಬಾಳದಲ್ಲಿ ಬಹು ಸಾರಿಗೆ ಹಬ್
ಬೆಂಗಳೂರಿನ ಹೃದಯಭಾಗದಿಂದ ಅಂದರೆ ಮೇಕ್ರಿ ವೃತ್ತ, ಕೆ.ಆರ್. ವೃತ್ತ, ಗಾಲ್ಫ್ ಕೋರ್ಸ್, ಡೈರಿ ವೃತ್ತ, ಕೋರಮಂಗಲ, ಸರ್ಜಾಪುರ ಹೀಗೆ ಮುಖ್ಯ ಬಡಾವಣೆಗಳ ಹಾದು ಹೋಗುತ್ತದೆ. ಈ ಸರ್ಜಾಪುರ ಮೆಟ್ರೋ ಮಾರ್ಗವು ನಿರ್ಮಾಣಗೊಳ್ಳುತ್ತಿರುವ ನೀಲಿ ಮಾರ್ಗವನ್ನು ಸಂಧಿಸಲಿದೆ.
ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್‌ಸಿಎಲ್ ಸರ್ಜಾಪುರದಲ್ಲಿ ಸ್ಟೇಬ್ಲಿಂಗ್ ಡಿಪೋ ಹಾಗೂ ಮೆಟ್ರೋ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆಂದೇ ಒಟ್ಟು 55 ಎಕರೆ ಜಾಗ ಗುರುತಿಸಿದೆ. ಹೆಬ್ಬಾಳವು ಬಹು ಸಾರಿಗೆ ಕೇಂದ್ರವಾಗಲಿದೆ. ಇಲ್ಲಿ ಬಿಎಂಟಿಸಿ ನಿಲ್ದಾಣ, ಮೆಟ್ರೋ ನಿಲ್ದಾಣ ಸೇರಿದಂತೆ ಬಹು ಸಾರಿಗೆ ಮೂಲ ಸೌಕರ್ಯ ನಿರ್ಮಾಣಗೊಳ್ಳಲಿವೆ. ಅದಕ್ಕಾಗಿ ಅಧಿಕಾರಿಗಳು 45 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಬಾಕಿ ಇದೆ.
ಈ ಮಾರ್ಗದ ಇಬ್ಲೂರಿನಲ್ಲಿ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣ ಬರಲಿದೆ. ಒಟ್ಟಾರೆ ರಾಜ್ಯ ಸರ್ಕಾರವು ಬಿಎಂಆರ್‌ಸಿಎಲ್‌ಗೆ ಪೂರ್ವ-ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಲು ಹಾಗೂ ಭೂಮಿ ಸ್ವಾಧೀನಕ್ಕೆ ಅನುಮತಿಸಿದೆ. ಬಿಎಂಆರ್‌ಸಿಎಲ್ ಮತ್ತ ಸರ್ಕಾರದ ಮಧ್ಯೆ ಔಪಚಾರಿಕ ಸಂವಹನ ನಡೆಯುವುದು ಬಾಕಿ ಇದೆ.












Click it and Unblock the Notifications