Namma Metro Pink Line: ಈ ಮಾರ್ಗಕ್ಕೆ 20 ಮೆಟ್ರೋ ಪೂರೈಕೆ, BEMLನಿಂದ ಮಹತ್ವದ ಅಪ್ಡೇಟ್ಸ್
ಬೆಂಗಳೂರು, ಜೂನ್ 25: ಬೆಂಗಳೂರು ಪ್ರಯಾಣಿಕರಿಗೆ ನಮ್ಮ ಮೆಟ್ರೋ ರೈಲು ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದೆ. ಹೊಸ ಮಾರ್ಗಗಳ ಕಾಮಗಾರಿ ಬರದಿಂದ ಸಾಗಿದ್ದು, ಮುಂದಿನ ವರ್ಷ ಪೂರ್ಣಗೊಳ್ಳಲಿವೆ. ಈ ಪೈಕಿ ನೀಲಿ ಮಾರ್ಗ (Namma Metro Blue Line) ಹಾಗೂ ಗುಲಾಬಿ ಮಾರ್ಗದಲ್ಲಿ (Namma Metro Pink Line) 7 ಕಿಲೋ ಮೀಟರ್ ಗುಲಾಬಿ ಮಾರ್ಗ ಕೆಲಸ ಶೇಕಡಾ 100ರಷ್ಟು ಮುಗಿದಿದೆ. ಈ ಮಾರ್ಗಕ್ಕೆ ಸಕಾಲದಲ್ಲಿ ಅಗತ್ಯ ಮೆಟ್ರೋ ಬೋಗಿಗಳನ್ನು ಒದಗಿಸುವುದಾಗಿ BEML ಭರವಸೆ ನೀಡಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಭಾರತ್ ಅರ್ಥ್‌ಮೂವರ್ಸ್ ಲಿಮಿಟೆಡ್ (BEML) ಒಪ್ಪಂದ ಮಾಡಿಕೊಂಡಿವೆ. ಮೊದಲು 3000 ಕೋಟಿ ರೂಪಾಯಿಗೂ ಅಧಿಕ ಅಂದಾಜು ವೆಚ್ಚದ ಒಪ್ಪಂದ ನಂತರ ಹೆಚ್ಚುವರಿಯಾಗಿ 405 ಕೋಟಿ ರೂಪಾಯಿ ವೆಚ್ಚದ ಹೆಚ್ಚುವರಿ ಒಪ್ಪಂದ ಮಾಡಿಕೊಂಡಿತು. 318 ಬೋಗಿಗಳು (52 ರೈಲುಗಳ) ಜೊತೆಗೆ ಹೆಚ್ಚುವರಿಯಾಗಿ 42 ಬೋಗಿಗಳನ್ನು ಒದಗಿಸುವ ಒಪ್ಪಂದ ಇವಾಗಿವೆ.

ಮಾರ್ಚ್‌ಗೆ 20 ಬೋಗಿಗಳ ಪೂರೈಕೆ
ನಮ್ಮ ಮೆಟ್ರೋ ಕಾಳೇನ ಅಗ್ರಹಾರದಿಂದ -ನಾಗವಾರ (21km) ಗುಲಾಬಿ ಮಾರ್ಗದಲ್ಲಿ ಏಳು ಕಿಲೋ ಮೀಟರ್ ಎತ್ತರಿಸಿದ ಮಾರ್ಗ (ಕಾಳೇನ ಅಗ್ರಹಾರ-ತಾವರೆಕೆರೆ) ನಿರ್ಮಾಣ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಮೊದಲು ರೈಲು ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಒಪ್ಪಂದಂತೆ ಸಕಾಲಕ್ಕೆ BEML 20 ಬೋಗಿಗಳನ್ನು ಪೂರೈಕೆ ಮಾಡಲಿದೆ. ಈ ಬೋಗಿಗಳು ಪೂರ್ತಿ ಗುಲಾಬಿ ಮಾರ್ಗಕ್ಕೆ ಬಳಕೆ ಆಗಲಿವೆ.
ಇನ್ನೂ ಗುಲಾಬಿ ಮಾರ್ಗದಲ್ಲಿ ಬಾಕಿ ಇರುವ 13.70 ಕಿಲೋ ಮೀಟರ್ ಮಾರ್ಗದಲ್ಲಿ ಸುರಂಗ ಕಾಮಗಾರಿ ನಡೆದಿದೆ. ಭೂಗತ ಕಾಮಗಾರಿ ಹಿನ್ನೆಲೆ ಕೆಲಸ ತಡವಾಗಿದೆ. ಮುಂದಿನ ವರ್ಷ ಗುಲಾಬಿ ಮಾರ್ಗ ಪೂರ್ಣಗೊಳ್ಳಲಿದೆ. 2026 ಮಾರ್ಚ್ ಗೆ 20 ಮೆಟ್ರೋ ಬೋಗಿಗಳು ಇದೇ ಮಾರ್ಗಕ್ಕೆ ಪೂರೈಕೆ ಮಾಡಲಾಗುವುದು ಎಂದು BEML ಭರವಸೆ ನೀಡಿದೆ.
2026ರಲ್ಲಿ 2 ಮೆಟ್ರೋ ಮಾರ್ಗಗಳು ಓಪನ್
ಮೆಟ್ರೋ ಗುಲಾಬಿ ಮಾರ್ಗಕ್ಕೆ (Namma Metro Pink Line) ಒಟ್ಟು 16 ರೈಲುಗಳು, ಉಳಿದವುಗಳು ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ದೇವನಹಳ್ಳಿ ಏರ್‌ಪೋರ್ಟ್ ಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ (Namma Metro Blue Line) ನಿಯೋಜಿಸಲಾಗುವುದು. ಈ ಎರಡು ಮಾರ್ಗಗಳ ಕಾಮಗಾರಿಗಳನ್ನು 2026ರಲ್ಲಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಬೋಗಿ ಪೂರೈಕೆ ಆದರೆ ಅಂದುಕೊಂಡಂತೆ ಎರಡು ಹೊಸ ಮಾರ್ಗಗಳು ಸಾರ್ವಜನಿಕರಿಗೆ ಮುಕ್ತಗೊಳ್ಳುವುದು ಖಚಿತವಾಗುತ್ತದೆ.
ಆರ್‌ವಿ.ರಸ್ತೆ-ಬೊಮ್ಮಸಂದ್ರ 18 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗ (ಎಲೆಕ್ಟ್ರಾನಿಕ ಸಿಟಿ ಮಾರ್ಗ)ದಲ್ಲಿ ಸದ್ಯಕ್ಕೆ ಮೆಟ್ರೋ ರೈಲು ಕಾರ್ಯಾಚರಣೆ ಅನುಮಾನ ಎನ್ನಲಾಗಿದೆ. ಕನಿಷ್ಠ ಇನ್ನೂ ಎರಡು ತಿಂಗಳಾದರೂ ಹಿಡಿಯಬಹುದು ಎನ್ನಲಾಗುತ್ತಿದೆ. ಕೊಲ್ಕತ್ತಾದಿಂದ ಈವರೆಗೆ ಮೂರು ಡ್ರೈವರ್‌ಲೆಸ್ ಮೆಟ್ರೋ ರೈಲುಗಳು ಆಗಮಿಸಿವೆ. ಈ ಮಾರ್ಗದಲ್ಲಿ ರೈಲು ವಾಣಿಜ್ಯ ಸಂಚಾರಕ್ಕೆ ಕನಿಷ್ಠ ಎಂಟು ರೈಲುಗಳಾದರೂ ಬರಬೇಕಿದೆ. ಜೂನ್ ಅಂತ್ಯಕ್ಕೆ ಹಳದಿ ಮಾರ್ಗ ಕಾರ್ಯಾಚರಣೆ ಆಗದೇ ಮುಂದೂಡಿಕೆ ಆಗಿದೆ.












Click it and Unblock the Notifications