Namma Metro: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ನ್ಯೂಸ್, ಅ.17ರಂದು ಮಧ್ಯರಾತ್ರಿಯೂ ರೈಲು ಸಂಚಾರ

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ನಮ್ಮ ಮೆಟ್ರೋ ಅಧಿಕಾರಿಗಳು ಗುಡ್‌ನ್ಯೂಸ್ ನೀಡಿದ್ದಾರೆ. ವೆಸ್ಟ್‌ ಇಂಡೀಸ್ ವಿರುದ್ಧ ನೀರ್ಣಾಯಕ ಐದನೇ ಹಾಗೂ ಅಂತಿನ T20 ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ಅಕ್ಟೋಬರ್ 17ರಂದು ಶನಿವಾರ ನಡೆಯಲಿದೆ. ಈ ಸಂಬಂಧ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲಾಗಿದ್ದು, ಖಾಸಗಿ ವಾಹನ ಬದಲಾಗಿ ಮೆಟ್ರೋ ಸಾರಿಗೆ ಬಳಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.

ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ನಡೆಯಲಿರುವ T20 ಕ್ರಿಕೆಟ್ ಪಂದ್ಯಕಾಗಿ, ಬೆಂಗಳೂರು ನಮ್ಮ ಮೆಟ್ರೋ ತನ್ನ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣಕ್ಕೆ ಮೆಟ್ರೋ ಸೇವೆಗಳನ್ನು ವಿಸ್ತರಿಸಿದೆ. ಅಂದು ನಗರದ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು ರಾತ್ರಿ 11:00 ಗಂಟೆಗೆ ಬದಲಾಗಿ ಮಾರನೇ ದಿನ (ಮಧ್ಯರಾತ್ರಿ) ಬೆಳಗಿನ 01:15 ಗಂಟೆಗೆ ಹೊರಡಲಿವೆ.

Bengaluru Metro Extends Services

ಕೊನೆ ರೈಲುಗಳ ಸಂಚಾರ ಸಮಯ, ಟರ್ಮಿನಲ್

* ವೈಟ್‌ ಫಿಲ್ಡ್ (ಕಾಡುಗೋಡಿ)ಯಿಂದ ಮಧ್ಯ ರಾತ್ರಿ 12:00 ಗಂಟೆಗೆ

* ಸಿಲ್ಕ್ ಇನ್ಸ್ಟಿಟ್ಯೂಟ್ ಮತ್ತು ಮಾದಾವರ ನಿಲ್ದಾಣದಿಂದ ಮರುದಿನ ಮುಂಜಾನೆ 12:15 ಗಂಟೆ

* ಬೊಮ್ಮಸಂದ್ರ ಮಧ್ಯ ರಾತ್ರಿ 12:00 ಗಂಟೆಗೆ ಮತ್ತು ಆರ್ ವಿ ರಸ್ತೆ ಮರುದಿನ ಮುಂಜಾನೆ (ತಡರಾತ್ರಿ) 01:30 ಗಂಟೆಗೆ ಕೊನೆಯ ಮೆಟ್ರೋ ರೈಲುಗಳ ಹೊರಡುತ್ತವೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಹೊರಡುವ ಕೊನೆಯ ರೈಲು ಮರುದಿನ ಮುಂಜಾನೆ 1:00 ಗಂಟೆಗೆ ಹೊರಡುತ್ತದೆ. ಯಾವುದೇ ಅಡಚರಣೆ, ದಟ್ಟಣೆಗೆ ಅವಕಾಶ ನೀಡಿದೆ ಮೆಟ್ರೋ ಪ್ರಯಾಣ ಸುಗಮಗೊಳಿಸಲು, ಎರಡು-ಮಾರ್ಗ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ QR ಕೋಡ್ ಅನ್ನು ಡಿಜಿಟಲ್ T-20 ಪಂದ್ಯದ ಟಿಕೆಟ್‌ಗಳಲ್ಲಿ ಅಳವಡಿಸಲಾಗಿದೆ. ಕ್ರೀಡಾಂಗಣದಲ್ಲಿ ತಮ್ಮ ಪ್ರವೇಶ/ನಿರ್ಗಮನ ಗೇಟ್‌ಗಳ ಆಧಾರದ ಮೇಲೆ ನಿಗದಿತ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ BMRCL ಅಧಿಕಾರಿಗಳು ಕೋರಿದ್ದಾರೆ.

ಕಬ್ಬನ್ ಪಾರ್ಕ್ ಮೆಟ್ರೋ ಪ್ರಯಾಣಿಕರ ಗಮನಕ್ಕೆ

ಕಬ್ಬನ್ ರಸ್ತೆ ಮೂಲಕ ಇರುವ ಕ್ರೀಡಾಂಗಣ ಪ್ರವೇಶ ಗೇಟ್‌ಗಳನ್ನು ವೀಕ್ಷಿಸಲು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸುವ ಸಲಹೆಗಳು, ಮತ್ತು ಲಿಂಕ್ ರಸ್ತೆ ಮೂಲಕ ಇರುವ ಪ್ರವೇಶ ಗೇಟ್‌ಗಳನ್ನು ವೀಕ್ಷಿಸಲು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚನೆ ನೀಡಲಾಗಿದೆ.

ರಾತ್ರಿ ಸಂಚಾರ, ನಿಲ್ದಾಣಗಳ ಬಳಕೆ ವೇಳೆ ಯಾವುದೇ ಘಟನೆಗಳು / ಅಹಿತಕರ ಘಟನೆಗಳನ್ನು ತಡೆಗಟ್ಟಲು ಪ್ರಯಾಣಿಕರ ಸುರಕ್ಷತೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ನಿಲ್ದಾಣದ ಪ್ರವೇಶ ದ್ವಾರಗಳನ್ನು ನಿಯಂತ್ರಿಸುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಹಕ್ಕನ್ನು BMRCL ಹೊಂದಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+