Bengaluru Traffic: ಬೆಂಗಳೂರು ಟ್ರಾಫಿಕ್‌ನಿಂದ ಪಾರಾಗಲು ಬಂತು ಹೊಸ ಆ್ಯಪ್‌

ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡುವ ವಾಹನ ಸವಾರರಿಗೆ ನೆಮ್ಮದಿಯ ಸುದ್ದಿ ಇಲ್ಲಿದೆ. ಮುಂದೆ ಟ್ರಾಫಿಕ್‌ ಇರುತ್ತೋ ಇಲ್ಲವೋ ಎಂದು ಗೊತ್ತಿಲ್ಲದೆ ಬಂದು ರಸ್ತೆಗಳಲ್ಲಿ ಸಿಲುಕಿಕೊಳ್ಳುತ್ತಿದ್ದವರು ಇನ್ನು ಮುಂದೆ ಮುಂಜಾಗ್ರತೆ ವಹಿಸಿ, ನಿಮ್ಮ ರೂಟ್‌ ಚೇಂಜ್‌ ಮಾಡಬಹುದು. ಸಿಗ್ನಲ್‌ ಎಷ್ಟು ಹೊತ್ತಿಗೆ ಬಿಡುತ್ತೆ ಎಂದು ಮೊದಲೇ ತಿಳಿದುಕೊಳ್ಳಬಹುದು. ಇಂತಹ ವ್ಯವಸ್ಥೆ ನಿಮ್ಮ ಅಂಗೈಯಲ್ಲೇ ಸಿಗಲಿದೆ. ಇದಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮ್ಯಾಪಲ್ಸ್ ಆ್ಯಪ್ (Mappls app) ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್, ಕೌಂಟ್​ಡೌನ್​​​ನ ಲೈವ್ ಮಾಹಿತಿ ನೀಡಲಿದೆ.

ಹೌದು, ನ್ಯಾವಿಗೇಷನ್ ಪ್ಲಾಟ್‌ಫಾರ್ಮ್‌ನಲ್ಲಿ ನೈಜ-ಸಮಯದ ಸಿಗ್ನಲ್ ಸಮಯವನ್ನು ನೇರವಾಗಿ ಪ್ರದರ್ಶಿಸುವ ಭಾರತದ ಮೊದಲ ನಗರವಾಗಿ ಬೆಂಗಳೂರು ಸ್ಥಾನ ಪಡೆದಿದೆ. ಈ ಫೀಚರ್‌ ಪ್ರಯಾಣವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಚಾಲಕರು ಸಿಗ್ನಲ್ ಬದಲಾವಣೆಗಳನ್ನು ನಿರೀಕ್ಷಿಸಲು ಮತ್ತು ಅವರ ಚಲನೆಯನ್ನು ಪರಿಣಾಮಕಾರಿಯಾಗಿ ಯೋಜಿಸಲು ಸಹ ಅನುವು ಮಾಡಿಕೊಡುತ್ತದೆ.

Bengaluru Mappls App Live Traffic Signal Countdown India First City to Get the Feature

ಹೇಗೆ ಕೆಲಸ ಮಾಡುತ್ತೆ?

ಈ ಹೊಸ ಮ್ಯಾಪಲ್ಸ್ ಅಪ್ಲಿಕೇಶನ್ ಪ್ರಯಾಣಿಕರಿಗೆ ಟ್ರಾಫಿಕ್ ಸಿಗ್ನಲ್‌ಗಳ ನೇರ ಕೌಂಟ್‌ಡೌನ್‌ಗಳನ್ನು ಒದಗಿಸುತ್ತದೆ. ಸಿಗ್ನಲ್ ಕೆಂಪು ಅಥವಾ ಹಸಿರು ಬಣ್ಣಕ್ಕೆ ತಿರುಗಲು ಎಷ್ಟು ಸೆಕೆಂಡುಗಳು ಉಳಿದಿವೆ ಎಂಬುದನ್ನು ನಿಖರವಾಗಿ ತೋರಿಸುತ್ತದೆ. ಈ ನೈಜ-ಸಮಯದಿಂದಾಗಿ ಚಾಲಕರು ತಮ್ಮ ವೇಗವನ್ನು ನಿರ್ವಹಿಸಲು ಅಥವಾ ಬೇರೆ ಮಾರ್ಗಗಳನ್ನು ಬಳಸಲು ಸಹಾಯ ಮಾಡುತ್ತದೆ. ಅಲ್ಲದೆ ದಟ್ಟಣೆ ಹೆಚ್ಚಾಗುವ ಸಿಗ್ನಲ್‌ಗಳಲ್ಲಿ ಟ್ರಾಫಿಕ್‌ ಕೂಡ ಕ್ರಮೇಣ ಕಡಿಮೆ ಮಾಡುತ್ತದೆ.

ಈಗ 169 ಜಂಕ್ಷನ್‌ಗಳಲ್ಲಿ 'ವ್ಯಾಹನ ಆಕ್ಟ್ಯೂಟೆಡ್ ಕಂಟ್ರೋಲ್' (VAC) ಎಂಬ ಎಐ ಆಧಾರಿತ ಸಿಗ್ನಲ್ ವ್ಯವಸ್ಥೆಯ ಮಾಹಿತಿಯನ್ನು ನೇರವಾಗಿ ಮೊಬೈಲ್‌ ಆ್ಯಪ್‌ನಲ್ಲಿ ನೋಡಬಹುದು. ಟ್ರಾಫಿಕ್ ಸಂಪರ್ಕವನ್ನು ಆ್ಯಪ್‌ನಲ್ಲಿ ನೇರವಾಗಿ ನೋಡುವ ಮೂಲಕ ವಾಹನದ ಚಾಲಕರು ಸಿಗ್ನಲ್ ಕ್ರಾಸ್ ಮಾಡುವ ಅವಕಾಶ ಪಡೆಯುತ್ತಾರೆ. ಬೆಂಗಳೂರು ಟ್ರಾಫಿಕ್ ಸಿಗ್ನಲ್ ಕೌಂಟ್‌ಡೌನ್ ಮಾಹಿತಿಯನ್ನು ತಮ್ಮ ಮೊಬೈಲ್‌ಲ್ಲಿ ನೇರವಾಗಿ ನೋಡಬಹುದಾಗಿದೆ. ಒಂದು ವೇಳೆ ಟ್ರಾಫಿಕ್‌ ಸಿಗ್ನಲ್‌ ಬಿಡುವುದು ತಡವಾದರೆ ಬೇರೆ ಮಾರ್ಗಗಳನ್ನು ಸವಾರರು ಆರಿಸಿಕೊಳ್ಳಬಹುದು.

ಬೆಂಗಳೂರು ಸಂಚಾರ ಪೊಲೀಸ್ ಮತ್ತು ಅರ್ಕಾಡಿಸ್ ಇಂಡಿಯಾ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಮ್ಯಾಪಲ್ಸ್ ಅಪ್ಲಿಕೇಶನ್‌ನಲ್ಲಿ ಲೈವ್ ಟ್ರಾಫಿಕ್ ಸಿಗ್ನಲ್ ಕೌಂಟ್‌ಡೌನ್‌ಗಳನ್ನು ಒಳಗೊಂಡಿರುವ ಭಾರತದ ಮೊದಲ ನಗರ ಬೆಂಗಳೂರು ಆಗಿದೆ. ಸಂಚಾರ ದಟ್ಟಣೆ ಸುಧಾರಿಸಲು ಈ ಫೀಚರ್‌ ನೈಜ-ಸಮಯದ ಸಿಗ್ನಲ್ ಸಮಯಗಳ ಮಾಹಿತಿ ನೀಡಲಿದೆ. ಇದು ಶೀಘ್ರದಲ್ಲೇ ದೇಶದ ಇತರೆ ನಗರಗಳಿಗೆ ವಿಸ್ತರಿಸಬಹುದು ಎಂದು ಮ್ಯಾಪ್‌ಮೈಇಂಡಿಯಾದ ರೋಹನ್ ವರ್ಮಾ ಹೇಳಿದ್ದಾರೆ.

Mappls ಅಪ್ಲಿಕೇಶನ್‌ನಲ್ಲಿ ಲೈವ್ ಟ್ರಾಫಿಕ್ ಸಿಗ್ನಲ್ ಸಮಯಗಳು ಕಾಣಿಸಿಕೊಳ್ಳುವುದನ್ನು ನೀವು ನೋಡಬಲ್ಲಿರಾ? ನಿಜವಾದ ಟ್ರಾಫಿಕ್ ಸಿಗ್ನಲ್ ಎಣಿಕೆ ಕಡಿಮೆಯಾಗುತ್ತಿದ್ದಂತೆ, Mappls ಅಪ್ಲಿಕೇಶನ್‌ನೊಳಗಿನ ನಕ್ಷೆಯಲ್ಲಿ ನೀವು ಅದೇ ರೀತಿ ನೋಡುತ್ತೀರಿ ಎಂದು ರೋಹನ್ ವರ್ಮಾ ವಿಡಿಯೋ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ದೂರದ ಜಂಕ್ಷನ್‌ಗಳ ಮಾಹಿತಿ ಕೂಡ ಈ ಆಪ್‌ನಲ್ಲಿ ನೋಡಲು ಅವಕಾಶ ಮಾಡಿಕೊಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+