ಒನ್ ಇಂಡಿಯಾ ಫಲಶ್ರುತಿ: ಬಡವರ ಮನೆ ತಲುಪಿದ ಆಹಾರ ಸಾಮಗ್ರಿ

ಬೆಂಗಳೂರು, ಏಪ್ರಿಲ್ 16: ನಿನ್ನೆ ಬೆಂಗಳೂರಿನ ಮಂಜುನಾಥ ಲೇ ಔಟ್‌ ನಿವಾಸಿಗಳ ಪರಿಸ್ಥಿತಿಯ ಬಗ್ಗೆ ಒನ್ ಇಂಡಿಯಾ ಕನ್ನಡ ವರದಿ ಮಾಡಿತ್ತು. ಈಗ ಈ ವರದಿಗೆ ಫಲ ಸಿಕ್ಕಿದೆ.

ಇಲ್ಲಿನ 60ಕ್ಕೂ ಹೆಚ್ಚು ಕುಟುಂಬಗಳು ಆಹಾರ ಪದಾರ್ಥಗಳು ಇಲ್ಲದೆ, ಊಟಕ್ಕೂ ಪರದಾಡುತ್ತಿದ್ದರು. ಕೂಲಿ, ಮನೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿರುವ ಕುಟುಂಬಗಳು ಕಣ್ಣೀರು ಹಾಕುತ್ತಿದ್ದರು. ಕೆಲಸವಿಲ್ಲ, ಹಣವಿಲ್ಲ, ಮನೆಬಿಟ್ಟು ಹೋಗುವ ಹಾಗಿಲ್ಲ, ಮನೆಯಲ್ಲಿ ಆಹಾರ ಸಾಮಗ್ರಿಗಳು ಇಲ್ಲ ಎಂದು ಕಂಗಾಲಾಗಿದ್ದರು.

Bengaluru Manjunatha Layout Residents Gets Food and Ration

ಈ ಬಗ್ಗೆ ಒನ್ ಇಂಡಿಯಾ ಕನ್ನಡ ವರದಿ ಮಾಡಿದ್ದು, ಅದಕ್ಕೆ ಸ್ಪಂದನೆ ಸಿಕ್ಕಿದೆ. 'ಕರ್ನಾಟಕ ಕ್ರಿಸ್ಚಿಯನ್ ಫೋರಂ' ಹಾಗೂ ಬಿಗ್ ಬಾಸ್ ಸ್ಪರ್ಥಿ ಕಿರಿಕ್ ಕೀರ್ತಿರ 'ಕೊಡೋಣ' ತಂಡಗಳು ಇಲ್ಲಿನ 250 ನಿವಾಸಿಗಳಿಗೆ ನೆರವಾಗಿದ್ದಾರೆ. ಎಲ್ಲ ಕುಟುಂಬಗಳಿಗೆ ಬೇಕಾದ ಆಹಾರ ಪದಾರ್ಥ, ಊಟ ಸಿಕ್ಕಿದೆ.ಆಹಾರ ಪದಾರ್ಥ ಪಡೆದ ನಿವಾಸಿಗಳು ಒನ್ ಇಂಡಿಯಾಗೆ ಧನ್ಯವಾದ ತಿಳಿಸಿದ್ದಾರೆ.

ಲಾಕ್‌ಡೌನ್ ಘೋಷಣೆ ಆದ ದಿನದಿಂದ ಇಲ್ಲಿನ ಜನರು ಸಮಸ್ಯೆಯಲ್ಲಿ ಇದ್ದರು, ಇಲ್ಲಿನ ಕಾರ್ಪೋರೇಟರ್, ಜನಪ್ರತಿನಿಧಿಗಳು ಮಾತ್ರ ಇದುವರೆಗೆ ಇತ್ತ ನೋಡಿಯೇ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+