ಬೆಂಗಳೂರು ಯುವಕ ದುಬೈನಲ್ಲಿ ನಾಪತ್ತೆ: ಮೋದಿಗೆ ತಾಯಿಯ ಪತ್ರ
ಬೆಂಗಳೂರು, ಜನವರಿ 17: ಬೆಂಗಳೂರು ಮೂಲದ ಯುವಕ ದುಬೈನಲ್ಲಿ ನಾಪತ್ತೆಯಾಗಿದ್ದು, ಹೆತ್ತವರು ಮಗನಿಲ್ಲದೆ ಕಣ್ಣೀರಿಡುತ್ತಿದ್ದಾರೆ.
ಕೆಲಸಕ್ಕಾಗಿ ದುಬೈ ತೆರಳಿದ್ದ ಯುವಕ ನಾಪತ್ತೆಯಾಗಿದ್ದು, ಮೆಯವರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪೋಷಕರು ಹೇಳಿದ್ದಾರೆ.
ದೀಪಕ್ ಎಂಬಿಎ ಮುಗಿಸಿ ಆರು ವರ್ಷಗಳ ಹಿಂದೆ ದುಬೈಗೆ ಉದ್ಯೋಗಕ್ಕಾಗಿ ತೆರಳಿದ್ದ, ಮಸ್ಕಟ್‌ನಲ್ಲಿ ಕೆಲಸ ಮಾಡುತ್ತಿದ್ದ, ದೀಪಕ್ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗೆ 50 ಸಾವಿರ ರೂ ಕಳುಹಿಸುತ್ತಿದ್ದ. ದೀಪಕ್ ಅಕ್ಕ ಪೊಲೀಯೋಗೆ ತುತ್ತಾಗಿದ್ದಾರೆ.

ಡಿಸೆಂಬರ್ 10ರ ನಂತರ ಇದುವರೆಗೂ ತಾಯಿಗೆ ಫೋನ್ ಮಾಡಿಲ್ಲ, ಮಗನನ್ನು ಪತ್ತೆ ಮಾಡಿಕೊಡುವಂತೆ ಪ್ರಧಾನಿ ಕಚೇರಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಪತ್ರ ಬರೆದಿದ್ದಾರೆ.











Click it and Unblock the Notifications