Bengaluru Airport: ಬೆಂಗಳೂರು-ಮಾಲ್ಡೀವ್ಸ್ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ, ಹೊಸ ಸೇವೆ!

ಬೆಂಗಳೂರು, ಮಾರ್ಚ್ 16: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಕರ್ನಾಟಕ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA)ವು ಹೊಸ ಸೇವೆಗೆ ಸಾಕ್ಷಿಯಾಗಲಿದೆ. ಈಗಾಗಲೇ ಇಲ್ಲಿಂದ ನಿತ್ಯ ಸಾವಿರಾರು ವಿಮಾನಗಳು ದೇಶ, ವಿದೇಶಗಳ ಲಕ್ಷಾಂತರ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿವೆ. ಯಾರೆಲ್ಲ ಬೇಸಿಗೆ ವೇಳೆ ಮಾಲ್ಡೀವ್ಸ್‌ಗೆ ಹೋಗಲು ಪ್ಲಾನ್ ಮಾಡಿದ್ದೀರೋ ಅವರೆಗೆಲ್ಲ ಖುಷಿ ಸುದ್ದಿ ಇಲ್ಲಿದೆ. ಹೊಸ ಮಾರ್ಗದಲ್ಲಿ ವಿಮಾನದಲ್ಲಿ ಓಡಾಡಬಹುದಾಗಿದೆ.

ಬೆಂಗಳೂರು ಮತ್ತು ಮಾಲ್ಡೀವ್ಸ್ ಮಧ್ಯ ಹೊಸದಾಗಿ ನೇರ ವಿಮಾನ ಸೇವೆ ಆರಂಭಿಸುವುದಾಗಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಮಾಲ್ಡೀವಿಯನ್ ಸಿಹಿ ಸುದ್ದಿ ಕೊಟ್ಟಿದೆ. ಮಾಲ್ಡೀವ್ಸ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಮಾಲ್ಡೀವಿಯನ್ ಯು ಹನಿಮಾಧೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (HAQ) ದಿಂದ ಭಾರತದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAB) ಮಧ್ಯೆ ಹೊಸದಾಗಿ ನೇರ ವಿಮಾನ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಸಮ್ಮರ್ ನಲ್ಲಿ ಮಾಲ್ಡೀವ್ಸ್‌ಗೆ ಹೋಗಿ ಕೆಲವು ದಿನಗಳ ಕಳೆಯಬೇಕು ಎಂದುಕೊಂಡವರಿಗೆ ಉತ್ತಮ ವಿಮಾನಯಾನ ಸೇವೆ ಶುರುವಾಗಲಿದೆ ಎಂದು 'ಏವಿಯೇಷನ್ ಎಟುಝಡ್' ವರದಿ ಮಾಡಿದೆ.

Bengaluru-Maldives New Direct Flight Service Introduce from May 15 of 2025

ಹೊಸ ಮಾರ್ಗದಲ್ಲಿ ವಿಮಾನ ಹಾರಾಟ ಯಾವಾಗ?

ಮಾಲ್ಡೀವ್ಸ್ ಮತ್ತು ಸಿಲಿಕಾನ್ ವ್ಯಾಲಿ ಬೆಂಗಳೂರಿನ ಮದ್ಯೆ ಮಹತ್ವದ ವಾಯು ಸೇವೆಯು ಇದೇ ವರ್ಷ ಮೇ 15ರಿಂದ ಶುರುವಾಗಲಿದೆ. ಇದು ವಿಮಾನಯಾನ ಸಂಸ್ಥೆಯ ಪ್ರಾದೇಶಿಕ ವಿಸ್ತರಣೆ, ಹೊಸ ಮಾರ್ಗದ ಸಂಚಾರ, ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಕರ್ಯ ಒದಗಿಸುವ ಕಾರ್ಯತಂತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಮಾಲ್ಡೀವ್ಸ್ ಅಭಿಪ್ರಾಯಪಟ್ಟಿದೆ.

ಮಾಲ್ಡೀವಿಯನ್ ಹನಿಮಾಧೂ-ಬೆಂಗಳೂರು ವಿಮಾನ, ಎಷ್ಟು ಟ್ರಿಪ್?

2025 ರ ಮೇ 15 ರಿಂದ ಮಾಲ್ಡೀವಿಯನ್ ವಿಮಾನಗಳೂ ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸೇವೆ ಆರಂಭಿಸುತ್ತವೆ. ವಾರದಲ್ಲಿ ಎರಡು ಭಾರಿ ವಾರಕ್ಕೆ ಎರಡು ಬಾರಿ ಹನಿಮಾಧೂ ನಿಲ್ದಾಣದಿಂದ ವಿಮಾನಗಳು ಬೆಂಗಳೂರಿಗೆ ಹಾರಾಟ ನಡೆಸಲಿವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ವಾರದಲ್ಲಿ ಎರಡು ದಿನ ಅಂದರೆ ಭಾನುವಾರ ಮತ್ತು ಗುರುವಾರಗಳಂದು Q2-738 ಸಂಖ್ಯೆಯ ವಿಮಾನವು ಸ್ಥಳೀಯ ರಾತ್ರಿ 22:35 ಗಂಟೆಗೆ ಹನಿಮಾಧೂದಿಂದ ಹೊರಟು, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 01:45 ಬರುತ್ತದೆ.

Bengaluru-Maldives New Direct Flight Service Introduce from May 15 of 2025

ಮರಳಿ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರತಿ ಸೋಮವಾರ ಮತ್ತು ಶುಕ್ರವಾರ ಸಂಚಾರ ನಡೆಸುತ್ತದೆ. Q2-739 ಸಂಖ್ಯೆಯ ವಿಮಾನವು ಬೆಳಗಿನ ಜಾವ 02:45 ಗಂಟೆಗೆ ಹೊರಟು ಮಾಲ್ಡೀವ್ಸ್‌ ನಿಗದಿತ ಹನಿಮಾಧೂ ವಿಮಾನ ನಿಲ್ದಾಣಕ್ಕೆ ಸರಿಯಾಗಿ ಬೆಳಗಿನ ಜಾವ 04:55 ತಲುಪುತ್ತದೆ.

ದಕ್ಷತೆ ಮತ್ತು ವಿಶ್ವಾಸಾರ್ಹತೆಗೆ ಹೆಸರಾದ ಆಧುನಿಕ ಟರ್ಬೊಪ್ರೊಪ್ ವಿಮಾನವಾದ ATR 42-600 ಬಳಸಿಕೊಂಡು ಈ ಮಾಲ್ಡೀವ್ಸ್ ವಿಮಾನಗಳು ಬೆಂಗಳೂರಿಗೆ ಸೇವೆ ನೀಡುತ್ತವೆ. ಪ್ರಯಾಣಿಕರ ಸಮಯ ಗಮನದಲ್ಲಿಟ್ಟುಕೊಂಡು ಸೇವೆ ಆರಂಭಿಸುವುದಾಗಿ ಸಂಸ್ಥೆ ತಿಳಿಸಿದೆ.

ಹನಿಮಾಧೂ ಒಂದು ನವ ಪ್ರಾದೇಶಿಕ ಕೇಂದ್ರವಾಗಿದೆ. ಬೆಂಗಳೂರಿನಿಂದ ಅಲ್ಲಿಗೆ ವಿಮಾನಯಾನದ ಹೊಸ ಮಾರ್ಗ ಉತ್ತರ ಮಾಲ್ಡೀವ್ಸ್ ಮತ್ತು ಭಾರತ ಮಧ್ಯೆ ಪ್ರಮುಖ ಸಂಪರ್ಕ ಸೇತುವೆ ಆಗಲಿದೆ. ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದ ಪ್ರವಾಸಿಗರಿಗೆ ಮಾಲ್ಡೀವ್ಸ್‌ನಲ್ಲಿ ತಡೆರಹಿತ ಪ್ರವೇಶ ಇದೆ. ಪ್ರಯವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಎರಡು ದೇಶಗಳ ಮಧ್ಯೆ ಉತ್ತಮ ಬಾಂಧವ್ಯಕ್ಕೆ ಇದು ನಾಂದಿ ಹಾಡುತ್ತದೆ ಎಂದು ಮಾಲ್ಡೀವಿಯನ್‌ನ ವ್ಯವಸ್ಥಾಪಕ ನಿರ್ದೇಶಕ ಇಬ್ರಾಹಿಂ ಇಯಾಸ್ ಹರ್ಷ ವ್ಯಕ್ತಪಡಿಸಿದರು..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+