ಬೆಂಗಳೂರಲ್ಲಿ 16ರಿಂದ 18 ವರ್ಷದವರು "ಅದು" ಮಾಡ್ತಾರೆ, ನಮಗೆ ಈ ಫ್ರೀಡಂ ಇಲ್ಲ ಮಲಯಾಳಿ ಪೋಸ್ಟ್ ವೈರಲ್!
ಬೆಂಗಳೂರಿನ ಬಗ್ಗೆ ಕೇರಳ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾ "Reddit" ನಲ್ಲಿ ಮಾಡಿರುವ ಪೋಸ್ಟ್ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ದುಡ್ಡು ಇರುವ ಅಥವಾ ಶ್ರೀಮಂತ ಮಕ್ಕಳ ಹವ್ಯಾಸ ಹಾಗೂ ಅವರ ಸಂಸ್ಕೃತಿ ಹೇಗೆ ಇರುತ್ತದೆ. ಬೆಂಗಳೂರು ಮತ್ತು ಕೇರಳದ ನಡುವಿನ ವ್ಯತ್ಯಾಸವೇನು ಎನ್ನುವ ಬಗ್ಗೆ ಆತ ಅನುಭವ ಹಂಚಿಕೊಂಡಿದ್ದಾನೆ. ನಾನು ನಾಲ್ಕು ವರ್ಷಗಳ ಕಾಲ ಬೆಂಗಳೂರಿನಲ್ಲಿ ಇದ್ದೆ. ಇಲ್ಲಿನ ಫ್ರೀಡಂ ಹಾಗೂ ವೆದರ್ ನಮ್ಮೂರಿನಲ್ಲಿ ಇಲ್ಲ ಎಂದಿರುವ ವ್ಯಕ್ತಿ ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ 16ರಿಂದ 18 ವರ್ಷದೊಳಗೆ ಇರುವವರು ಸೆಕ್ಸ್ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾನೆ.
ಬೆಂಗಳೂರಿನ ಬಗ್ಗೆ ವಲಸಿಗರ ದೃಷ್ಟಿಕೋನ ಹಾಗೂ ಇಲ್ಲಿಗೆ ಬಂದ ಮೇಲೆ ಇರುವ ಪರಿಸ್ಥಿತಿ ನೋಡಿ ಕೆಲವರು ಅಚ್ಚರಿಗೆ ಒಳಗಾಗುವುದು ಸಹ ಇದೆ. ಇದೀಗ ಕೇರಳದ ಮಲಯಾಳಿಯೊಬ್ಬರು Reddit ನಲ್ಲಿ ನಾನು ಕೇರಳದ ಕಣ್ಣೂರಿನವ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು 4 ವರ್ಷಗಳಿಗೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ ಮತ್ತು ಈ ನಗರ ನನಗೆ ಹೇಗೆ ಸಹಾಯ ಮಾಡಿದೆ ಎನ್ನುವುದು ನನ್ನ ತಿಳುವಳಿಕೆಗೆ ಮೀರಿದ್ದು ಎಂದು ಅವರು ಬರೆದುಕೊಂಡಿದ್ದಾರೆ.

ಮುಂದುವರಿದು ಇಲ್ಲಿನ ವೆದರ್ ಸಿಕ್ಕಾಪಟ್ಟೆ ಕ್ರೇಜಿ ಆಗಿರುತ್ತದೆ. ಬೆಳಿಗ್ಗೆ ತುಂಬಾ ಬಿಸಿಲು ಇರುತ್ತದೆ. ಇವೊತ್ತು ಬಿಸಿಲು ಇರಬಹುದು ಅಂತಾ ನೀವು ನಿಮ್ಮ ಛತ್ರಿ ಮತ್ತು ರೇನ್‌ಕೋಟ್ ತೆಗೆದುಕೊಂಡು ಬಿಟ್ಟು ಹೋದರೆ ಎರಡೇ ನಿಮಿಷದಲ್ಲಿ ಧಾರಾಕಾರ ಮಳೆ ಆಗುತ್ತದೆ. ನೀವು ಬೆಂಗಳೂರಿನ ಟ್ರಾಫಿಕ್‌ಜಾಮ್‌ನಲ್ಲಿ ಸಿಕ್ಕಿಕೊಂಡು ಪರದಾಡಬೇಕು. ನಾನು ಇದನ್ನೆಲ್ಲಾ ನೋಡಿ ನನ್ನೂರಿಗೆ ಹೋಗಬೇಕು ಅಂತಾ ಅಂದುಕೊಳ್ಳುವುದು ಇದೆ. ಆದರೆ ಈ ಬೆಂಗಳೂರಿನ ತಂಪಾದ ಹವಾಮಾನ ಮತ್ತು ತಂಗಾಳಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ ಅನಿಸುತ್ತೆ. ಈ ವಿಷಯದಲ್ಲಿ ನಾನು ಬೆಂಗಳೂರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಮುಂದುವರಿದು ಅವರು ಬೆಂಗಳೂರಿನ ಕೆಲವು ಶಾಲಾ ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ನಾನು ಬೆಂಗಳೂರಿನಲ್ಲಿ ಜಿಮ್‌ಗೆ ಹೋಗುವಾಗ ಕೆಲವು ಗೆಳೆಯರು ಹಾಗೂ ಪರಿಚಿತರು ಇದ್ದಾರೆ. 16-18 ವರ್ಷ ವಯಸ್ಸಿನ ಕೆಲವು ಸ್ನೇಹಿತರಿದ್ದಾರೆ. ನೀವು ಅವರ ಕಥೆಗಳನ್ನು ಕೇಳಬೇಕು. ಅದನ್ನು ಕೇಳಿದರೆ ನಾನು ಏನು ಕಳೆದುಕೊಳ್ಳುತ್ತಿದ್ದೇನೆ ಎಂದು ಆಶ್ಚರ್ಯ ಪಡುತ್ತೀರಿ? 16 ವರ್ಷದ ಕೆಲವು ಮಕ್ಕಳು ನಿಯಮಿತವಾಗಿ Hook Ups (ಸೆಕ್ಸ್) ಮಾಡುತ್ತಿದ್ದಾರೆ. ಅವರು ಈ ವಿಷಯಗಳನ್ನು ಮಾತನಾಡುವಾಗ ಹೆಮ್ಮೆಪಡುತ್ತಾರೆ. ಇದು ತುಂಬಾ ಅಚ್ಚರಿಯ ವಿಷಯ ನನಗೆ. ಕೇರಳದಲ್ಲಿ ಮಕ್ಕಳನ್ನು ಬಿಡಿ, ಕೇರಳದ ಕಾಲೇಜು ವಿದ್ಯಾರ್ಥಿಗಳು rizz / ಸಂಗಾತಿ ಅಥವಾ ಪಾರ್ಟನ್ನರ್‌ಗಾಗಿ ಕಷ್ಟಪಡುತ್ತಾರೆ. ಈ ನಗರವು ಕೆಟ್ಟದಾಗಿದೆ ಎಂದು ನಾನು ಭಾವಿಸಿ ಕೇರಳಕ್ಕೆ ಹೋದರೆ, ಅಲ್ಲಿ ನನ್ನನ್ನು ಪ್ರತಿಯೊಬ್ಬರೂ ಜಡ್ಜ್ ಮಾಡುತ್ತಾರೆ.
ನೆರೆಹೊರೆಯವರು ಹಾಗೂ ಸಂಬಂಧಿಕರ ಟೀಕೆ, ನಿಂದನೆಗಳಿಂದ ಕೇರಳದಲ್ಲಿ ನಾವು ನಿರ್ಬಂಧಕ್ಕೆ ಒಳಗಾಗುವುದು ಇದೆ. ಆದರೆ ಬೆಂಗಳೂರಿನಲ್ಲಿ ಸ್ವಚ್ಛಂದವಾದ ಫ್ರೀಡಂ ಇದೆ. ಬೆಂಗಳೂರಿನಲ್ಲಿ ಯಾರು ಇನ್ನೊಬ್ಬರ ಸ್ವಾತಂತ್ರ್ಯ, ಬದುಕುವ ರೀತಿಯನ್ನು ಪ್ರಶ್ನೆ ಮಾಡುವುದಿಲ್ಲ. ನಾನು ಆ ಫ್ರೀಡಂ ಕಳೆದುಕೊಂಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಾನು ಕೇರಳ ಮತ್ತು ಭಾರತದ ಇತರ ಭಾಗಗಳಲ್ಲಿ ವಾಸ ಮಾಡಿದ್ದೇನೆ. ಆದರೆ ಕೆಲವನ್ನು ನಗರಗಳನ್ನು ಪ್ರೀತಿಸುತ್ತೇನೆ, ಕೆಲವನ್ನು ದ್ವೇಷಿಸುತ್ತೇನೆ. ಆದರೆ ಪ್ರೀತಿ ಮತ್ತು ದ್ವೇಷದ ಈ ಅಂತ್ಯವಿಲ್ಲದ ಸುಳಿಯಲ್ಲಿ ಸಿಲುಕುವಂತೆ ಮಾಡುವುದು ಬೆಂಗಳೂರು ಮಾತ್ರ. ಒಂದೇ ಕಾರಣ (ಹಲವಾರು ಮಲಯಾಳಿಗಳು ಮತ್ತು ರೆಸ್ಟೋರೆಂಟ್‌ಗಳು ಇರುವುದರಿಂದ) ಕೆಲಸಕ್ಕಾಗಿ ಬೇರೆ ನಗರಕ್ಕೆ ಹೋಗುವುದು ನನಗೆ ಕಷ್ಟವಾಗುತ್ತದೆ. ಈ ನಗರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.












Click it and Unblock the Notifications