10 ಲಕ್ಷ ಮೌಲ್ಯದ ಬಿಟ್‌ಕಾಯಿನ್ ಕಳೆದುಕೊಂಡ ಬೆಂಗಳೂರು ಉಪನ್ಯಾಸಕ

ಬೆಂಗಳೂರು, ಮಾರ್ಚ್ 17: ವಂಚಕನ ಬಲೆಗೆ ಬಿದ್ದು ಬೆಂಗಳೂರಿನ ಉಪನ್ಯಾಸಕರೊಬ್ಬರು 10 ಲಕ್ಷ ಮೌಲ್ಯದ ಬಿಟ್‌ಕಾಯಿನ್ಸ್‌ಗಳನ್ನು ಕಳೆದುಕೊಂಡಿದ್ದಾರೆ.

ಮೆಸೆಂಜರ್ ಅಪ್ಲಿಕೇಷನ್‌ ಟೆಲಿಗ್ರಾಂನಲ್ಲಿ ಲಭ್ಯವಿರುವ ಕ್ರಿಪ್ಟೋ ಕರೆನ್ಸಿ ರೂಂನಲ್ಲಿ ದೂರುದಾರ ಉಪನ್ಯಾಸಕರು ಪ್ರವೇಶಿಸಿದ್ದರು. ಅಲ್ಲಿ ಓರ್ವ ಕ್ರಿಪ್ಟೋ ಕರೆನ್ಸಿ ಹ್ಯಾಕರ್ ಉಪನ್ಯಾಸಕರಿಗೆ ಸಂದೇಶ ಕಳುಹಿಸಿ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಿ ಇನ್ನಷ್ಟು ಲಾಭ ಮಾಡಿಸಿಕೊಡುವುದಾಗಿ ಭರವಸೆ ಮೂಡಿಸಿದ್ದ.

ಈ ಹಂತದಲ್ಲಿ ಕಾಯಿನ್ಸ್ ವಿಚ್ ಕುಬೇರ್ ಮೂಲಕ ಹ್ಯಾಕರ್‌ಗೆ 90 ಸಾವಿರ ರೂಪಾಯಿಯನ್ನು ವರ್ಗಾಯಿಸಲು ಪ್ರಯತ್ನಿಸಿದ್ದರು.ಆದರೆ ಅದು ವಿಫಲವಾದಾಗ, ಟೆಲಿಗ್ರಾಂ ರೂಂನಲ್ಲಿ ಸಂದೇಶವನ್ನು ಕಳುಹಿಸಿ ನೆರವು ಕೋರಿದ್ದರು. ಆಗ ಮತ್ತೆ ದೂರುದಾರರಿಗೆ ಹ್ಯಾಕರ್ ವೈಯಕ್ತಿಕ ಸಂದೇಶ ಕಳುಹಿಸಿ, ತನಗೂ ಇಂತಹುದೇ ಸಮಸ್ಯೆಯಾಗಿತ್ತು, ನನ್ನ ಪರಿಚಯವಿರುವವರಿಗೂ ಹಾಗೆಯೇ ಆಗಿತ್ತು, ಅವರಿಗೆ ಪರಿಹಾರ ಕಂಡುಕೊಟ್ಟಿದ್ದೆ, ನಿಮಗೂ ಪರಿಹಾರವನ್ನು ಹುಡುಕಿಕೊಡುತ್ತೇನೆ ಎಂದು ಹೇಳಿದ್ದ.

Bengaluru Lecturer Loses Bitcoins Worth Rs 10 Lakh To fraudster

ಈ ಹಂತದಲ್ಲಿ ಹ್ಯಾಕರ್ ಬುಟ್ಟಿಗೆ ಬಿದ್ದಿದ್ದ ಉಪನ್ಯಾಸಕರು ತನ್ನ ಕ್ರಿಪ್ಟೋ ಕರೆನ್ಸಿ ಖಾತೆಯ ಪಾಸ್‌ವರ್ಡ್ ಹಾಗೂ ನಂತರ ಬಂದು ಒಟಿಪಿಯನ್ನು ನೀಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಅವರ ಖಾತೆಯಲ್ಲಿ 10 ಲಕ್ಷ ಮೌಲ್ಯದ ಬಿಟ್‌ಕಾಯಿನ್‌ನ್ನು ಆತ ವರ್ಗಾಯಿಸಿಕೊಂಡಿದ್ದ.

ಈಗ ಈ ಸಂಬಂಧ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ಸೈಬರ್ ಪೊಲೀಸರಿಗೆ ಇದು ಹೊಸ ಪ್ರಕರಣವಾಗಿದ್ದು, ಹೇಗೆ ಪ್ರಕರಣದ ತನಿಖೆ ಮಾಡಬೇಕೆಂಬ ಗೊಂದಲದಲ್ಲಿದ್ದಾರೆ.

Recommended Video

      Modi's best 3 advise to avoid covid 19 | Oneindia Kannada

      ಭಾರತದಲ್ಲಿ ಬಿಟ್ ಕಾಯಿನ್ ನಿಯಂತ್ರಣಕ್ಕೆ ನಿರ್ದಿಷ್ಟ ಪ್ರಾಧಿಕಾರಗಳಿಲ್ಲ, ಹೀಗಾಗಿ ಮುಂದಿನ ತನಿಖಾ ಕ್ರಮದ ಬಗ್ಗೆ ಸಾಕಷ್ಟು ಗೊಂದಲಗಳಿವೆ, ಆದಾಗ್ಯೂ ಕಾಯಿನ್ಸ್‌ ವಿಚ್ ಕುಬೇರ್‌ನಿಂದ ಮಾಹಿತಿ ಕೋರಲಾಗಿದೆ. ಅವರ ದಾಖಲೆ ಆಧರಿಸಿ ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+