ಒಕ್ಕಲಿಗರ ಸಂಘದ ಅಧ್ಯಕ್ಷರಿಗೆ ನರ್ಸ್‌ಗಳಿಂದ ಬಾಗಿನ
ಬೆಂಗಳೂರು, ಅಕ್ಟೋಬರ್. 05: ಸೇವೆ ಕಾಯಂಮಾತಿಗೆ ಆಗ್ರಹಿಸಿ ಕಿಮ್ಸ್ ನರ್ಸ್ ಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದ್ದು ಸೋಮವಾರ ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿ ಗೌಡ ಅವರ ಕಚೇರಿ ಎದುರು ಬಾಗಿನ ಇಟ್ಟು ನರ್ಸ್ ಗಳು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಸೇವೆ ಕಾಯಂ ಮಾಡಿ ಇಲ್ಲವೇ, ಬಳೆ ತೊಟ್ಟಿಕೊಳ್ಳಿ ಎಂದು ಘೋಷಣೆ ಕೂಗಿದರು. ಪ್ರತಿಭಟನೆಗೆ ನರ್ಸ್ ಗಳ ಪಾಲಕರು ಸೋಮವಾರ ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು .

ನಮ್ಮ ಹೋರಾಟಕ್ಕೆ ಆಡಳಿತ ಮಂಡಳಿಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಮ್ಮ ಬಳಿ ಮಾತುಕತೆ ಮಾಡುವ ಔದಾರ್ಯವನ್ನು ಸಂಸ್ಥೆ ಮಾಡಿಲ್ಲ ಎಂದು ಆರೋಪಿಸಿದರು. ನಮ್ಮ ಎಲ್ಲ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಬದಲಾದ ಆಡಳಿತ ಮಂಡಳಿ ನಮ್ಮ ಹಕ್ಕುಗಳನ್ನು ಕಸಿದುಕೊಂಡಿದೆ. ನಾಲ್ಕೈದು ವರ್ಷಗಳಿಂದ ಸ್ಟಾಫ್ ನರ್ಸ್ ಹಾಗೂ ಕಂಪ್ಯೂಟರ್ ಆಪರೇಟರ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 130 ಮಂದಿಯನ್ನುಕಾಯಂಗೊಳಿಸಬೇಕು. 2011ರಲ್ಲಿ ಒಂದು ವರ್ಷ ತರಬೇತಿ ಸೇರಿದಂತೆ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಎಲ್ಲಾ 28 ಶುಶ್ರೂಷಕಿಯರನ್ನು ಅಂದಿನ ಆಡಳಿತ ಮಂಡಳಿ ಕಾಯಂಗೊಳಿಸಿದೆ. ಆದರೆ ಈ ಆಡಳಿತ ಮಂಡಳಿ ನಮ್ಮನ್ನು ಕಾಯಂ ಮಾಡುತ್ತಿಲ್ಲ ಎಂಬ ಆರೋಪವನ್ನು ಪ್ರತಿಭಟನಾಕಾರರು ಮಾಡುತ್ತಿದ್ದಾರೆ.
ಕಿಮ್ಸ್ 720 ಹಾಸಿಗೆಯುಳ್ಳ ಆಸ್ಪತ್ರೆ, ಆಸ್ಪತ್ರೆಗೆ 350 ದಾದಿಯರು ಸಾಕಾಗಿತ್ತು, ಆದರೂ ಆಸ್ಪತ್ರೆಯಲ್ಲಿ 670 ದಾದಿಯರಿದ್ದಾರೆ. ಅವರೆಲ್ಲರಿಗೂ ವೇತನ ನೀಡಲಾಗುತ್ತಿದೆ. ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡವರು ಕಾಯಂ ಮಾಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಸಂಸ್ಥೆಗೆ ಪ್ರತಿ ವರ್ಷ 110 ಕೋಟಿ ಹಣ ಖರ್ಚಿಗೆ ಬೇಕಿದ್ದು ಆದಾಯ 95 ಕೋಟಿ ಇದೆ. ಸಂಸ್ಥೆಯೇ ನಷ್ಟದಲ್ಲಿರುವಾಗ ಸೇವೆ ಕಾಯಂ ಮಾಡುವ ಬೇಡಿಕೆ ಸರಿಯಲ್ಲ ಎಂಬುದು ಕಿಮ್ಸ್ ಅಧ್ಯಕ್ಷ ಅಪ್ಪಾಜಿ ಗೌಡ ಅವರ ಸಮರ್ಥನೆ.












Click it and Unblock the Notifications