Bengaluru: ಕೊರಿಯರ್ ಉದ್ಯೋಗಿಗಳ ಹೆಸರಿಲ್ಲಿ ಬೆಂಗಳೂರು ಐಟಿ ಸಂಸ್ಥೆಯ ಸಿಇಒಗೆ ₹2.3 ಕೋಟಿ ವಂಚನೆ
ಫೆಡೆಕ್ಸ್ ಮತ್ತು ಪೊಲೀಸ್ ಅಧಿಕಾರಿಗಳಿಗಾಗಿ ಎಂದು ಹೇಳಿಕೊಂಡು ಬೆಂಗಳೂರಿನ ಐಟಿ ಸಂಸ್ಥೆಯೊಂದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಗೆ ₹2.3 ಕೋಟಿ ವಂಚಿಸಿದ್ದಾರೆ ಎಂದು ವರದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, 66 ವರ್ಷದ ಸಿಇಒ, ಬೆಂಗಳೂರಿನ ಸಿವಿ ರಾಮನ್ ನಗರ ಪ್ರದೇಶದ ನಿವಾಸಿಯಾಗಿದ್ದಾರೆ. ಫೆಬ್ರವರಿ 6 ರಂದು ಮುಂಬೈನಲ್ಲಿ "ಫೆಡ್ಎಕ್ಸ್" ಕೊರಿಯರ್‌ನಲ್ಲಿ ಕೆಲಸ ಮಾಡುವ ಕಾರ್ಯನಿರ್ವಾಹಕ ಎಂದು ಹೇಳಿಕೊಂಡು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ.

ವಂಚಕನು ಸಿಇಒ ಅವರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಹೇಳಿದ್ದಾರೆ. ವಂಚನೆಗೊಳದಾವರ ಹೆಸರಿನಲ್ಲಿ 150 ಗ್ರಾಂ ಎಂಡಿಎಂಎ, 4 ಪಾಸ್‌ಪೋರ್ಟ್‌ಗಳು ಮತ್ತು 4 ಕೆಜಿ ಬಟ್ಟೆಗಳನ್ನು ಹೊಂದಿರುವ ಪಾರ್ಸೆಲ್ ಇತ್ತು ಅದನ್ನು ಶಾಂಘೈಗೆ ಅಕ್ರಮವಾಗಿ ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮುಂಬೈನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅವರ ಹೆಸರಿನ ವಿರುದ್ಧ ಪ್ರಕರಣ ದಾಖಲಾಗಿದೆ ಮತ್ತು ಅವರು ಕರೆಯನ್ನು ಪೊಲೀಸ್ ಅಧಿಕಾರಿಯೊಬ್ಬರಿಗೆ ವರ್ಗಾಯಿಸುತ್ತಾರೆ ಎಂದು ಸಿಇಒಗೆ ತಿಳಿಸಲಾಗಿದೆ.
ವಂಚಕರ ಮಾಸ್ಟರ್ ಪ್ಲಾನ್
ಪೊಲೀಸ್ ಅಧಿಕಾರಿ ಎಂದು ಕರೆ ಮಾಡಿದಾತ ತನ್ನನ್ನು ಬಾಲಾಜಿ ಸಿಂಗ್ ಎಂದು ಗುರುತಿಸಿಕೊಂಡಿದ್ದಾನೆ ಮತ್ತು ಸಿಇಒಗೆ ತಕ್ಷಣ ಮುಂಬೈಗೆ ಬರಬೇಕು ಇಲ್ಲವಾದರೆ ಪೊಲೀಸರ ಬಂಧನ ಎದುರಿಸಲು ಸಜ್ಜಾಗಿ ಎಂದು ಹೇಳಿದ್ದಾರೆ.
ಸ್ಕ್ಯಾಮರ್ ಸ್ಕೈಪ್ ಅನ್ನು ಡೌನ್‌ಲೋಡ್ ಮಾಡಲು ಸಿಇಒಗೆ ಹೇಳಲಾಗಿದೆ ವಿಡಿಯೋ ಕರೆ ಮಾಡಲಾಗಿದೆ. ಸಮವಸ್ತ್ರದಲ್ಲಿ ಕೆಲವು ಪುರುಷರು ಕುಳಿತಿರುವುದನ್ನು ಸಿಇಒ ನೋಡಿದರು, ಅದು ಅವರು ನಿಜವಾದ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದಾರೆ ಎಂದು ನಂಬಿದ್ದಾರೆ.
ಮಾದಕ ದ್ರವ್ಯ ದಂಧೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಸಿಇಒ ವಿವರಿಸಲು ಪ್ರಯತ್ನಿಸಿದಾಗಲೂ, ವಂಚಕರು ತಮ್ಮ ಆಧಾರ್ ವಿವರಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಯನ್ನು ರಚಿಸಲಾಗಿದೆ ಮತ್ತು ಆ ಖಾತೆಯಿಂದ ಹಣ ವರ್ಗಾವಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ವಂಚಕರು ತಮ್ಮಿಬ್ಬರ ನಡುವಿನ ಸಂಭಾಷಣೆಯನ್ನು ಗೌಪ್ಯವಾಗಿಡಲು ಹೇಳಿದರು ಮತ್ತು ಅವನ ಚಲನವಲನಗಳನ್ನು ಪತ್ತೆಹಚ್ಚಲು "ಸ್ಲೀಪರ್ ಸೆಲ್‌ಗಳನ್ನು" ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ನಂತರ, ಅವರು ತೊಂದರೆಯಿಂದ ಹೊರಬರಲು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರ ಖಾತೆಯಿಂದ ಎಲ್ಲಾ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವರ್ಗಾಯಿಸಲು ಕೇಳಿದರು.
ಫೆಬ್ರವರಿ 7-14ರ ನಡುವೆ ಸಿಇಒ ಅವರು ಎಂಟು ಖಾತೆಗಳಿಗೆ 30 ಲಕ್ಷ, 20 ಲಕ್ಷ, 10 ಲಕ್ಷ, 50 ಲಕ್ಷ, 30 ಲಕ್ಷ, 30 ಲಕ್ಷ, 50 ಲಕ್ಷ, 5 ಲಕ್ಷ ರೂಪಾಯಿಗಳಂತೆ ಅವರು ಒಟ್ಟು 2.3 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದ ನಂತರ, ಸ್ಕೈಪ್ ಕರೆಗಳು ನಿಂತುಹೋಗಿವೆ ಮತ್ತು ಅವರು ವಂಚನೆಗೊಳಗಾಗಿರುವುದನ್ನು ಅರಿತುಕೊಂಡು ಫೆಬ್ರವರಿ 16 ರಂದು ಪೊಲೀಸರಿಗೆ ದೂರು ನೀಡಿದ್ದಾರೆ.












Click it and Unblock the Notifications